ಕಾರ್ಕಳ : ಸಾಮಾಜಿಕ ಜಾಲದ ಮೋಸದ ಜಾಲಕ್ಕೆ ಸಿಲುಕಿ ಬ್ಯಾಂಕ್ ಖಾತೆದಾರರು ಎಲ್ಲಾ ಹಣವನ್ನು ಕಳೆದುಕೊಳ್ಳುತ್ತಿದ್ದು, ಇಂತಹ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದೆ. ಮೊಬೈಲ್ ಗಳನ್ನು ಬಳಸುವ ಪ್ರತಿಯೊಬ್ಬರು ಎಚ್ಚರಿಕೆಯಿಂದ ವ್ಯವಹರಿಸಬೇಕು. ಮೆಸೇಜ್ ಗಳ,ಓಟಿಪಿ ನಂಬ್ರಗಳ ಬಗ್ಗೆ ಕಣ್ಗಾವಲು ಇರಿಸಿಕೊಳ್ಳಬೇಕು. ಸೈಬರ್ ಅಪರಾಧಗಳು ನಡೆದ ಕ್ಷಣದಲ್ಲಿಯೇ 1930 ನಂಬ್ರಗೆ ಕರೆ ಮಾಡಿ ದೂರು ದಾಖಲಿಸಬೇಕೆಂದು ಉಡುಪಿ ಜಿಲ್ಲಾ ಸೈಬರ್ ಅಪರಾಧ ವಿಭಾಗವು ಜನಜಾಗೃತಿ ಮೂಡಿಸಿದೆ.
ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಪ್ರಮುಖ ಜಂಕ್ಷನ್ ಗಳಲ್ಲಿ ಪೊಲೀಸ್ ವಾಹನ ಬಳಸಿ ಮೈಕ್ ಮೂಲಕ ಜಾಗೃತಿಯ ಸಂದೇಶವನ್ನು ಪೊಲೀಸರು ನೀಡಿದರು.
ಸೈಬರ್ ಅಪರಾಧವೂ ಜನಜೀವನ ಹಾಗೂ ಆರ್ಥಿಕ ಸ್ಥಿತಿ ದುಷ್ಟರಿಣಾಮ ಬೀರುವಂತೆ ಮಾಡುತ್ತದೆ. ಮೋಸದ ಜಾಲಕ್ಕೆ ಒಳಗಾದ ಸಂದರ್ಭದಲ್ಲಿ ಪೊಲೀಸ್ ಸಹಾಯದಿಂದ ನ್ಯಾಯಸಿಗುವ ಅವಕಾಶ ಹೆಚ್ಚಾಗಿದೆ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.
ಕಾರ್ಕಳ ನಗರ ಠಾಣಾಧಿಕಾರಿ ಧನಂಜಯ್,ಉಡುಪಿ ಸೈಬರ್ ಸ್ಟೇಷನ್ ನ ಹೆಡ್ ಕಾನ್ಸ್ ಸ್ಟೇಬಲ್ ನಾಗೇಶ್, ಚಾಲಕ ಗೊಇಪಾಲಕೃಷ್ಣ ಉಪಸ್ಥಿತರಿದ್ದರು.



























