ಹಲಸಿನ ಮರವಿದು ಉಳಿದರೆ ಲೇಸು
ಹಪ್ಪಳ ನಡುವೆ ಹಲ್ಲುಗಳು!
ಹಳದಿ ಬಣ್ಣದ ಈ ಹಪ್ಪಳವು!
ಹಪ್ಪಳ ಕರಿದು ತಿಂದರೆ ಆಗ! ನಮ್ಮ
ಹಲ್ಲು ನಾಲಗೆಗೆ ನಿಲ್ಲದ ಕೆಲಸವು!! ಪಲ್ಲವಿ!!
ಹಲಸಿನ ಹಪ್ಪಳ ಕಥೆ ಇದು!
ಅದು ಸವಿದವರಿಗೆ ನೆನಪಾಗುವುದು!
ಶುದ್ಧ ತೆಂಗಿನ ಎಣ್ಣೆಯಲಿ ಕರಿದರೆ ಆಗ!
ಸಮಯ ಕಳೆದು ಹೋದುದು ಗೊತ್ತಾಗದು!! ಅನು ಪಲ್ಲವಿ!!
ಕೈ ಕೆಸರಾದರೆ ಬಾಯಿ ಮೊಸರು!
ಗಾದೆಯ ಮಾತಿದು ಗೊತ್ತೇನು!
ಮೇಣವು ತುಂಬಿದ ಹಣ್ಣು ಇದು!
ಬಗೆದು ನೋಡಿದರೆ ಅದು ಸಿಹಿಜೇನು!! ೧!!
ಹಲಸಿನ ಮರಕೆ ನೀರೆರೆದವರನು!
ಜಗದೊಳಗೆ ಎಂದೂ ನಾ ಕಾಣೆನು!
ಬಲಿತು ನಿಂತ ಮರವ ಕಡಿಯದಿರಿ ಮೂರ್ಖರೆ !
ನೀಡುವುದದು ವರ್ಷ ವರ್ಷ ಸಿರಿಯನ್ನು!! ೨!!
ಹಲಸು ಎಂಬುದು ಭೂ ಗರ್ಭದಂತೆಯೇ!
ಅಗೆದರೆ ದೊರೆವುದು ಹಣ್ಣಿನ ಸಿರಿಯು!
ಬಣ್ಣ ಬಂಗಾರದ! ಈ ಹಣ್ಣಿನ ಸವಿಯು!
ತಣ್ಣನೆ ನಾಲಗೆಯಿಂದಲಿ! ಜೊಲ್ಲಿಳಿಸುವುದು!! ೩!!
ತಾನಾಗಿಯೇ ಬೆಳೆದ ಈ ಹಣ್ಣಿನಲಿ!
ಮೇಣವಿದೆ ಎಂದು ಅನ್ನುವಿರಲ್ಲ!
ಧೀನ ಜನರಿಗೆ ಈ ಹಣ್ಣು ಔತಣವು!
ದಿನವಿಡಿ ಸಂಭ್ರಮದ ಅಸಣವು ಎಲ್ಲಾ !! ೪!!
ಮೇಣದ ನಡುವೆ ಹಲಸಿನ ಸೋಳೆಗಳು!
ಸೋಳೆಗಳ ನಡುವೆ ಅಖಂಡ ಬೀಜಗಳು!
ಸೋಳೆ ಬೀಜಗಳ ಖಾದ್ಯಗಳಿಂದಲಿ!
ಬಲಿತು ನಿಲ್ಲುವುದು ಮಾಂಸ ಖಂಡಗಳು!! ೫!!
ಹಲಸಿನ ಹಪ್ಪಳ! ಹಲಸಿನ ಚಿಪ್ಸು!
ತೆಂಗಿನೆಣ್ಣೆಯಲಿ ಕರಿದರೆ! ನಾಲಗೆಗೆ ಟಿಪ್ಸು!
ಹಲಸಿನ ಸಾಟು! ಬಿಸಿಲಲಿ ಕಾದರೆ!
ವರ್ಷವಿಡೀ ಚಿಣ್ಣರಿಗಿದು! ಚಾಕಲೇಟು!! ೬!!
ಹಲಸಿನ ಉಪಯೋಗ ಹಲವಾರು!
ಮಳೆಗಾಲದಲಿ ತರಾತುರಿ ಖಾದ್ಯಗಳು!
ಹಲಸಿನ ಪದಾರ್ಥ! ಹಲಸಿನ ಪಾಯ್ಸಾ!
ಉಪ್ಪಿಗಾಕಿಟ್ಟ ಹಲಸು! ಆರೋಗ್ಯಕದು ಶ್ರೇಷ್ಠ!! ೭!!
ಮುಳ್ಳಿನ ಬಂಧನದೊಳಗಿನ! ಈ ಸಿರಿಯು!
ಕಲಿಯುಗ ದೇವನಿಗೆ!ಇದು ಪ್ರಿಯವು!
ಹಲಸಿನ ಮರದ! ಎಲೆಯೊಳಗಿನ ಗುಂಡವು!
ಚೌತಿ ಗಣಪನಿಗಿದು! ನೈವೇದ್ಯವು!! ೮!!
ಪ್ರಕೃತಿಯೊಳಗೆ ಮಾನವನ ಕಿಂಚಿತ್ತೂ ಸಹಕಾರ ವಿಲ್ಲದೆ ಬೆಳೆದ ಹಲವಾರು ಮರಗಳು ಮಾನವ ಸಹಿತ ಪ್ರಾಣಿ ಪಕ್ಷಿಗಳಿಗೆ ಸ್ವಾರ್ಥ ರಹಿತವಾಗಿ ಆಹಾರ ಮತ್ತು ಆಸರೆ ನೀಡುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ.
ಹಲಸು ಹೆಬ್ಬಲಸು ಮತ್ತು ಮಾವು ಈ ಮರಗಳು ಬಲಿತು ನಿಂತಾಗ ಅದರ ಪ್ರಯೋಜನ ಪಡೆದ ನಾವು ಧನದ ಆಸೆಯಿಂದ ಕಡಿದು ಬಿಡುವೆವು ಅಲ್ಲದೆ ಧನವಂತರಾದೆವು ಎಂದು ಭೀಗುವೆವು ಅದು ತಪ್ಪು
ಮುಂದೆ ಹಾರಿದೆ!ಹಿಂದೆ ಜಾರಿದೆ
ಎಂಬ ಗೀತೆಯ ಸಾಲು ಇಲ್ಲಿ ನೆನಪಾಗುವುದು. ಧನ ದೊರೆತರೂ ಅಸಣವು ಜಾರಿ ಹೋದುದು ಅದು ಯಾಕೆ ಅರಿವಾಗಲಿಲ್ಲ.
ನಾನು ರಚಿಸಿದ ಮತ್ತು ನನಗೆ ಖುಷಿ ನೀಡಿದ ಈ ಮೇಲಿನ ಕವನದಲ್ಲಿ ಉಲ್ಲೇಖಿಸಿದಂತೆ ಮಾನವ ಸಹಿತ ಹಲವಾರು ಪ್ರಾಣಿ ಪಕ್ಷಿಗಳಿಗೆ ಆಹಾರ, ಆಸರೆಯನ್ನು ನೀಡಿದ ದೈವೀ ಸೃಷ್ಟಿಯಾದ ಇಂತಹ ಮರಗಳನ್ನು ಕೇವಲ ಧನದ ಆಸೆಯಿಂದ ಕಡಿಯುವಾಗ ಇವೆಲ್ಲವೂ ನೆನಪಾಗದಿದ್ದುದು ಘೋರ ಅಪರಾಧ ಮಾತ್ರವಲ್ಲ ದುರಂತ ಎಂದರೆ ತಪ್ಪಾಗಲಾರದು.
ಗಿಡಮರಗಳನ್ನು ಉಳಿಸಿರಿ! ಪರಿಸರದಲ್ಲಿ ಆಮ್ಲಜನಕವನ್ನು ಬೆಳೆಸಿರಿ.


































