ಹಿಂದುಪರ ಸಂಘಟನೆಯ ಪ್ರಮುಖನ ಸಹೋದರ ಕೊಲೆಯತ್ನ

ಗಾಯಾಳು ಸಂತೋಷ್
ಕಾರ್ಕಳ : ರಬ್ಬರ್ ತೋಟದ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ದುಷ್ಕರ್ಮಿಗಳಿಬ್ಬರು ಕೃಷಿಕರೊಬ್ಬರನ್ನು ತಲವಾರುನಿಂದ ಕಡಿದು ಕೊಲೆಗೆ ಪ್ರಯತ್ನಿಸಿದ ಘಟನೆ ಮೂಡುಬಿದಿರೆ ದರೆಗುಡ್ಡೆ ಎಂಬಲ್ಲಿ ನಡೆದಿದೆ.

ಗಾಯಾಳು ಸಂತೋಷ್
ದರೆಗುಡ್ಡೆ ಗ್ರಾಮದ ರಬ್ಬರ್ ತೋಟದ ಸಮೀಪ ಎ.
5 ರಂದು ಸಂಜೆ ಈ ಘಟನೆ ನಡೆದಿದ್ದು, ದರೆಗುಡ್ಡೆಯ ನಿವಾಸಿ ಸಂತೋಷ್ ಘಟನೆಯಲ್ಲಿ ಜೀವಾಪಾಯದಿಂದ ಪರಾಗಿದ್ದು, ಕಾರ್ಕಳದ ಸ್ಪಂದನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದರೆಗುಡ್ಡೆ ಸಮೀಪದ ಆನೆಗುಡ್ಡೆಯ ಗಣೇಶ್ ಹಾಗೂ ಆತನ ಮಗ ಅಕ್ಷಿತ್ ಪ್ರಕರಣದ ಆರೋಪಿಗಳು.


ಸಂತೋಷ್ ಅವರು ಶನಿವಾರ ಸಾಯಂಕಾಲ ತನ್ನ ಆಕ್ಟಿವಾದಲ್ಲಿ ಮನೆಗೆ ಬರುತ್ತಿರುವಾಗ ರಿಕ್ಷಾದಲ್ಲಿ ಬಂದ ಆರೋಪಿಗಳು ಅವರನ್ನು ಅಡ್ಡಗಟ್ಟಿ ತಲವಾರಿನಿಂದ ದಾಳಿ ನಡೆಸಿ ಕೊಲೆಯತ್ನ ನಡೆಸಿದ್ದಾರೆ. ಪರಿಣಾಮವಾಗಿ ಸಂತೋಷ್ ಅವರ ಕಾಲಿಗೆ ತಲವಾರು ಏಟು ಬಲವಾಗಿ ಬಿದ್ದಿದೆ.
ಗಾಯಾಳುವಿನ ಸಹೋದರ ಹಿಂದು ಪರ ಸಂಘಟನೆ ಮುಖಂಡ

ಗಾಯಾಳುವಿನ ಅಣ್ಣ ದರೆಗುಡ್ಡೆ ಸಮಿತ್ ರಾಜ್
ಘಟನೆಯಲ್ಲಿ ಗಾಯಗೊಂಡಿರುವ ಸಂತೋಷ್ ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ. ಕೃಷಿಯಲ್ಲಿ ತೊಡಗಿಸಿ ಬದುಕು ನಿರ್ವಹಿಸುತ್ತಿದ್ದರು.
ಸಂತೋಷ್ ನ ಅಣ್ಣ ದರೆಗುಡ್ಡೆ ಸಮಿತ್ ರಾಜ್ ಹಿಂದೂ ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಹ ಸಂಯೋಜಕರಾಗಿದ್ದಾರೆ. ಹಿಂದು ಪರ ಹೋರಾಟದಲ್ಲಿ ಮುಂಚೂಣೆಯಲ್ಲಿ ಗುರುತಿಸಿಕೊಂಡಿದ್ದಾರೆ.
ವೈಯಕ್ತಿಕ ಕಾರಣದಿಂದಾಗಿ ಈ ಘಟನೆ ನಡೆದಿದೆ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಮೂಡುಬಿದಿರೆ ಇನ್ ಸೆಕ್ಟರ್ ಸಂದೇಶ್ ಪಿ.ಜಿ.ತನಿಖೆ ನಡೆಸುತ್ತಿದ್ದಾರೆ.






































