ಹರ್ ಘರ್ ತಿರಂಗಾ ಅಭಿಯಾನ

Picture of RB NEWS

RB NEWS

Bureau Report

ಮೂಡುಬಿದಿರೆ: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ದೇಶ ವ್ಯಾಪ್ತಿಯಲ್ಲಿ “ಹರ್ ಘರ್ ತಿರಂಗ” ಅಭಿಯಾನದ ನಡೆಯುತ್ತಿದೆ.
ಇದರ ಅಂಗವಾಗಿ ಮೂಡುಬಿದಿರೆಯ ಒಂಟಿಕಟ್ಟೆಯ ಗಣೇಶ್ ಸಾಲಿಯಾನ್ ಅವರ ಮನೆಯಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಚಾಲನೆ ನೀಡಿದರು.

ಉಡುಪಿ: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಉಡುಪಿಯ ಅಂಚೆ ವಿಭಾಗದ ಅಧೀಕ್ಷಕ ರಮೇಶ್ ಪ್ರಭು, ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠ್ಠಲ ಭಟ್, ವಸಂತ ಹಾಗೂ ಉಪ ಅಂಚೆ ಪಾಲಕಿ ಪೂರ್ಣಿಮಾ ಜನಾರ್ದನ್, ಅಂಚೆ ಸಿಬ್ಬಂದಿ ಪ್ರಜ್ವಲ್ ರವರು ಉಡುಪಿ ವಿಧಾನಸಭಾ ಶಾಸಕ ಯಶ್ ಪಾಲ್ ಸುವರ್ಣರನ್ನು ಭೇಟಿಯಾಗಿ ನೀಡಿ,
ಪ್ರಧಾನ ಮಂತ್ರಿಗಳು, ಸಂಸ್ಕ್ರತಿ ಮತ್ತು ಪ್ರವಾಸೋದ್ಯಮ ಇಲಾಖೆ,ಭಾರತ ಸರಕಾರ ಇವರ ಪತ್ರವನ್ನು ಭಾರತೀಯ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ತಿರಂಗಾ ರಾಷ್ಟ್ರಧ್ವಜದೊಂದಿಗೆ ಹಸ್ತಾಂತರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top