ಸೊಸೈಟಿಯ ನೌಕರರಿಗೂ ಸರಕಾರಗಳಂತೆ ಪಿಂಚಣಿ ನೀಡುತ್ತಿರುವ ಕಾರ್ಯ ಪ್ರಶಂಸನೀಯ -ಕೆ ಅಭಯ ಚಂದ್ರ ಜೈನ್
ಮೂಡುಬಿದಿರೆ : ಸ್ಥಳೀಯ ಮೂಡುಬಿದಿರೆ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ ಮೈದಾನದ ಬಳಿ ಇರುವ ಸೌಟ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು.
ಜುಲೈ 28ರಂದು ನಡೆದ ಸಭೆಯಲ್ಲಿ ನೂತನ ನಿರ್ದೇಶಕರಾಗಿ ಆಯ್ಕೆಗೊಂಡ ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ, ಸೊಸೈಟಿಯ ನೌಕರರಿಗೆ ಕೂಡ ಪಿಂಚಣಿಯನ್ನು ನೀಡುತ್ತಿರುವ ಬ್ಯಾಂಕಿನ ಕಾರ್ಯ ಪ್ರಶಂಸನೀಯ ಕಾರ್ಯ ಎಂದು ತಿಳಿಸಿದರು. ಹಿಂದೆ 1000 ಪಿಂಚಣಿ ನೀಡುತ್ತಿದ್ದಂತಹ ಸೊಸೈಟಿ ನಿವೃತ್ತರಾಗಿರುವ ಮೂರು ಮಂದಿಗೆ 15ಸಾವಿರ ಪಿಂಚಣಿಯನ್ನು ನೀಡುತ್ತಿದೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಆರೋಗ್ಯ ಕಾರ್ಡ್ ಗೆ ದೇಣಿಗೆ ನೀಡಿದ ಶ್ರೀಪಾಲ್ ಎಸ್. ಸ್ಟೀವನ್ ಮೆಂಡಿಸ್ ಕುಟುಂಬಕ್ಕೆ ಧನ್ಯವಾದ ಸಲ್ಲಿಸಲಾಯಿತು.
ಸದಸ್ಯರಾದವರಿಗೆ ಒಂದು ಸಾವಿರ ಆರೋಗ್ಯ ನಿಧಿ ಕಾರ್ಡ್ ಗಾಗಿ ಕಟ್ಟಿದವರಿಗೆ ವರ್ಷಕ್ಕೆ ಒಂದು 25,000 ರೂಪಾಯಿ ನೀಡಿದ ಉದಾಹರಣೆ ನಮ್ಮ ಸೊಸೈಟಿಯಲ್ಲಿ ಮಾತ್ರ ಲಭ್ಯವಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಸಾಲಗಾರರು ಸಮರ್ಪಕವಾಗಿ ಸಾಲವನ್ನು ಹಿಂತಿರುಗಿಸುತ್ತಿರುವುದರಿಂದ ಬ್ಯಾಂಕು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವಾರ್ಷಿಕ 1736 ಕೋಟಿ ವಹಿವಾಟು ಹೊಂದಿದೆ. ಒಟ್ಟು ಸೊಸೈಟಿಯಲ್ಲಿ 12,300 ಸದಸ್ಯರಿದ್ದು ಪ್ರತಿವರ್ಷದ ಮಹಾಸಭೆಗೆ ಸುಮಾರು 80% ಭಾಗವಹಿಸುತ್ತಿರುವುದು ಸಂತೋಷಕರ, ಬ್ಯಾಂಕು ಪಕ್ಷಾತೀತವಾಗಿ ರಾಜ್ಯ ಧರ್ಮದಲ್ಲಿ ನಡೆಯುತ್ತಿದೆ ಎಂದು ಬೆಂಕಿನ ಮುಖ್ಯ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಎಂ ತಿಳಿಸಿದರು. 60 ಕೋಟಿ 10 ಲಕ್ಷದ ಬಜೆಟ್ ಅನ್ನು ಸಭೆಯಲ್ಲಿ ಮಂಡಿಸಲಾಯಿತು. ಮುವತ್ತು ಕೋಟಿಗು ಹೆಚ್ಚು ಬಂಡವಾಳ ಮಿತಿಯನ್ನು ನಿಗದಿಪಡಿಸಲು ನಿರ್ಧರಿಸಲಾಯಿತು.
ಸದಸ್ಯರ ಮಾಹಿತಿಯನ್ನು ಅಗತ್ಯವಿದ್ದಲ್ಲಿ ಸಾಮಾನ್ಯ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಅಳವಡಿಸಲು ನಿರ್ಧರಿಸಲಾಯಿತು. ಸೊಸೈಟಿಯ ವಿವಿಧ ವರದಿಗಳನ್ನು ಬ್ಯಾಂಕಿನ ನೌಕರರಾದ ಮಂಜುನಾಥ, ರಘುವೀರ ಕಾಮತ್, ಸುದರ್ಶನ ಭಟ್, ಸಂತೋಷ ನಾಯಕ್ ಮಂಡಿಸಿದರು. ಬ್ಯಾಂಕು 2001 ಎರಡನೇ ಸಾಲಿನಿಂದ ಎ ದರ್ಜೆಯಲ್ಲಿದ್ದು ಈ ವರ್ಷ 11 ಕೋಟಿ ನಿವ್ವಳ ಲಾಭವನ್ನು ಗಳಿಸಿರುತ್ತದೆ. 26 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಶೇಷ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ತಮ್ಮ ಕಾರ್ಯಕ್ರಮ ನಿರ್ವಹಣೆಯಲ್ಲಿ ತಿಳಿಸಿದರು. ವೇದಿಕೆಯಲ್ಲಿ ಜಾರ್ಜ್ ಮೋನಿಸ್, ಮನೋಜ್ ಶೆಟ್ಟಿ, ಅಬ್ದುಲ್ ಗಫೂರ್, ಎಂ.ಪಿ. ಅಶೋಕ್ ಕಾಮತ್, ಜ್ಞಾನೇಶ್ವರ ಕಾಳಿಂಗ ಪೈ, ಎಂ ಪದ್ಮನಾಭ, ಪ್ರೇಮ ಎಸ್ ಸಾಲಿಯಾನ್, ಅನಿತಾ ಪಿ ಶೆಟ್ಟಿ, ದಯಾನಂದ ನಾಯ್ಕ, ಕಾರ್ಯನಿರ್ವಹಣಾಧಿಕಾರಿ ಕೆ ರಘುವೀರ ಕಾಮತ್ ಹಾಜರಿದ್ದರು. ಎಂ ಜಯರಾಮ ಕೋಟ್ಯಾನ್ ಸ್ವಾಗತಿಸಿದರು. ಎಂ ಗಣೇಶ ನಾಯಕ್ ಧನ್ಯವಾದ ಸಲ್ಲಿಸಿದರು.
ಫೋಟೋ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.














