ಮೂಡುಬಿದಿರೆ ಪುರಸಭೆಯ ಸಾಮಾನ್ಯ ಸಭೆ
ಸ್ವರಾಜ್ಯ ಮೈದಾನದಲ್ಲಿ ನೂರಕ್ಕೂ ಹೆಚ್ಚು ಬೀಡಾಡಿ ನಾಯಿಗಳು-ಕಡಿದ ಗೆಲ್ಲುಗಳನ್ನು ಅಲ್ಲೇ ಬಿಟ್ಟು ತೆರಳುವ ಮೆಸ್ಕಾಂ ಸಿಬ್ಬಂದಿ ಬಗ್ಗೆ ಆಕ್ಷೇಪ -ಅಧಿಕಾರಿಗಳೊಂದಿಗೆ ವಿಶೇಷ ಸಭೆಗಾಗಿ ಒಕ್ಕೊರಲ ಒತ್ತಾಯ
ಫೋಟೋ ವರದಿ : ರಾಯಿ ರಾಜಕುಮಾರ ಮೂಡುಬಿದಿರೆ





ಮೂಡುಬಿದಿರೆ: ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ರ ಹಿರಿತನದಲ್ಲಿ ಆಗಸ್ಟ್ 31ರಂದು ಮೂಡುಬಿದರೆ ಪುರಸಭೆಯ ಸಾಮಾನ್ಯ ಸಭೆ ಜರುಗಿತು. ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಜಯಶ್ರೀ ಕೇಶವ್ ಹಾಗೂ ಉಪಾಧ್ಯಕ್ಷ ನಾಗರಾಜ ಪೂಜಾರಿ ಅವರನ್ನು ಎಲ್ಲರೂ ಅಭಿನಂದಿಸಿದರು. ಅದೇ ರೀತಿ ನಾಮ ನಿರ್ದೇಶಿತ ರಾದ ಐದು ಮಂದಿ ಸದಸ್ಯರನ್ನು ಸಭೆಗೆ ಪರಿಚಯಿಸಲಾಯಿತು.
ಪುರಸಭಾ 23 ವಾರ್ಡ್ಗಳ ಸದಸ್ಯರು ತಮ್ಮ ತಮ್ಮ ಅಹಬಾಲುಗಳನ್ನು ಸಭೆಯ ಮುಂದಿಟ್ಟರು. ಹೆಚ್ಚಿನ ದೀಪಗಳು ಹಗಲಿನಲ್ಲಿ ಮಾತ್ರ ಉರಿಯುತ್ತವೆ ರಾತ್ರಿ ಮಲಗುತ್ತವೆ. ಹೆಚ್ಚಿನ ಹೈ ಮಾಸ್ಟ್ ದೀಪಗಳು ನಿರ್ವಹಣೆ ಇಲ್ಲದೆ ನಿದ್ರಿಸುತ್ತಿವೆ. ಮೆಸ್ಕಾಂನವರು ಎರಡು ಮೂರು ಕಂಬಗಳನ್ನು ಕಡಿಮೆಗೊಳಿಸಿ ಲೋಪವಾಗಿದೆ. ಮೆಸ್ಕಾಂನವರು …
ಬಸ್ಸು ನಿಲ್ದಾಣದ ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿ, ಬಸ್ಸುಗಳಿಗೆ ತೊಂದರೆ ನೀಡಲಾಗುತ್ತಿದೆ. ಎಲ್ಲಾ ಪುರಸಭಾ ವ್ಯಾಪ್ತಿಯ ಮನೆ ರಿಪೇರಿಗಳಿಗೆ ಆದೇಶವನ್ನು ಮಾತ್ರ ನೀಡಿದ್ದು ಅನುದಾನವನ್ನು ಸರಕಾರ ಡಿ ಸಿ ಅವರ ಮೂಲಕ ಇನ್ನೂ ಬಿಡುಗಡೆ ಮಾಡಿರುವುದಿಲ್ಲ ಹಾಗಾಗಿ ಒಂದೆರಡು ವರ್ಷಗಳಿಂದ ಮನೆ ಬಿಚ್ಚಿ ಹಾಕಿದವರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಸದಸ್ಯರು ಮೇರು ಧ್ವನಿಯಲ್ಲಿ ಆಕ್ಷೇಪಿಸಿದರು. ಸರಕಾರ ನೀಡಿದಾಗ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿ ವಾರ್ಡಿಗೆ 10 ಲಕ್ಷ ಅನುದಾನವನ್ನು ನೀಡಿ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಸುರೇಶ್ ಪ್ರಭು ಕೇಳಿಕೊಂಡರು. ಮೂಡುಬಿದಿರೆ ತಾಲೂಕಿನವರನ್ನು ಹೊರತು ಬೇರೆಯವರಿಗೆ ಯಾವುದೇ ಕಾಮಗಾರಿಯ ಅವಕಾಶವನ್ನು ನೀಡಬಾರದೆಂದು ಸದಸ್ಯರು ಕೇಳಿಕೊಂಡರು. ಪುರಸಭಾ ವ್ಯಾಪ್ತಿಯ ಬಹು ಮಹಡಿ ಕಟ್ಟಡಗಳವರು ಅವರ ಕೊಳಚೆ ನೀರು ಇತ್ಯಾದಿಗಳನ್ನು ಹತ್ತಿರದ ಪ್ರದೇಶ, ಬಾವಿ, ಬೋರ್ ಗಳಿಗೆ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಅಂತಹ ಎಲ್ಲ ಬಹುಮಹಡಿ ಕಟ್ಟಡಗಳ ಕಾಮಗಾರಿ ಹಾಗೂ ಕೊಳಚೆ ನೀರು ಇತ್ಯಾದಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿದ್ದಲ್ಲಿ ಅಂತಹವರಿಗೆ ನೋಟಿಸು ನೀಡಿ ಪರವಾನಿಗೆಯನ್ನು ತಡೆಹಿಡಿಯಬೇಕೆಂದು ಎಲ್ಲ ಸದಸ್ಯರು ಒಕ್ಕೊರಲಿನಿಂದ ಬೇಡಿಕೆ ಇತ್ತ ರು.
ಪುರಸಭೆಯ ನಿವೃತ್ತ ಕಚೇರಿ ಸಹಾಯಕಿ ಶ್ರೀಮತಿ ರೋನಿ ರೋಸ್ ಮರಿಯರ ಹಾಗೂ ಜವಾನ ನೋಡಯ್ಯ ರಿಗೆ ವೈದ್ಯಕೀಯ ವೆಚ್ಚದ ಬಿಲ್ಲನ್ನು ಪಾವತಿಸಲು ಸದಸ್ಯರು ಅನುಮೋದಿಸಿದರು.
ಪುರಸಭಾ ಬಸ್ಸು ನಿಲ್ದಾಣದ ವರಿ ವಸೂಲು, ಚಿಕನ್ ಸ್ಟಾಲ್ ಗಳ, ಹಸಿ ಮತ್ತು ಒಣ ಮೀನು ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಮಟನ್ ಸಾಲುಗಳ ಬಹಿರಂಗ ಏಳಂ ಹೆಚ್ಚು ಬಿಟ್ಟುದಾರರಿಗೆ ಮಂಜೂರಾತಿ ನೀಡುವಂತೆ ಒಪ್ಪಿಕೊಳ್ಳಲಾಯಿತು.






































