ಸ್ವಚ್ಛತಾಭಿಯಾನ ಮಾಸಾಚರಣೆಗೆ ಚಾಲನೆ

Picture of RB NEWS

RB NEWS

Bureau Report

ಕಾರ್ಕಳ : ಸ್ವಚ್ಛ ಬ್ರಿಗೇಡ್ ಹೆರ್ಮುಂಡೆ ನೇತೃತ್ವದಲ್ಲಿ ಹೆರ್ಮುಂಡೆ ಆರೋಗ್ಯ ಉಪಕೇಂದ್ರದಲ್ಲಿ “ಸ್ವಚ್ಛತಾಭಿಯಾನ ಮಾಸಾಚರಣೆ” ಗೆ ಚಾಲನೆ ನೀಡಲಾಯಿತು.

ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಹೆರ್ಮುಂಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ತರುಣ ಭಾರತ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ನೆರವೇರಿಸಲಾಯಿತು.

ಇದೇ ಸಂದರ್ಭದಲ್ಲಿ ಸ್ವಚ್ಚತೆ ಮತ್ತು ಅರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಕಳ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಸಂತ ಶೆಟ್ಟಿ ಮಾಹಿತಿಯನ್ನು ನೀಡಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷೆ ವಿಜಯಶ್ರೀ ಅಧ್ಯಕ್ಷತೆಯನ್ನು ವಹಿಸಿದ್ದರು.

ಸ್ವಚ್ಚ ಬ್ರಿಗೇಡ್ ನ ಸಂಚಾಲಕ ರಂಜಿತ್ ಹೆಗ್ಡೆ, ಪ್ರಗತಿಪರ ಕೃಷಿಕ ರೋನಿ ಕರ್ಡೋಜ, ಅಂಗನವಾಡಿ ಕಾರ್ಯಕರ್ತೆ ಶ ಸರೋಜಿನಿ ಉಪಸ್ಥಿತರಿದ್ದರು.

ಸತೀಶ ಹೆಗ್ಡೆ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು, ಅಶ್ವಿನಿ ಶೆಟ್ಟಿ ಸ್ವಾಗತಿಸಿದರು, ಲತಾ ಹೆಗ್ಡೆ ಧನ್ಯವಾದವಿತ್ತರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top