ಸೋನ್ಸ್ ಫಾರ್ಮ್ ನಲ್ಲಿ ತೋಟಗಾರಿಕೆ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ

Picture of RB NEWS

RB NEWS

Bureau Report

ಮೂಡುಬಿದಿರೆ : ಮಂಗಳೂರು ಕೃಷಿ ಇಲಾಖೆ, ಮೂಡುಬಿದಿರೆ ತೋಟಗಾರಿಕಾ ಇಲಾಖೆ, ರೈತ ಜನ್ಯ ಕೃಷಿಕರ ವೇದಿಕೆ, ಇವರ ಸಹಯೋಗದಲ್ಲಿ ಬನ್ನಡ್ಕ ಸೋನ್ಸ್ ಫಾರ್ಮ್ ನಲ್ಲಿ ತೋಟಗಾರಿಕೆ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ಮಾಹಿತಿ ಕಾರ್ಯಕ್ರಮವನ್ನು ರೈತಜನ್ಯ ಸಂಸ್ಥೆಯ ಸದಸ್ಯ, ನಿವೃತ್ತ ಮುಖ್ಯ ಶಿಕ್ಷಕ ತಾಕೊಡೆ ವಲೇರಿಯನ್ ಮೊರಾಸ್ ಉದ್ಘಾಟಿಸಿದರು. ವಿಟ್ಲ ಸಿ ಪಿ ಸಿ ಆರ್ ಐ ನ ಡಾ. ಭವಿಷ್ಯ ಅವರು ತೋಟಗಾರಿಕಾ ಬೆಳೆಗಳ ಬಗ್ಗೆ ಅಡಿಕೆ ತೆಂಗು ಇತ್ಯಾದಿ ಮಾಹಿತಿಯನ್ನು ರೈತರಿಗೆ ನೀಡಿದರು.

ತೋಟಗಾರಿಕಾ ಅಧಿಕಾರಿ ಯುಗೇಂದ್ರ ಹಾಗೂ ಮಂಗಳೂರು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಕೆಂಪೇಗೌಡ ರವರು ಇಲಾಖೆಯಿಂದ ದೊರಕುವ ಮಾಹಿತಿಯನ್ನು ಒದಗಿಸಿದರು. ವೇದಿಕೆಯಲ್ಲಿ ರೈತ ಜನ್ಯ ಸಂಸ್ಥೆಯ ಅಧ್ಯಕ್ಷ ಲಿಯೋ ವಾಲ್ಡರ್‌ ನಜರತ್‌, ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಗುಣಪಾಲ ಮುದ್ಯ, ಹಾಜರಿದ್ದರು. ಜಿನೇಂದ್ರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಸಂದೀಪ್ ಧನ್ಯವಾದ ಇತ್ತರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top