ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ಭಾರತೀಯ ನಾಗರಿಕನ ಹೊಣೆಗಾರಿಕೆ
ಪಡುಕುಡೂರು ಶಾಲೆಯಲ್ಲಿ ಶನಿವಾರ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿ ಪ್ರತಿಷ್ಠಾಪನೆಯ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೆ ಕೃತಜ್ಞತಾ ಸಮರ್ಪಣಾ ಸಭೆ ನಡೆಯಿತು.
ಪಡುಕುಡೂರು : ಎಂ.ಡಿ.ಅಧಿಕಾರಿ ಪುತ್ಥಳಿ ಲೋಕಾರ್ಪಣೆ : ಕೃತಜ್ಞತಾ ಸಭೆ.
ಎಂ.ಡಿ ಅಧಿಕಾರಿ ಹೆಸರು ಶಾಶ್ವತವಾಗಬೇಕು : ಶಂಕರ ಶೆಟ್ಟಿ
ಪಡುಕುಡೂರು : ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿ ಅವರ ಹೆಸರು ಶಾಶ್ವತವಾಗಬೇಕು, ಅದಕ್ಕಾಗಿ ನಾವು ಬಾಲ್ಯದಿಂದಲೆ ಚಿಂತನೆಯನ್ನು ಮಾಡಿ ಕನಸು ಕಂಡಿದ್ದೇವೆ ಆ ಕನಸು ಈಗ ನನಸಾಗಿದೆ, ಪುತ್ಥಳಿ ಪ್ರತಿಷ್ಠಾಪನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ದಾಖಲೆಯಾಗಿದೆ. ಎಲ್ಲರೂ ಒಳ್ಳೇಯ ಮನಸ್ಸಿನಿಂದ ಸೇವೆ ಮಾಡಿದ್ದರಿಂದ ಎಲ್ಲವೂ ಸಂಭ್ರಮದಿಂದ ಅಭೂತಪೂರ್ವವಾಗಿ ಮೂಡಿಬಂದಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿ ಪ್ರತಿಷ್ಠಾಪನೆಯ ರೂವಾರಿ ಪಡುಪರ್ಕಳ ಶಂಕರ ಶೆಟ್ಟಿ ಹೇಳಿದರು.
ಅವರು ಶನಿವಾರ ಪಡುಕುಡೂರು ಶಾಲೆಯಲ್ಲಿ ನಡೆದ ಕೃತಜ್ಞತಾ ಸಮರ್ಪಣಾ ಸಭೆಯಲ್ಲಿ ಮಾತನಾಡಿದರು.
ಸಾಮಾಜಿಕ ಮುಖಂಡ ಶಿವಪುರ ಸುರೇಶ ಶೆಟ್ಟಿ, ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಡುಪರ್ಕಳ ಹರೀಶ ಶೆಟ್ಟಿ, ವಿವಿಧ ಪ್ರಮುಖರಾದ ಶಂಕರ ಶೆಟ್ಟಿ ಪೂಜಾ ಮುನಿಯಾಲು, ಶಿಕ್ಷಕರಾದ ಮಾತಿಬೆಟ್ಟು ಪ್ರಕಾಶ ಪೂಜಾರಿ, ಅಶೋಕ ಎಂ. ಶೆಟ್ಟಿ, ಪ್ರಸನ್ನ ಶೆಟ್ಟಿ ಜಯಲೀಲ, ಖಜಾನೆ ಸಂದೇಶ ಶೆಟ್ಟಿ, ಸಂದೀಪ ಶೆಟ್ಟಿ, ಶಿಕ್ಷಕಿ ರಂಜಿತಾ ಪಡುಕುಡೂರು, ಸಂತೋಷ ಕುಮಾರ್ ಶೆಟ್ಟಿ ಮುದ್ರಾಡಿ ಸಂಭ್ರಮದ ಯಶಸ್ಸಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಪಟೇಲರ ಮನೆ ಜಗದೀಶ ಹೆಗ್ಡೆ ಅಧ್ಯಕ್ಷತೆ ವಹಿಸಿ ಕೃತಜ್ಞತೆ ಸಲ್ಲಿಸಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಸಮಿತಿಯ ಉಪಾಧ್ಯಕ್ಷ ಹೃದಯ ಕುಮಾರ್ ಶೆಟ್ಟಿ, ಜೊತೆ ಕಾರ್ಯದರ್ಶಿ ತಾರಾವತಿ ಶೆಟ್ಟಿ, ಜೊತೆ ಕೋಶಾಧಿಕಾರಿ ಅಮಿತಾ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಸವಿತಾ ಶೆಟ್ಟಿ, ಮಾಧ್ಯಮ ಸಮಿತಿಯ ಖಜಾನೆ ಸುಕುಮಾರ್ ಆಚಾರ್, ಸಮಿತಿಯ ವಿವಿಧ ಪದಾಧಿಕಾರಿಗಳು, ಉಪ ಸಮಿತಿಯ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.
ಪ್ರಕಾಶ ಪೂಜಾರಿ ನಿರೂಪಿಸಿ ಸ್ವಾಗತಿಸಿ ವಂದಿಸಿದರು

































