ಶಿವಮೊಗ್ಗ : ಕರ್ನಾಟಕ ವಿಧಾನ ಪರಿಷತ್ ಚುನಾವಣೆ – 2024 ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿರುವ ಬಿಜೆಪಿಯ ಮಾಜಿಶಾಸಕ ಕೆ. ರಘುಪತಿ ಭಟ್ ಅವರು ಮೇ. 22ರಂದು ಹಿಂದು ಪರ ಹೋರಾಟದಲ್ಲಿ ಹತ್ಯಾಗೀಡಾದ ಹಿಂದೂ ಮುಖಂಡ ದಿ. ಹರ್ಷ ಮನೆಗೆ ಮೇ ಭೇಟಿ ನೀಡಿ ನಮನ ಸಲ್ಲಿಸಿದರು.


ಹರ್ಷ ತಂದೆ ನಾಗರಾಜ್, ತಾಯಿ ಪದ್ಮ, ಅಕ್ಕ ಅಶ್ವಿನಿ, ರಜನಿ ಅವರಲ್ಲಿ ಮಾತನಾಡಿ ಉಭಯ ಕುಶಲೋಪರಿ ವಿಚಾರಿಸಿ ಹಿಂದುತ್ವಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹರ್ಷ ಕುಟುಂಬದ ಜೊತೆ ಸದಾ ಇರುತ್ತವೆ ಎಂಬ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಹಿಂದೂ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.


























