ಸ್ವಚ್ಛತಾಭಿಯಾನ ಮಾಸಾಚರಣೆ – 2024

Picture of RB NEWS

RB NEWS

Bureau Report

ಕಾರ್ಕಳ : ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಹೆರ್ಮುಂಡೆ‌ ಮತ್ತು ಗ್ರಾಮ ಪಂಚಾಯತ್ ಮರ್ಣೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾಭಿಯಾನ ಮಾಸಾಚರಣೆ – 2024ಯನ್ನು ಆಚರಿಸಲಾಯಿತು.

ಇದೇ ಸಂದಭದಲ್ಲಿ “ಸ್ವಚ್ಛ ಸಂಭ್ರಮ ಮತ್ತು ಬೆಸುಗೆ ಆವೃತ್ತಿ – ೨” ಬಿಡುಗಡೆಗೊಳಿಸಲಾಯಿತು.

ತಂಡದ ಮೂಲ ಆಶಯ ವ್ಯಕ್ತಿತ್ವ ವಿಕಸನ ಮತ್ತು ನೈತಿಕ ಮೌಲ್ಯವರ್ಧನೆ ಸರಣಿ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಶ್ರೀ ರಾಮಕೃಷ್ಣ ಮಠ ಮತ್ತು ಮಿಷನ್ ಇದರ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿಯವರು ವ್ಯಕ್ತಿತ್ವ ನಿರ್ಮಾಣ ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಎಂಬ ಕುರಿತು ಪ್ರವಚನ ಮಾಲಿಕೆಯನ್ನು ಸಂಯೋಜನೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವೇಂದ್ರ ಭಟ್ ವಹಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್, ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆನಂದ ಹೆಗ್ಡೆ, ಕಾರ್ಕಳ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಿಟ್ಟೆ, ಹರಿಪ್ರಸಾದ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಥೈಲ್ಯಾಂಡ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿರುವ ಅನನ್ಯ, ಯೋಗಸನದಲ್ಲಿ ವಿಶ್ವ ಮಟ್ಟದ ದಾಖಲೆ ನಿರ್ಮಿಸಿರುವ ಪ್ರತ್ಯಕ್ಷ ಕುಮಾರ್ ಹೆಗ್ಡೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನೀಡುವ ಜಾಗೃತಿಮಿತ್ರ ಪುರಸ್ಕಾರಕ್ಕೆ ಭಾಜನರಾದ ಶ್ರೀ ಗಣಪತಿ ಆಚಾರ್ಯ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಸುಶಾಂತ್ ಪ್ರಾರ್ಥನೆಗೈದರು. ವಿಘ್ನೇಶ್ ಪೂಜಾರಿ ಸ್ವಾಗತಿಸಿದರು. ವಿಷ್ಣುಪ್ರಸಾದ ಸ್ವಾಮೀಜಿಯವರ ಕಿರುಪರಿಚಯಿಸಿದರು. ಶ್ರೀಪಾದ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ವಿನುತಾ ಅಭಿನಂದನೆಗೈದರು. ಸತೀಶ ಹೆಗ್ಡೆ, ಧನ್ಯವಾದವಿತ್ತರು. ಶ್ರೀಕಾಂತ್ ಭಟ್ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top