ಹಿಂದುಳಿದವರ ಪರ ನಿಲ್ಲಬೇಕಾಗಿದ್ದ ಮೈಾಲಿ ಮೂಲ ಕಾಂಗ್ರೆಸ್ಸಿಗರನ್ನು ಬಡಿದೆಬ್ಬಿಸಿದ್ದೇಕೆ…?
ಕಟ್ಟಾ ಕಾಂಗ್ರೆಸ್ಸಿಗ ವೀರಪ್ಪ ಮೈಾಲಿ , ತನಗೆ ರಾಜಕೀಯಕ್ಕೆ ಪ್ರವೇಶಾವಕಾಶ ಕೊಟ್ಟಿದ್ದ ಡಿ. ದೇವರಾಜ ಅರಸು ಅವರನ್ನೂ ಬಿಟ್ಟು ಇಂದಿರಾ ಗಾಂಧಿ ಜೊತೆಗೆನೆ ಮುಂದುವರಿಯುತ್ತ ಬಂದು ಮುಖ್ಯಮಂತ್ರಿ ಪದವಿ ಸಹಿತ ಕೇಂದ್ರದಲ್ಲೂ ಪ್ರಧಾನಿ ಮನಮೋಹನ ಸಿಂಗ್ ಅವರ ಮೆಚ್ಚುಗೆ ಪಡೆಯುವಲ್ಲಿವರೆಗೆ ತಲುಪಿದ ಚಾಣಾಕ್ಷ ರಾಜಕಾರಣಿ. ಆಡಳಿತಾತ್ಮಕವಾಗಿ ಪ್ರಬುದ್ಧ ವಿಚಾರಗಳನ್ನು ಹೊಂದಿರುವ ಮುತ್ಸದ್ದಿಯೂ ಹೌದು. ಅವರ ಆಡಳಿತ ಸುಧಾರಣಾ ಯೋಜನೆಯನ್ನು ಕೇಂದ್ರವೂ ಸ್ವಾಗತಿಸಿತ್ತು ಕೂಡ. ಇನ್ನು CET ,NEET ಏನಿದ್ದರೂ ಅದು ಅವರ ನನಸಾದ ಕನಸು.
ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರಕಾರವಿದ್ದಾಗಲೂ ಶಾಸಕನಾಗಿರುತ್ತಿದ್ದ ಮೈಾಲಿ ಭವಿಷ್ಯಕ್ಕೆ ರಾಜ್ಯದಲ್ಲಿ ತಾನು ಪಡೆಯಬೇಕಾದ ಉನ್ನತ ಸ್ಥಾನಮಾನದ ಬಗ್ಯೆ ಒಟ್ಟಾಗಿಯೇ ಯೋಚಿಸುತ್ತ , ಹಿರಿಯ ರಾಜಕಾರಣಿಗಳ ಓಲೈಕೆ ಮಾಡುತ್ತ ಬಂದವರು.
ಸಿದ್ಧರಾಮಯ್ಯನವರು ತನ್ನ ಮೊಟ್ಟೆಗೆ ಕಾಂಗ್ರೆಸ್ ಗೂಡಿನಲ್ಲಿ ಕಾವು ಕೊಡುವುದಕ್ಕೆ ಸುತರಾಂ ಇಷ್ಟಪಡದವರಲ್ಲಿ ವೀರಪ್ಪ ಮೈಾಲಿಯೂ ಒಬ್ಬ.
ಸಿದ್ಧರಾಮಯ್ಯನವರದ್ದು ಜನತಾ ಪರಿವಾರದೊಳಗಿನ ಸಮಾಜವಾದಿ ಚಿಂತನೆಯಾಗಿದ್ದರೂ , ಇಂದಿರಾ ಕುಟುಂಬವನ್ನು ಟೀಕಿಸುತ್ತಿದ್ದ ವರೇ ಆದರೂ, ಹೆಚ್ ಜಿ ಗೇವೇಗೌಡರ ಪಕ್ಷದಿಂದ ಹೊರಬಂದಾಗ ಸಿಕ್ಕಿದ ಸಾಮೂಹಿಕ ಬೆಂಬಲ ಅವರನ್ನು ಕಾಂಗ್ರೆಸ್ ಸೆಳೆದುಕೊಳ್ಳುವುದಕ್ಕೆ ಸಹಕಾರವಾಯಿತು. ನಂತರ ಕಾಂಗ್ರೆಸ್ ಪಕ್ಷದ ಬ್ಯಾನರಿನಡಿಯಲ್ಲಿ ಸಿದ್ಧು ಮಾಸ್ ಲೀಡರಾಗಿ ಚಿಮ್ಮಿದರೇ ಹೊರತು ಅದಕ್ಕೆ ಮೊದಲು ಹೆಚ್. ಡಿ. ದೇವೇಗೌಡರೊಡನೆ “ಅಪ್ಪಣೆಯ ಮೇರೆಗೆ “ಒಪ್ಪಿಕೊಳ್ಳುವುದಷ್ಟೇ ಆಗಿತ್ತು.
ಮಂತ್ರಿ ರಾಜಣ್ಣ ಬಹಿರಂಗವಾಗಿ ಮಾತಾಡಿದ್ದಾಗಲಿ,ಸತೀಶ್ ಜಾರಕಿಹೊಳಿ ಮಾತಾಡಿದ್ದಾಗಲಿ ,ಮಹದೇವ ಪ್ರಸಾದ್ ಹೇಳಿದ್ದಾಗಲಿ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಲಿಲ್ಲ ಕಾರಣವೇನೆಂದರೆ ಅಂಥ ಕೆಲವರು ಮಾತಾಡುತ್ತಿರುವುದೆಲ್ಲವೂ ಸಿದ್ಧರಾಮಯ್ಯನವರ ಅಣತಿಯಂತೆ ಎನ್ನುವುದು ಎಲ್ಲರಿಗೂ ತಿಳಿದಿರುವುದರಿಂದ.
ಇನ್ನು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಅರೆಮನಸ್ಸಿನಿಂದಲೇ ಮಾತಾಡುವುದು. ತಾನು ಮುಂದುವರಿಯುದು ಬೇಡವಾದರೆ,ಎಸ್ ಸಿ ಗೇ ಪದವಿ ಕೊಡಬೇಕೆಂದಾದರೆ ಡಾ. ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದು ಸಿದ್ಧರಾಮಯ್ಯ ಬಾಣ ಬಿಟ್ಟಿರುವುದು ಹೃದಯಪೂರ್ವಕವಾಗಿಯೇನೂ ಅಲ್ಲ. ಮಲ್ಲಿಕಾರ್ಜುನ ಖರ್ಗೆ ಬರಬಾರದು ಎಂದೇ ಈ ಗೃಹ ಮಂತ್ರಿಯನ್ನು ಸಿದ್ಧರಾಮಯ್ಯನವರು ಗುರಾಣಿಯನ್ನಾಗಿ ಬಳಸಿಕೊಂಡದ್ದು !ಎಷ್ಟಾದರೂ ಸಿದ್ಧರಾಮಯ್ಯನವರು ದೇವೇಗೌಡರ ಗರಡಿಯ ಶಿಷ್ಯ ಅನ್ನುವುದು ಸತ್ಯ ತಾನೆ? ಗೌಡರ ತಂತ್ರ ಮಂತ್ರ ಎಲ್ಲವೂ ಸಿದ್ಧರಾಮಯ್ಯನ ಚೀಲದಲ್ಲಿದೆ.

ಮೈಾಲಿಯವರಿಗೆ ಡಿಕೆಶಿವಕುಮಾರ್ ಕೂಡಾ ಹೇಳಿಕೊಳ್ಳುವಂಥ ಆಪ್ತನೇನನಲ್ಲ.
ರಾಜ್ಯದ ಮೂಲ ಕಾಂಗ್ರೆಸ್ಸಿಗರನ್ನು ಕೆರಳಿಸಿ,ಎಬ್ಬಿಸುವ ಕೆಲಸಕ್ಕೆ ಕೈಹಾಕಿದ್ದಾರೆ ಮೈಾಲಿ. ಸಿದ್ಧು ಬೆಂಬಲಿಗರನ್ನು ಕೆರಳಿಸುವುದಕ್ಕಾಗಿಯೆ ಮೈಾಲಿಯವರು ,ಡಿ. ಕೆ. ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ, ಯಾರಿಂದಲೂ ಬದಲಾಯಿಸುವುದಕ್ಕಾಗುವುದಿಲ್ಲ, ಮುಖ್ಯಮಂತ್ರಿಯಾಗುವವರಾಗಿರುವುದರಿಂದ ಅದರ ಬಗ್ಯೆ ಪ್ರತಿಕ್ರಿಯೆ ಕೊಡಕೂಡದು ಎಂದು ಸಲಹೆ ಕೂಡಾ ಕಾರ್ಕಳದ ಸಾರ್ವಜನಿಕ ವೇದಿಕೆಯಲ್ಲಿ ಹೇಳಿದ್ದಾರೆ.
ಡಿ. ಕೆ. ಶಿವಕುಮಾರ್ ಅವರ ರಾಜಕೀಯ ಶಕ್ತಿ ಮತ್ತು ಸಂಘಟನಾ ಸಾಮರ್ಥ್ಯ ಏನೆಂತ ಗೊತ್ತಿದ್ದರಿಂದಲೇ ಮತ್ತು , ಮುಂದೆಗೆ ಮುಖ್ಯಮಂತ್ರಿ ಆಗಲಿರುವ ನಾಯಕನೂ ಹೌದು ಎಂದೆಲ್ಲ ಮನದಟ್ಟು ಮಾಡಿಕೊಂಡೇ ಮೈಾಲಿ ಬೆಂಬಲ ಹಾರೈಸಿ ಪಟಾಕಿ ಸಿಡಿಸಿದ್ದು. ಮೇಲೆ ಹೈಕಮಾಂಡ್ ಕೂಡಾ ಮೈಾಲಿಗೆ ಅಷ್ಟೊಂದು ಹತ್ತಿರವಾಗಿಲ್ಲವಾದರೂ ಪಕ್ಷದ ಹಿರಿತನದ ಮೇಲಿನ ಗೌರವ ಇದ್ದೇ ಇದೆ.
ಬಿಸಾಡಿದ ಕಲ್ಲು ನೋಟವಾಗಿ ಮಾವಿನ ಹಣ್ಣು ಫಲಿಸಿತು ಅಂತಾದರೆ, ಡಿ. ಕೆ. ಶಿಯನ್ನು ಬಹಿರಂಗವಾಗಿ ಬೆಂಬಲಿಸಿದವನು ತಾನು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವೆನು ಎನ್ನುವ ಮನಸ್ತಿತಿಯೂ ಮೈಾಲಿಯವರದ್ದಾಗಿತ್ತು ಅನ್ನಬೇಕು.
ಆ ಲೆಕ್ಕಾಚಾರವನ್ನು ಮೈಾಲಿ ಹಾಕಿಕೊಂಡೇ ಮಾತಾಡಿರಬಹುದು.
ಡಿ ಕೆ ಶಿವಕುಮಾರ್ ಅವರು ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡದ್ದರ ನಡುಕಕ್ಕಿಂತಲೂ ಹೈಕಮಾಂಡಿಗೆ ಜಾಸ್ತಿ ಸಂಚಲನ ಮೂಡಿಸಿದ್ದು ಮೈಾಲಿಯವರ ಪಬ್ಲಿಕ್ ಸ್ಪೀಚ್!
ಎಐಸಿಸಿ ಒತ್ತಾಯಕ್ಕೆ ಮೈಾಲಿಯವರು ಇನ್ನೇನು ಬದಲಾಯಿಸಿ ಹೇಳಿಕೆ ನೀಡಿದರೂ ಅದಕ್ಕೆ ಮಾನ್ಯತೆಯಿಲ್ಲ.
ಮೈಾಲಿಯವರ ಹೇಳಿಕೆ ಸಿದ್ಧರಾಮಯ್ಯ ಬಣದವರಿಗೆ ಅಸಮಾಧಾನ ತಂದಿದ್ದರೂ ಡಿ ಕೆ ಶಿವಕುಮಾರ್ ಬಣಕ್ಕಂತೂ ಬಹಳ ಖುಷಿ ಕೊಟ್ಟಿದೆ.
ಎಲ್ಲವೂ ಒಪ್ಪಂದವಾಗಿದೆ, ಇನ್ನೇನು ಬದಲಾವಣೆ ಇಲ್ಲ ಎಂದಿರುವುದರಲ್ಲಿ ಕೂಡಾ ಎಷ್ಟು #ಸತ್ಯ ಎಷ್ಟು #ಸುಳ್ಳು ಇದೆ ಎನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಗಣನೆಗೆ ಬರುವುದಿಲ್ಲ.
ಡಿ. ಕೆ. ಶಿವಕುಮಾರ್ ಮನಸ್ಸು ಮಾಡಿದರೆ ಯಾವ ತಾಂಡವ ನೃತ್ಯಕ್ಕೂ ಹಿಂದೆ ನಿಲ್ಲುವುದಿಲ್ಲ. ವಿರೋಧಿಗಳ ಬಾಯಿ ಮುಚ್ಚಿಸುವುದಕ್ಕೆ ಏನೆಲ್ಲ ಬೆದರಿಕೆ ತಂತ್ರಗಳನ್ನೂ ಮಾಡಬಲ್ಲ ಅನ್ನುವುದಕ್ಕೆ ಅಮಿತ್ ಶಾ ಜೊತೆಗಿನ ಸಂಪರ್ಕ ಮತ್ತು ವೇದಿಕೆಯಲ್ಲಿ ಪಾಲ್ಗೊಂಡ ಘಟನೆಗಳೇ ಸಾಕ್ಷಿ.
ಮಹದೇವಪ್ಪ,ರಾಜಣ್ಣ,ಪರಮೇಶ್ವರ್,ಸತೀಶ್ ಜಾರಕಿಹೊಳಿ ಎಲ್ಲರನ್ನೂ ಎಲ್ಲಿ ಕಟ್ಟಿಹಾಕಬೇಕು ಎನ್ನುವುದಕ್ಕೂ ಡಿ ಕೆ ಶಿ ಸುಮ್ಮನಿರಲಾರರು. ಈಗಾಗಲೇ ಆ ಎಲ್ಲರೂ ಅವರವರ ಬಾಯಿಗೆ ಹೊಲಿಗೆ ಹಾಕ್ಕೊಂಡಾಗಿದೆ. ಸಿದ್ಧರಾಮಯ್ಯನವರಿಗೂ ಪರಿಸ್ಥಿತಿ ಮತ್ತು ಆವಾಂತರ ಅರ್ಥವಾಗಿದೆ.
ಮುಂದೆ ಚುನಾವಣೆ ನಡೆದಾಗ ಸಿದ್ಧು ಬಳಗಕ್ಕೆ ಹೆಚ್ಚು ಸೀಟು ಗೆಲ್ಲಿಸಲಿಕ್ಕೆ ಸಾಧ್ಯವಿಲ್ಲ . ಮಲ್ಲಿಕಾರ್ಜುನ ಖರ್ಗೆಗೂ ಬೇರೆ ಒಬ್ಬನೇ ಒಬ್ಬನನ್ನು ಗೆಲ್ಲಿಸುವ ತಾಕತ್ತಿಲ್ಲ. ಹಾಗಿರುತ್ತಿದ್ದರೆ ಪ್ರಿಯಾಂಕ ಖರ್ಗೆ ಗುರುಮಿಠ್ಕಲ್ ಕ್ಷೇತ್ರ ಬಿಟ್ಟು ಬೇರೆ ಮೀಸಲಾತಿ ಕ್ಷೇತ್ರ ಯಾಕೆ ಹುಡುಕಬೇಕಾಗಿತ್ತು? ಗಂಭೀರ ಪ್ರಶ್ನೆ!
ತನ್ನಲ್ಲಿನ ವಯೋ ಸಹಜ ಆಯಾಸಗಳನ್ನು ಅರ್ಥಮಾಡಿಕೊಳ್ಳದೆ ಸಿದ್ಧರಾಮಯ್ಯನವರು ಒಟ್ಟಾರೆ ದುಡುಕಿ ಮಾತಾಡುತ್ತಿರುವುದರಿಂದ ,ವೈಮನಸ್ಸಿನ ನಿರ್ಧಾರಗಳನ್ನು ಪ್ರಕಟಿಸುವುದರಿಂದ ರಾಜಕೀಯ ಆಶ್ರಯ ಕೊಟ್ಟ ಪಕ್ಷವೊಂದನ್ನು ಛಿದ್ರಮಾಡಿದ ಅಪವಾದಕ್ಕೆ ಸಿಕ್ಕಿದರೆ ಅದು ಸಿದ್ಧರಾಮಯ್ಯನವರ ಸುದೀರ್ಘ ರಾಜಕೀಯ ಚರಿತ್ರೆಗೆ ದೊಡ್ಡ ಕಪ್ಪು ಚುಕ್ಕೆ.
ಸದಾ ಹಿಂದುಳಿದ ವರ್ಗದವರನ್ನು ಬೆಂಬಲಿಸುತ್ತ ಬರುತ್ತಿದ್ದ ವೀರಪ್ಪ ಮೈಾಲಿಯವರು ತನ್ನ ವೈಯಕ್ತಿಕ ತತ್ವಸಿದ್ಧಾಂತವನ್ಮು ಬದಿಗೊತ್ತಿ ಒಕ್ಕಲಿಗ ಸಮುದಾಯದ ಡಿ. ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಬೆಂಬಲಿಸಿದ್ದೇ ಮೈಾಲಿ ರಾಜಕೀಯ ಚಾಣಾಕ್ಷತನ!
-ವಿ. ಕೆ. ವಾಲ್ಪಾಡಿ
ಚಿತ್ರ: ಎಂ. ವೀರಪ್ಪ ಮೈಾಲಿ



































