ಬನ್ನಡ್ಕ : ಸ್ವಚ್ಛತೆಯೆಡೆಗೆ ಹೆಜ್ಜೆ ಕಾರ್ಯಕ್ರಮ
ಮೂಡುಬಿದಿರೆಯ ಬನ್ನಡ್ಕದಲ್ಲಿ ಸ್ವಚ್ಚತೆಯೆಡೆಗೆ ದಿಟ್ಟ ಹೆಜ್ಜೆ ಕಾರ್ಯಕ್ರಮಕ್ಕೆ ಪಡುಮಾರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಸುದೇವ ಭಟ್ ಚಾಲನೆ ನೀಡಿದರು.ಸ್ವಚ್ಚ ಪರಿಸರದಿಂದ ಉತ್ತನ ಆರೋಗ್ಯ- ವಾಸುದೇವ ಭಟ್
ಮೂಡುಬಿದಿರೆ: ಸ್ವಚ್ಛತಾ ಹೀ ಸೇವಾ ಆಂದೋಲನ್ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ “ಸ್ವಚ್ಚತೆಯೆಡೆಗೆ ದಿಟ್ಟ ಹೆಜ್ಜೆ” ಅಭಿಯಾನ ಶುಕ್ರವಾರ ಪಡುಮಾರ್ನಾಡಿನಲ್ಲಿ ನಡೆಯಿತು.
ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದ
ಪಡುಮಾರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಸುದೇವ ಉಪಾಧ್ಯಾಯ, ಸ್ವಚ್ಚ ಪರಿಸರ ಮತ್ತು ಉತ್ತಮ ಆರೋಗ್ಯಕ್ಕಾಗಿ ನಮ್ಮ ಪರಿಸರವನ್ನು ಸಂರಕ್ಷಿಸುವುದು ಗ್ರಾಮಸ್ಥರೆಲ್ಲರ ಜವಾಬ್ದಾರಿ ಎಂದರು.ಸ್ವಚ್ಛತಾ ಘಟಕದ ಸಿಬ್ಬಂದಿಗಳು ವಾರಕ್ಕೆ ಎರಡು ಬಾರಿ ಗ್ರಾಮದ ಎಲ್ಲಾ ಮನೆ ಮನೆಗಳಿಗೂ ಸ್ವಚ್ಛತಾ ವಾಹನದೊಂದಿಗೆ ಭೇಟಿ ನೀಡುತ್ತಿದ್ದಾರೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ್ ಬಿ., ಮಂಗಳೂರು ವಿಶ್ವವಿದ್ಯಾನಿಲಯ ಬನ್ನಡದ ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಾಯಿಷ್ ಚೌಟ ನಿರೂಪಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ದಯಾನಂದ ಪೈ, ಕಲ್ಯಾಣಿ, ರಮೇಶ್ ಶೆಟ್ಟಿ, ಮಹಮ್ಮದ್ ಅಸ್ಲಾಮ್, ರಜನಿ, ಕುಸುಮಾ, ಟೆಸ್ಲಿನಾ, ಮಾಜಿ ಸದಸ್ಯರಾದ ದಯಾನಂದ ಪೈ, ಹಾಜರಿದ್ದರು.





































