ಸ್ವಾತಂತ್ರ್ಯ ಎಂಬುದು ಕೇವಲ ಪದವಲ್ಲ, ಅದು ಲಕ್ಷಾಂತರ ತ್ಯಾಗಗಳ ಕಥೆಗಳು
ಶಿರ್ತಾಡಿ ( ಮೂಡುಬಿದಿರೆ) : “ಸ್ವಾತಂತ್ರ್ಯ ಎಂಬುದು ಕೇವಲ ಪದವಲ್ಲ, ಅದು ಲಕ್ಷಾಂತರ ತ್ಯಾಗಗಳ ಕಥೆಗಳು” ಎಂಬ ವಾಕ್ಯವನ್ನು ಸ್ಮರಿಸಿಕೊಂಡು ಆಗಸ್ಟ್ 15 ರಂದು ದೇಶಭಕ್ತಿ, ಉತ್ಸಾಹ, ಹೆಮ್ಮೆ ಮತ್ತು ಗೌರವದಿಂದ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಹೋಲಿ ಏಂಜಲ್ಸ್ ಪ್ರಾಥಮಿಕ ಶಾಲೆಗಳ ಸಹಬಾಗಿತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಭವ್ಯವಾಗಿ ಆಚರಿಸಲಾಯಿತು.
ಉಭಯ ಶಾಲೆಗಳ ವಿದ್ಯಾರ್ಥಿಗಳಿಂದ ದೇಶಪ್ರೇಮವನ್ನು ಬೆಳೆಸುವಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಉಭಯ ಶಾಲೆಗಳ ಜಂಟಿ ಕಾರ್ಯದರ್ಶಿ ಸ್ವಾಮಿ ಹೆರಾಲ್ಡ್ ಮಸ್ಕರೇನಸ್ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಿರ್ತಾಡಿ ಕ್ಲಿನಿಕ್ನ ವೈದ್ಯ ಕೆ. ಕೃಷ್ಣರಾಜ ಭಟ್ ಆಗಮಿಸಿದ್ದರು.
ಉಭಯ ಶಾಲೆಗಳ ಮುಖ್ಯೋಪಾಧ್ಯಾಯಿನಿಯವರು, ಶಾಲಾ ಆಡಳಿತ ಮಂಡಳಿಯವರು, ಪೋಷಕರು,ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿಲ್ದಾ ನಿರೂಪಿಸಿದರು.

































