ಹಲಸಿನ ಮರವಿದು ಉಳಿದರೆ ಲೇಸು

Picture of RB NEWS

RB NEWS

Bureau Report

ಹಪ್ಪಳ ನಡುವೆ ಹಲ್ಲುಗಳು!
ಹಳದಿ ಬಣ್ಣದ ಈ ಹಪ್ಪಳವು!
ಹಪ್ಪಳ ಕರಿದು ತಿಂದರೆ ಆಗ! ನಮ್ಮ
ಹಲ್ಲು ನಾಲಗೆಗೆ ನಿಲ್ಲದ ಕೆಲಸವು!! ಪಲ್ಲವಿ!!

ಹಲಸಿನ ಹಪ್ಪಳ ಕಥೆ ಇದು!
ಅದು ಸವಿದವರಿಗೆ ನೆನಪಾಗುವುದು!
ಶುದ್ಧ ತೆಂಗಿನ ಎಣ್ಣೆಯಲಿ ಕರಿದರೆ ಆಗ!
ಸಮಯ ಕಳೆದು ಹೋದುದು ಗೊತ್ತಾಗದು!! ಅನು ಪಲ್ಲವಿ!!

ಕೈ ಕೆಸರಾದರೆ ಬಾಯಿ ಮೊಸರು!
ಗಾದೆಯ ಮಾತಿದು ಗೊತ್ತೇನು!
ಮೇಣವು ತುಂಬಿದ ಹಣ್ಣು ಇದು!
ಬಗೆದು ನೋಡಿದರೆ ಅದು ಸಿಹಿಜೇನು!! ೧!!

ಹಲಸಿನ ಮರಕೆ ನೀರೆರೆದವರನು!
ಜಗದೊಳಗೆ ಎಂದೂ ನಾ ಕಾಣೆನು!
ಬಲಿತು ನಿಂತ ಮರವ ಕಡಿಯದಿರಿ ಮೂರ್ಖರೆ !
ನೀಡುವುದದು ವರ್ಷ ವರ್ಷ ಸಿರಿಯನ್ನು!! ೨!!

ಹಲಸು ಎಂಬುದು ಭೂ ಗರ್ಭದಂತೆಯೇ!
ಅಗೆದರೆ ದೊರೆವುದು ಹಣ್ಣಿನ ಸಿರಿಯು!
ಬಣ್ಣ ಬಂಗಾರದ! ಈ ಹಣ್ಣಿನ ಸವಿಯು!
ತಣ್ಣನೆ ನಾಲಗೆಯಿಂದಲಿ! ಜೊಲ್ಲಿಳಿಸುವುದು!! ೩!!

ತಾನಾಗಿಯೇ ಬೆಳೆದ ಈ ಹಣ್ಣಿನಲಿ!
ಮೇಣವಿದೆ ಎಂದು ಅನ್ನುವಿರಲ್ಲ!
ಧೀನ ಜನರಿಗೆ ಈ ಹಣ್ಣು ಔತಣವು!
ದಿನವಿಡಿ ಸಂಭ್ರಮದ ಅಸಣವು ಎಲ್ಲಾ !! ೪!!

ಮೇಣದ ನಡುವೆ ಹಲಸಿನ ಸೋಳೆಗಳು!
ಸೋಳೆಗಳ ನಡುವೆ ಅಖಂಡ ಬೀಜಗಳು!
ಸೋಳೆ ಬೀಜಗಳ ಖಾದ್ಯಗಳಿಂದಲಿ!
ಬಲಿತು ನಿಲ್ಲುವುದು ಮಾಂಸ ಖಂಡಗಳು!! ೫!!

ಹಲಸಿನ ಹಪ್ಪಳ! ಹಲಸಿನ ಚಿಪ್ಸು!
ತೆಂಗಿನೆಣ್ಣೆಯಲಿ ಕರಿದರೆ! ನಾಲಗೆಗೆ ಟಿಪ್ಸು!
ಹಲಸಿನ ಸಾಟು! ಬಿಸಿಲಲಿ ಕಾದರೆ!
ವರ್ಷವಿಡೀ ಚಿಣ್ಣರಿಗಿದು! ಚಾಕಲೇಟು!! ೬!!

ಹಲಸಿನ ಉಪಯೋಗ ಹಲವಾರು!
ಮಳೆಗಾಲದಲಿ ತರಾತುರಿ ಖಾದ್ಯಗಳು!
ಹಲಸಿನ ಪದಾರ್ಥ! ಹಲಸಿನ ಪಾಯ್ಸಾ!
ಉಪ್ಪಿಗಾಕಿಟ್ಟ ಹಲಸು! ಆರೋಗ್ಯಕದು ಶ್ರೇಷ್ಠ!! ೭!!

ಮುಳ್ಳಿನ ಬಂಧನದೊಳಗಿನ! ಈ ಸಿರಿಯು!
ಕಲಿಯುಗ ದೇವನಿಗೆ!ಇದು ಪ್ರಿಯವು!
ಹಲಸಿನ ಮರದ! ಎಲೆಯೊಳಗಿನ ಗುಂಡವು!
ಚೌತಿ ಗಣಪನಿಗಿದು! ನೈವೇದ್ಯವು!! ೮!!

ಕಾಂತಾವರ ಶಿವಾನಂದ ಶೆಣೈ, ಕಾರ್ಕಳ.
ಜಂಗಮ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top