ಸ್ನೇಹಿತೆಯ ಕಣ್ಣೆದುರೇ ನದಿಗೆ ಹಾರಿ ಮೂಡುಬಿದಿರೆಯ ಯುವತಿ ಆತ್ಮಹತ್ಯೆ

Picture of RB NEWS

RB NEWS

Bureau Report

ಮೂಡುಬಿದಿರೆ: ಇಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಯುವತಿಯೋರ್ವಳು ಗುರುಪುರ ಪಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ನಡೆದಿದೆ.

ಘಟನೆಯ ವಿವರ:
ಮೂಡುಬಿದಿರೆ ಗಾಂಧಿನಗರ ಸಮೀಪದ ಕಡೆಪಲ್ಲ ನಿವಾಸಿ ನವ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಮೂಡುಬಿದಿರೆಯ ಅಲಂಕಾರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರದಂದು ನವ್ಯ ತನ್ನ ನಿಡ್ಡೋಡಿ ಮೂಲದ ಸ್ನೇಹಿತೆಯ ಜೊತೆಗೆ ಗುರುಪುರ ನದಿ ತೀರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ನವ್ಯ ದಿಢೀರನೆ ನದಿಗೆ ಹಾರಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ಸ್ನೇಹಿತೆ, ನವ್ಯರನ್ನು ರಕ್ಷಿಸಲು ಕೈ ಹಿಡಿದು ಎಳೆಯಲು ಪ್ರಯತ್ನಪಟ್ಟಿದ್ದಾರೆ. ಆದರೆ ಯತ್ನ ವಿಫಲವಾಗಿದ್ದು, ಈ ವೇಳೆ ಸ್ನೇಹಿತೆಯ ಕೈಗೆ ತೀವ್ರವಾದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top