


ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ 25ನೇ ವರ್ಷದ ವಾರ್ಷಿಕೋತ್ಸವ
ಕಾರ್ಕಳ : ಮಂಜಲ್ಪಾದೆ ಅಂಗನವಾಡಿ ಕೇಂದ್ರ ಮುಡಾರ ಇದರ 29ನೇ ವರ್ಷದ ವಾರ್ಷಿಕೋತ್ಸವ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಅಮೀನ್ ಸ್ವಯಂ ನಿವೃತ್ತಿ ಗೊಳ್ಳುತ್ತಿರುವವರಿಗೆ ಬೀಳ್ಕೊಡುಗೆ ಸಮಾರಂಭವು ಅಂಗನವಾಡಿ ಕೇಂದ್ರ ಮಂಜಲ್ಪಪಾದೆಯಲ್ಲಿ ನೆರವೇರಿತು.
ಕಾರ್ಕಳದ ಶಾಸಕ ವಿ ಸುನಿಲ್ ಕುಮಾರ್ ರವರು ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭ ಪದ್ಮಾವತಿ ಟೀಚರ್ ಅವರಿಗೆ ಶುಭ ಹಾರೈಸಿದರು.
ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಚೇತನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರುತಿ ಡಿ ಅತಿಕಾರಿ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರು ಗಳಾದ ಸುರೇಶ್ ಶೆಟ್ಟಿ ಹಾಗೂ ಮಾಲತಿ ನಾಯ್ಕ, ಪಂಚಾಯತ ಸದಸ್ಯರುಗಳಾದ ವಿನಯ ಡಿ ಬಂಗೇರ, ರಜತ್ ಮೋಹನ್, ಸಂತೋಷ್ ಪೂಜಾರಿ, ಪ್ರಶಾಂತ್ ಪೂಜಾರಿ, ಶಿವಪ್ರಸಾದ್ ಶಿಶು, ಅಭಿವೃದ್ಧಿ ಯೋಜನೆ ಅಧಿಕಾರಿಗಳಾದ ವಿಜಯನಾರಾಯಣ ನಾಯಕ್, ಡಾ. ಗಿರೀಶ್ ಗೌಡ, ಡಾ. ವೆಂಕಟಗಿರಿ ರಾವ್, ಉದ್ಯಮಿ ಮಹಾವೀರ್ ಹೆಗ್ಡೆ , ಗಣೇಶ್ ಪೂಜಾರಿ ದುಗ್ಗಟ್ಟು ಮುಡ್ರಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಮುಡಾರು, ಗ್ರಾಮ ಪಂಚಾಯಿತಿ ಪಿಡಿಓ ರಮೇಶ್ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಜೆಗೋಳಿ ವಲಯದ ಮೇಲ್ವಿಚಾರಕಿ ಶಾಂಭವಿ ಬಜಗೋಳಿ ಹಾಗೂ ನಲ್ಲೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಅಂಗನವಾಡಿ ಕಾರ್ಯಕರ್ತೆಯ ಸೇವೆಯನ್ನು ಶ್ಲಾಘನೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮುಡಾರು ಗ್ರಾಮದ ಎಸ್ ಎಲ್ ಆರ್ ಎಂ ಘಟಕದ 5 ಸದಸ್ಯರಿಗೆ ಗೌರವಿಸಲಾಯಿತು.
ಅಂಗನವಾಡಿಯ ಪುಟಾಣಿಗಳಿಗೆ ಸಮಸ್ತ ವಿತರಣೆ ನಡೆಸಲಾಯಿತು. ಸ್ತ್ರೀ ಶಕ್ತಿ ಸ್ವಸಹಾಯ ಗುಂಪುವಿನ ಸದಸ್ಯರಿಗೆ ಪೋಷಕರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ವತಿಯಿಂದ ನೆರವೇರಿಸಿದರು ಸ್ನೇಹ ಸಹನಾ ಸೌಜನ್ಯ ಸಮ್ಮಿಲನ ಸಂರಕ್ಷ ಈ ಗುಂಪಿನ ವತಿಯಿಂದ ಮುಡಾರು ಗ್ರಾಮದ ಶ್ರೀ ಬ್ರಹ್ಮ ಮುಗೇರಕಳ ದೈವಸ್ಥಾನದ ಜೀರ್ಣೋದ್ಧಾರಕ್ಕಾಗಿ ರೂ. 25055 ಗಳನ್ನು ಕೊಡುಗೆಯ ಹಸ್ತಾಂತರ ಮಾಡಿದರು. ಅಂಗನವಾಡಿ ಪುಟಾಣಿಗಳಿಂದ ನೃತ್ಯ ಪ್ರದರ್ಶನ ಹಾಗೂ ಪೋಷಕರು ಹಳೆ ವಿದ್ಯಾರ್ಥಿಗಳು ಸ್ತ್ರೀಶಕ್ತಿ ಗುಂಪಿನ ಸದಸ್ಯರುಗಳು ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಟೀಚರಿಗೆ ಅಭಿನಂದನ ಕಾರ್ಯಕ್ರಮ ನೆರವೇರಿತು.
ಅಭಿನಂದನೆಯನ್ನು ಸ್ವೀಕರಿಸಿ ತಮ್ಮ 36 ವರ್ಷಗಳ ಸುದೀರ್ಘ ಸೇವಾ ವಧಿಯ ಸವಿ ನೆನಪುಗಳನ್ನುಮೆಲುಕು ಹಾಕಿದರು ಸ್ತ್ರೀಶಕ್ತಿ ಗುಂಪುಗಳ ವರದಿಯನ್ನು ವಾಚಿಸಿದರು.
ಎಸ್ ಎಲ್ ಆರ್ ಎಂ ಘಟಕದ ಮೇಲ್ವಿಚಾರಕಿ ಮಾಧವಿ ಪ್ರಭು ರವರು ಸ್ವಾಗತಿಸಿದರು. ಪದ್ಮಾವತಿ ಅಂಗನವಾಡಿ ಕಾರ್ಯಕರ್ತೆ ಪ್ರಾಸ್ತಾವಿಕ ನುಡಿಗಳ ನಾಡಿದರು.
ವಿನಯ ಡಿ ಬಂಗೇರ ಧನ್ಯವಾದವಿತ್ತರು.
ಸುರೇಶ್ ಪೂಜಾರಿ ಮುಖ್ಯ ಶಿಕ್ಷಕರು ಮುಡ್ರಾಲ್ ಶಾಲೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಸಿಹಿತಿಂಡಿಯನ್ನು ಸುಶಾಂತ ಜನ ಔಷಧಿ ಮಾಲಕರು ಹಾಗೂ ಪ್ರಜ್ಞೇಶ್ ಕುಮಾರ್ ಹಳೆ ವಿದ್ಯಾರ್ಥಿಗಳು ನೀಡಿದರು. ಸುನಿಲ್ ಬುನ್ನಾಡಿ ಹಾಗೂ ಭಾಸ್ಕರ್ ಪೂಜಾರಿ ನೇತ್ರಾವತಿ ಅಂಗನವಾಡಿ ಸಹಾಯಕಿ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಮಾಡಿದರು.





















