ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ ನಲ್ಲೂರು ಹಿರಿಯ ಪ್ರಾ. ಶಾಲೆಗೆ ಪ್ರಥಮ ಪುರಸ್ಕಾರ

ಕಾರ್ಕಳ: ನಲ್ಲೂರು ಹಿರಿಯ ಪ್ರಾಥಮಿಕ ಶಾಲೆಗೆ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಹಾಗೂ ಅಭ್ಯುದಯ ಪ್ರಶಸ್ತಿ-೨೦೨೪ ಲಭಿಸಿದೆ.
ಜು. ೨೭ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಅವರು ಆಯೋಜಿಸಿ ಕಾಐðಕ್ರಮದಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂಧನ್ ಸಾಯಿ ಅವರು ಪ್ರಶಸ್ತಿ ಪ್ರಧಾನಿಸಿದರು.
ಶಾಲಾ ಮುಖ್ಯೋಪಾಧ್ಯಯ ನಾಗೇಶ್ ಅವರು ಪ್ರಶಸ್ತಿ ಸ್ವೀಕರಿಸಿದರು.
ರಾಜ್ಯಮಟ್ಟದಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ, ವಿಶೇಷ ಪುರಸ್ಕಾರದೊಂದಿಗೆ ರೂ.೨೫ ಸಾವಿರ ನಗದು, ಪ್ರಶಸ್ತಿ ಫಲಕ ಲಭಿಸಿದೆ.
ಕಾರ್ಕಳದ ನಾಲ್ಕು ಶಿಕ್ಷಣ ಸಂಸ್ಥೆಗಳು…
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಾಲ್ಕು ಶಿಕ್ಷಣ ಸಂಸ್ಥೆಗಳಾದ ನಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜು, ಪೆವಾಜೆ ಸರಕಾರಿ ಪೌಢಶಾಲೆ ನಲ್ಲೂರು ಸರಕಾರಿ ಪ್ರೌಢ ಶಾಲೆ ಆಯ್ಕೆಯಾಗಿರುತ್ತದೆ.
ಒಟ್ಟು ೧೨೫ ಶಾಲೆಗಳನ್ನು ರಾಜ್ಯ ಮಟ್ಟದಲ್ಲಿ ಆಯ್ಕೆಗೊಳಿಸಲಾಗಿದ್ದು, ೧ ಪೌಢಶಾಲೆ,೧ ಹಿರಿಯ ಪ್ರಾಥಮಿಕ ಶಾಲೆ , ೧ ಕಿರಿಯ ಪ್ರಾಥಮಿಕ ಶಾಲೆಗೆ ವಿಶೇಷ ರಾಜ್ಯ ಮಟ್ಟದ ಪುರಸ್ಕಾರ ನೀಡಲಾಗುತ್ತದೆ. ಉಳಿದೆಲ್ಲಾ ಶಾಲೆಗಳಿಗೆ ರೂ. ೧೦ ಸಾವಿರ ಮತ್ತು ಪ್ರಶಸ್ತಿ ನೀಡಲಾಗುತ್ತಿದೆ.






































