ಹನಿಟ್ರ್ಯಾಪ್ : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಮತ್ತು ಆತನ ಸಹಚರ ಜಿತೇಶ್‌ ಬಂಧನ

Picture of RB NEWS

RB NEWS

Bureau Report

ಮಂಗಳೂರಿನ ಪ್ರಸಿದ್ಧ ಉದ್ಯಮಿಯೊಬ್ಬರಿಗೆ ಅಶ್ಲೀಲ ವಿಡಿಯೋ ತೋರಿಸಿ ಹನಿಟ್ರ್ಯಾಪ್ ಮಾಡಿ, ಬರೋಬ್ಬರಿ 2.77 ಕೋಟಿ ರೂಪಾಯಿ ದೋಚಿದ ಹೈಪ್ರೊಫೈಲ್ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಮತ್ತು ಆತನ ಸಹಚರ ಜಿತೇಶ್‌ ಎಂಬಾತನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

2024ರಲ್ಲಿ ಜಿತೇಶ್‌ ಎಂಬಾತ ಉದ್ಯಮಿಯೊಬ್ಬರ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಚಿತ್ರಿಸಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. “ಹಣ ನೀಡದಿದ್ದರೆ ನಿಮ್ಮ ಪತ್ನಿಗೆ ವಿಡಿಯೋ ತೋರಿಸುತ್ತೇನೆ” ಎಂದು ಬೆದರಿಸಿ ಆರಂಭದಲ್ಲಿ 35 ಲಕ್ಷ ರೂಪಾಯಿ ಕಿತ್ತಿದ್ದ. ಮರ್ಯಾದೆಗೆ ಹೆದರಿದ ಉದ್ಯಮಿ ಚೆಕ್ ಮೂಲಕ ಹಣ ನೀಡಿದ್ದರು. ಆದರೆ, ಜಿತೇಶ್ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ, ಸಹಾಯ ಕೋರಿ ಉದ್ಯಮಿ ಯುವ ಕಾಂಗ್ರೆಸ್ ಮುಖಂಡ ನಿಝಾಮ್ ಮೊರೆ ಹೋಗಿದ್ದರು.

ಸಹಾಯಕ್ಕೆ ಬಂದು ಸಂಚು ಹೂಡಿದ ಮುಖಂಡ:

ಸಹಾಯ ಮಾಡುವ ನೆಪದಲ್ಲಿ ಎಂಟ್ರಿ ಕೊಟ್ಟ ನಿಝಾಮ್, ಜಿತೇಶ್ ಜೊತೆ ಸೇರಿ ಉದ್ಯಮಿಗೆ ಇನ್ನೂ ದೊಡ್ಡ ಖೆಡ್ಡಾ ತೋಡಿದ್ದ. 2024ರ ಮೇ ತಿಂಗಳಲ್ಲಿ “ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ನಿಝಾಮ್ ಉದ್ಯಮಿಯನ್ನು ನಂಬಿಸಿದ್ದ. ಅಷ್ಟೇ ಅಲ್ಲದೆ, “ಜಿತೇಶ್ ಬರೆದಿರುವ ಡೆತ್ ನೋಟ್‌ನಲ್ಲಿ ನಿಮ್ಮ ಹೆಸರಿದೆ, ಪೊಲೀಸರು ನಿಮ್ಮನ್ನು ಜೈಲಿಗೆ ಹಾಕುತ್ತಾರೆ” ಎಂದು ಬೆದರಿಸಿ ಕೋಟಿ ಕೋಟಿ ಹಣ ಪೀಕಲು ಶುರುಮಾಡಿದ್ದ.

ಈ ಒಂದು ಆತ್ಮಹತ್ಯೆ ಕಥೆ ಎಲ್ಲಿವರೆಗೂ ಹೋಗುತ್ತೆ ಎಂದರೆ ಆ ನಕಲಿ ಫೋಟೋಗಳನ್ನು ತೋರಿಸಿ ಜಿತೇಶ್, ನೇಣಿಗೆ ಶರಣಾದ ರೀತಿ ಆತನ ಅಂತ್ಯಕ್ರಿಯೆ ನಡೆದಂತಹ ಫೋಟೋ ಇದೆಲ್ಲ ಆತ್ಮಹತ್ಯೆ ಕಥೆಯನ್ನು ಸೃಷ್ಟಿ ಮಾಡಿ ನಕಲಿ ಫೋಟೋ ತೋರಿಸಿ ಕೇಸ್ ಹಾಕಿಸಿ ಜೈಲಿಗೆ ತಳ್ಳುವ ಬೆದರಿಕೆ ಹಾಕಿ ಕೋಟಿ ಕೋಟಿ ಹಣ ಮಸೂಲಿ ಮಾಡಿದ್ದಾರೆ. 2024 ರಿಂದ 2026 ರ ವರೆಗೆ ಎರಡು ವರ್ಷದವರೆಗೆ ಈ ರೀತಿ ಹಣ ವಸೂಲಿ ಮಾಡಿದ್ದಾರೆ. ಆದರೆ ಜೂನ್ 1ರಂದು ಮಂಗಳೂರಿನಲ್ಲಿ ಉದ್ಯಮಿಗೆ ಜಿತೇಶ್ ಸಿಕ್ಕಿದ್ದಾನೆ ಜಿತೇಶ್‌ ಜೀವಂತ ಇರುವುದನ್ನು ನೋಡಿ ಉದ್ಯಮಿಗೆ ಶಾಕ್ ಆಗಿದೆ. ಇದೀಗ ಮಂಗಳೂರಿನ ಊರ್ವ ಠಾಣೆಗೆ ಉದ್ಯಮಿ ದೂರು ಕೊಟ್ಟಿದ್ದಾರೆ. ಸದ್ಯ ನಿಜಾಂ ಮತ್ತು ಜಿತೇಶ್ ನನ್ನ ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top