ಹಾಸನ ಮಹಾ ವಿಡಿಯೋ ಪ್ರಕರಣ: ಬಿಜೆಪಿ ಮುಖಂಡರ ಮನೆ ಹಾಗೂ ವ್ಯವಹಾರ ಕೇಂದ್ರಗಳ ಮೇಲೆ ಎಸ್ ಐ ಟಿ ಕಾರ್ಯಚರಣೆ

Picture of RB NEWS

RB NEWS

Bureau Report

ಹಾಸನ ಮಹಾ ವಿಡಿಯೋ ಪ್ರಕರಣ: ಬಿಜೆಪಿ ಮುಖಂಡರ ಮನೆ ಹಾಗೂ ವ್ಯವಹಾರ ಕೇಂದ್ರಗಳ ಮೇಲೆ ಎಸ್ ಐ ಟಿ ಕಾರ್ಯಚರಣೆ

ಹಾಸನ : ಹಾಸನದ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರ ಆಪ್ತರ ಮನೆ, ಕಚೇರಿ ಸೇರಿ 6 ಕಡೆ ಎಸ್​ಐಟಿ ಅಧಿಕಾರಿಗಳು ಹಠಾತ್ ಕಾರ್ಯಾಚರಣೆ ನಡೆಸಿ ಮಹತ್ವದ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಪ್ರೀತಂಗೌಡ ಆಪ್ತ ಉದ್ಯಮಿ ಶರತ್ ಅವರ ಒಡೆತನದ ಬಿ ಎಂ ರಸ್ತೆಯ ಬಾರ್, ಲಾಡ್ಜ್​ ಹಾಗೂ ಗೌರಿಕೊಪ್ಪಲಿನಲ್ಲಿರುವ ನಿವಾಸದ ಮೇಲೆ ಎಸ್ ಐ ಟಿ ದಾಳಿ ನಡೆಸಿದೆ.ಲೋಕಸಭೆಗೆ ಬಿಜೆಪಿ ಟಿಕೆಟ್​ ಆಕಾಂಕ್ಷಿ ಆಗಿದ್ದ ಕಿರಣ್ ಎಂಬುವವರ ಹೊಟೇಲ್, ಬಿಜೆಪಿ ಮುಖಂಡ ಪುನಿತ್ ಅವರ ವಿವೇಕ ನಗರದ ಮನೆ, ವಕೀಲ ದೇವರಾಜೇಗೌಡ ಅವರ ಹಾಸನದ ರವೀಂದ್ರ ನಗರದ ಮನೆ ಹಾಗೂ ಹೊಳೆನರಸೀಪುರದ ಕಛೇರಿ ಸೇರಿ ಒಟ್ಟು ಆರು ಕಡೆ ಎಸ್‌ಐಟಿ ದಾಳಿ ನಡೆಸಿದೆ.

ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ ಸಂಬಂಧ ಎಸ್ ಐ ಟಿ ಪ್ರತ್ಯೇಕ ತಂಡ ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಹಾಸನಕ್ಕೆ ಅಗಮಿಸಿದೆ.


ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top