[t4b-ticker]

ಸ್ವ-ಉದ್ಯೋಗ ಕುರಿತು ಅಲ್ಫಾವಧಿ ಉಚಿತ ತರಬೇತಿ ಕಾರ್ಯಾಗಾರ

Picture of RB NEWS

RB NEWS

Bureau Report

‌ಕಾರ್ಕಳ: ಶ್ರೀರಾಮ ಸಭಾಭವನ ಬಂಡೀಮಠದಲ್ಲಿ ಸ್ವ-ಉದ್ಯೋಗ ಕುರಿತು ಅಲ್ಫಾವಧಿ ಉಚಿತ ತರಬೇತಿ ಕಾರ್ಯಾಗಾರ.
*
ಕಾರ್ಕಳ: ಭಾರತ ಸರ್ಕಾರದ ದತ್ತೋಪಂಥ ಥೇಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಪ್ರಾದೇಶಿಕ ನಿರ್ದೇಶನಾಲಯ, ಮಂಗಳೂರು ಇದರ ವತಿಯಿಂದ ರಾಮಕ್ಷತ್ರಿಯ ಹಾಗೂ ಇತರ ಪುರುಷ ಹಾಗೂ ಮಹಿಳಾ ಸಮಾಜಬಾಂಧವರಿಗಾಗಿ
ಸ್ವ- ಉದ್ಯೋಗಕ್ಕೆ ಸಂಬಂಧಿಸಿದಂತೆ ಕ್ಯಾಂಡಲ್, ಫಿನೈಲ್, ಹಾಗೂ ಸೋಪ್ ಆಯಿಲ್ ತಯಾರಿಸುವ ಅಲ್ಫಾವಧಿಯ “ಉಚಿತ ತರಬೇತಿ ಕಾರ್ಯಾಗಾರ”ವು ಫೆ. 27ರಂದು ಬಂಡೀಮಠ ಶ್ರೀರಾಮ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಅಜೆಕಾರು ಈ ಕಾರ್ಯಕ್ರಮವನ್ನು ಗುರುಪ್ರಸಾದ್ ರಾವ್ ಜ್ಯೋತಿ ಬೆಳಗಿಸಿ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಗೌರವಾಧ್ಯಕ್ಷ ಪ್ರಸನ್ನ ಕೆ.ಬಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಶಿಕ್ಷಣಾಧಿಕಾರಿ ಸುಮೇಶ್.ಸಿ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಹರಿಣಾ ರಾವ್, ಜಿಲ್ಲಾ ಕೈಗಾರಿಕಾ ಸಂಘ ಯೆಯ್ಯಾಡಿ, ಮಂಗಳೂರು ಇದರ ಉಪಾಧ್ಯಕ್ಷೆ ಹಾಗೂ ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರಿನ ಜೊತೆ ಕಾರ್ಯದರ್ಶಿ ರೇಖಾಲತಾ, ದ.ಕ.ಸಣ್ಣ ಕೈಗಾರಿಕೆ ಸಂಘ, ಮಂಗಳೂರು ಇದರ ಸದಸ್ಯೆ ವಿದ್ಯಾರಾವ್, ಹಾಗೂ ಕುಕ್ಕುಂದೂರು ಪಂಚಾಯತ್ ಮಾಜಿ ಅಧ್ಯಕ್ಷೆ ಸುಮನಾ ಮಾಧವ ರಾವ್ ಉದ್ಘಾಟನೆಗೆ ಸಾಥ್ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹರಿಣಾ ರಾವ್ ರವರು ಮಾತನಾಡಿ, ಕೇಂದ್ರ ಸರಕಾರದ ಹಲವಾರು ಸ್ವ-ಉದ್ಯೋಗ ಯೋಜನೆಗಳಲ್ಲಿ ತೊಡಗಿಸಿಕೊಂಡು
ಸ್ವಾವಲಂಬಿಗಳಾಗಿ, ಉತ್ತಮ ಜೀವನ ನಿರ್ವಹಣೆ ನಡೆಸುವಂತಾಗಬೇಕು ಹಾಗೂ ವಿಶ್ವಕರ್ಮ ಯೋಜನೆಯಡಿ 21 ಯೋಜನೆಗಳಿದ್ದು, ಅದರಲ್ಲಿ ಮಹಿಳೆಯರು ನೋಂದಾಯಿಸಿಕೊಂಡು ಪ್ರಯೋಜನವನ್ನು ಪಡಕೊಳ್ಳುವಂತೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ 

ಶ್ರೀ ಗುರುಪ್ರಸಾದ್ ರಾವ್ ಅಜೆಕಾರ್ ರವರು ಮಾತನಾಡಿ ಮಹಿಳೆಯರು ಸ್ವ-ಉದ್ಯೋಗದಿಂದ ಸ್ವಾವಲಂಬಿಗಳಾಗಿ, ರಾಜ್ಯ,ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕರೆ ನೀಡಿದರು.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ  ಶಿಕ್ಷಣಾಧಿಕಾರಿ  ಸುಮೇಶ್. ಸಿ ರವರು ಮಾತನಾಡಿ ತರಬೇತಿಗಳಿಂದ ಜ್ಞಾನದ ಅಭಿವೃದ್ಧಿ, ಸಾಮರ್ಥ್ಯ,ಉತ್ಪಾದಕತೆ ಮತ್ತು ಸುಧಾರಿತ ನಿರ್ದಿಷ್ಠ ಗುರಿಗಳನ್ನು ಹೋಂದಲು ಸಾಧ್ಯ ಎಂದರು.


 ಶೈಲಜಾ ಭಟ್,  ರವಿಕಲಾ,  ಸುಕೇಶ್ ರಾವ್ ಬೈಲೂರು,  ಗುರುಪ್ರಸಾದ್ ರಾವ್ ಅಜೆಕಾರ್ ತರಬೇತಿಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.


ಬಿ. ಮನಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top