ಸ್ವಾತಂತ್ರ ಹೋರಾಟದ ಮೂಂಚೂಣಿಯಲ್ಲಿದ್ದ ನಾಯಕರ ಪ್ರೇರಣಾ ಶಕ್ತಿ ಬ್ರಹ್ಮಶ್ರೀ ನಾರಾಯಣ ಗುರು

- ವರದಿ :ಚಿನ್ನಾ ಕಲ್ಲಡ್ಕ
ಬಂಟ್ವಾಳ : ಪ್ರಜಾಪ್ರಭುತ್ವ ದೇಶಕ್ಕಾಗಿ ಸ್ವಾತಂತ್ರ್ಯ ಭಾರತಕ್ಕಾಗಿ ಹೋರಾಟ ನಡೆಸಿದ ಅನೇಕರು ಒಂದೆಡೆಯಾದರೆ, ಇನ್ನೊಂದೆಡೆ ಸಮಾಜದಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆಯನ್ನು ತೊಡೆದು ಹಾಕಲು ಸಾಮಾಜಿಕ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮಹಾತ್ಮಾ ಗಾಂಧಿ, ರವೀಂದ್ರ ನಾಥ್ ಠಾಗೋರ್, ಅಂಬೇಡ್ಕರ್ ಮುಂತಾದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ಶಕ್ತಿಯಾಗಿದ್ದರು ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಹೇಳಿದರು.
ಮಹಿಳಾ ಸಂಘಟನಾ ನಿರ್ದೇಶಕರಾದ ಹರೀಣಾಕ್ಷಿ ನವೀಶ್ ನಾವುರ ಇವರ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರು ತತ್ವ ವಾಹಿನಿ (ಮಾಲಿಕೆ 7)ರ ಕಾರ್ಯಕ್ರಮದಲ್ಲಿ ಅಭಿಮತ ವ್ಯಕ್ತಪಡಿಸಿದರು.

ಮಾಜಿ ಅಧ್ಯಕ್ಷರಾದ ಶಿವಾನಂದ ಎಂ,ನಾಗೇಶ್ ಪೊನ್ನೊಡಿ,ಅರುಣ್ ಕುಮಾರ್ ,ಪ್ರೇಮನಾಥ ಕೆ ,ರಾಜೇಶ್ ಸುವರ್ಣ ಹಾಗೂ ಪ್ರಥಮ ಉಪಾಧ್ಯಕ್ಷ ನಾರಾಯಣ ಪೂಜಾರಿ ಪಲ್ಲಿಕಂಡ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ವಿದ್ಯಾ ನಿಧಿ ನಿರ್ದೇಶಕ ವಿಕ್ರಮ್ ಶಾಂತಿ , ಕಲೆ ಮತ್ತು ಸಾಹಿತ್ಯ ನಿರ್ದೆಶಕ ಲೋಹಿತ್, ಕೋಶಾಧಿಕಾರಿ ಗೀತಾ ಜಗದೀಶ್, ಸಮಾಜಸೇವಾ ನಿರ್ದೇಶಕ ಪುರುಷೋತ್ತಮ ಕಾಯರ್ಪಲ್ಕೆ ,ಸದಸ್ಯರಾದ ಪ್ರಶಾಂತ್ ಏರಮಲೆ, ಚಂದ್ರಶೇಖರ್ ಕಲ್ಯಾಣಾಗ್ರಹಾರ,ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ,ಹರೀಶ್ ಅಜೆಕಲಾ, ನಾಗೇಶ್ ಏಲಬೆ, ಜೈದೀಪ್ ಏಲಬೆ, ಹಸ್ತ್ ರಾಯಿ, ಸಾಜಲ್ ರಾಯಿ, ರಾಜೇಶ್ ಬಿ.ಸಿ ರೋಡ್, ಸುದೀಪ್ ರಾಯಿ ಮತ್ತಿತರರು ಉಪಸ್ಥಿತರಿದ್ದರು,
ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ನಿರೂಪಿಸಿದರು.

































