ಹಚ್ಚ ಬೇಕು ಜ್ಞಾನದ ದೀಪ
ಕಾರ್ಗಿಲ್ ಯೋಧ ಕರುನಾಡು ಕನ್ನಡದಕವಿಯ ಲಕ್ಷಣ
ನಿಮ್ಮೆಲ್ಲರ ಕಣ್ಣಿಗೆ ಕಾಣುತ್ತಿದೆ ಪ್ರತಿ ಕ್ಷಣ
ಶಾಂತವಾಗಿದೆ ನನ್ನ ಮೌನ ಈ ಕ್ಷಣ
ನನ್ನ ಮನ ಸಾಧನೆ ಮಾಡಲು ತಕ್ಷಣ//{೦೧}//
ಸಮಾಜದಲ್ಲಿ ಟೀಕಿಸುವವರು ಜನರು ಇಂದು/
ಕೇಳಿ ಮನಸು ಕವಿದಂತಾಗಿದೆ ಇಂದು/
“ನಾನು ಗಟ್ಟಿಯಾಗಿ ನಿಲ್ಲಬೇಕು ಇಂದು/
ಬೆಳೆಯ ಬೇಕು ಎಲ್ಲರಿಗಿಂತ ಮುಂದು//{೦೨}//
ಕವಿದ ಮೋಡದಲಿ ಕರಗಿದ ಮೌನ/
ತೊಳೆಯಬೇಕಿದೆ ಸಮಾಜದ ಕೆಸರು ತುಂಬಿದಮನ/
ನರ್ತಿಸುತಿದೆ ಮೋಸ ವಂಚನೆ ಪ್ರತಿದಿನ/
ಮರೆ ಮಾಚುತ್ತಿದೆ ನನ್ನಯ ಒಳ್ಳೆಯತನ//{೦೩}//
“ಹಚ್ಚ ಬೇಕಾಗಿದೆ ಜ್ಞಾನದ ದೀಪ”/
ಅಜ್ಞಾನ ದೂರ ಹೋಗಲಿ ಶಾಪ/
ಕಳಚಿ ಹೋಗಲಿ ಆಂತರಿಕ ರೂಪ/
ನಶಿಸಿ ಹೋಗಲಿ ಎಲ್ಲರ ಪಾಪ//{೦೪}//



























