ಹಂಡೇಲು, ಕಲ್ಲಮುಂಡ್ಕೂರು ಕ್ಲಸ್ಟರ್ ಪ್ರತಿಭಾ ಕಾರಂಜಿ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ತಾಲೂಕಿನ ಹಂಡೇಲು ಹಾಗೂ ಕಲ್ಲಮುಂಡ್ಕೂರು ಕ್ಲಸ್ಟರ್ ಸಂಯುಕ್ತ ಪ್ರತಿಭಾ ಕಾರಂಜಿ ಸ್ಪರ್ಧೆಗಳು ನೀರ್ಕೆರೆ ಶಾಲಾ ಆವರಣದಲ್ಲಿ ನಡೆಯಿತು.



ಪ್ರತಿಭಾ ಸ್ಪರ್ಧೆಗಳನ್ನು ದೀಪ ಬೆಳಗಿ ಉದ್ಘಾಟಿಸಿದ ಬನ್ನಡ್ಕ ಎಸ್ ಕೆ ಎಫ್ ಸಂಸ್ಥೆಯ ನಿರ್ದೇಶಕ ಪ್ರಜ್ವಲ್ ಆಚಾರ್ಯ ಅವರು ಮಾತನಾಡಿ, ಇತರ ಮಕ್ಕಳಿಗೆ ಅತ್ಯುತ್ತಮವಾದಂತಹ ಅವಕಾಶಗಳನ್ನು ನೀಡುತ್ತಿರುವ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಬಹಳ ಉಪಯುಕ್ತವಾದವುಗಳು. ಇದರಿಂದಾಗಿ ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಅಪೂರ್ವ ಅವಕಾಶವನ್ನು ನೀಡುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷೆ ಜಯಲಕ್ಷ್ಮಿ, ತೆಂಕಮಿಜಾರು ಗ್ರಾಂ.ಪಂ. ಅಧ್ಯಕ್ಷೆ ಶಾಲಿನಿ, ಗ್ರಾಂ.ಪಂ.ಅಭಿವೃದ್ಧಿ ಅಧಿಕಾರಿ ರೋಹಿಣಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಜೋಗಿ, ಲಯನ್ಸ್ ಅಧ್ಯಕ್ಷ ಬೊನವೆಂಚರ್ ಮಿನೇಜಸ್, ಬಿ.ಇ.ಓ. ವಿರೂಪಾಕ್ಷಪ್ಪ, ಊರಿನ ಪ್ರಮುಖರಾದ ಅಜಿತ್ ರಾಜ್ ಜೈನ್, ಲಿಂಗಪ್ಪ ಗೌಡ, ಪ್ರೌ.ಶಾ.ಮು.ಶಿ. ಡಾ.ಪ್ರತಿಮಾ,ಬಿ.ಆರ್.ಸಿ. ಸೌಮ್ಯ, ಹಾಜರಿದ್ದರು.
ಪ್ರಾಥಮಿಕ ಶಾಲೆ ಮು.ಶಿ. ಯಮುನಾ ಕೆ ಸ್ವಾಗತಿಸಿದರು. ಮೋಹನ್ ರಾಜ್ ನಿರ್ವಹಿಸಿದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ದಿನಕರ್ ಧನ್ಯವಾದ ಸಲ್ಲಿಸಿದರು.














