ಹಳ್ಳಿ ಶಾಲೆಯಲ್ಲಿ ಕಲಿತವ ಎನ್ನುವ ಕೀಳರಿಮೆ ಸಲ್ಲದು – ಶಾಸಕ ರಾಜೇಶ್ ನಾಯಕ್

Picture of RB NEWS

RB NEWS

Bureau Report

ಬಂಟ್ವಾಳ : ಹಳ್ಳಿ ಶಾಲೆಯಲ್ಲಿ ಕಲಿತವ ಎನ್ನುವ ಕೀಳರಿಮೆ ಬೇಡ, ಜೇವನದಲ್ಲಿ ನಿಜವಾಗಿ ಯಶಸ್ಸು ಕಂಡವನು ಹಳ್ಳಿ ಶಾಲೆಯಲ್ಲಿ ಕಲಿತವನು ಎಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಹೇಳಿದರು.

ಅವರು ಮಂಗಳವಾರ ಕರ್ನಾಟಕ ಸರಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಬಾಲವಿಕಾಸ ಸಮಿತಿ, ಗೋಳ್ತಮಜಲ್ ಗ್ರಾಮ ಪಂಚಾಯತ್, ಸ್ತ್ರೀಶಕ್ತಿ ಗುಂಪು ಕಲ್ಲಡ್ಕ ಶಾಲೆ ಅಂಗನವಾಡಿ ಕೇಂದ್ರ,ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂಗನವಾಡಿ ಕೇಂದ್ರ ಕಲ್ಲಡ್ಕ ಶಾಲೆ ಇದರ ನೂತನ ಅಂಗನವಾಡಿ ಕಟ್ಟಡ ಅಂಗನವಾಡಿ ಪುಟಾಣಿ ಮಕ್ಕಳ ಜೊತೆ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾನ್ಯ ಶಾಸಕರನ್ನು ಅಂಗನವಾಡಿ ದತ್ತು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಕಟ್ಟಡ ನಿರ್ಮಿಸಿದ ಗುತ್ತಿಗೆದಾರ ಪದ್ಮನಾಭ ಗೌಡ ಮೈರಾ, ಹಾಗೂ ಅಂಗನವಾಡಿ ಶಿಕ್ಷಕಿ ಯಮನಾರವರನ್ನು ಗೌರವಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top