ಹಸುಗಳ‌ ಕೆಚ್ಚಲು ಕೊಯ್ದು ಅನಾಗರಿಕ, ಕ್ರೌರ್ಯ ಮೆರೆದಿರುವ ಘಟನೆ ತೀವ್ರ ವೇದನೆ ಸೃಷ್ಟಿಸಿದೆ- ಶಾಸಕ ವಿ.ಸುನೀಲ್ ಕುಮಾರ್

Picture of RB NEWS

RB NEWS

Bureau Report

ಕಾರ್ಕಳ : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ‌ ಕೆಚ್ಚಲು ಕೊಯ್ದು ಅನಾಗರಿಕ, ಕ್ರೌರ್ಯ ಮೆರೆದಿರುವ ಘಟನೆ ತೀವ್ರ ವೇದನೆ ಸೃಷ್ಟಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ? ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ಗಾವೋ ವಿಶ್ವಸ್ಯ ಮಾತರಃ ಎಂದು ನಂಬಿದ ನಾಡು ನಮ್ಮದು. ಗೋಮಾತೆ ಎಂದೇ ಕರೆಯಲಾಗುತ್ತದೆ. ಅಂಥ ತಾಯಿಯ ಕೆಚ್ಚಲನ್ನೇ ಕತ್ತರಿಸುವಂಥ ವಿಕೃತ ಸ್ಥಿತಿಗೆ ಸಮಾಜ ಜಾರಿದೆ ಎಂದರೆ ಎಲ್ಲರೂ ನಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು. ಆದರೆ ಈ ಸರ್ಕಾರದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಸನ್ನಿವೇಶ ನಿರ್ಮಾಣವಾಗಿದ್ದು ಕಾನೂನಿನ ಭಯ ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ.

ಈ ಘಟನೆಗೆ ಕಾರಣವಾದ ವ್ಯಕ್ತಿಗಳು ಯಾರೇ ಆದರೂ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವೋಟ್ ಬ್ಯಾಂಕ್ ರಾಜಕಾರಣ ಕರ್ನಾಟಕದ ನೆಮ್ಮದಿ ಕಳೆಯುತ್ತಿದೆ. ಆರೋಪಿಗಳು ಯಾರ ಬಾಂಧವರೇ ಆದರೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top