ಸೈನಿಕ ಸ್ವಾರ್ಥರಹಿತ ಕರ್ತವ್ಯದ ಸರದಾರ
ಸೈನಿಕ ಸ್ವಾರ್ಥರಹಿತ ಕರ್ತವ್ಯದ ಸರದಾರ
ಜನರ ಹೃದಯದಲಿ ಪ್ರಜ್ವಲಿಸುವ ಸಾಹುಕಾರ
ಭಾರತದೇಶಕ್ಕೆ ಭರವಸೆನೀಡಿ ಸಲಹುವ ಗುರಿಕಾರ
ರಕ್ಷಕನಾಗಿ ಆತ್ಮಸ್ಥೈರ್ಯ ತುಂಬುವ ಸಲಹೆಗಾರ||{೦೧}||
ದಣಿವರಿಯದ ದುಡಿಮೆಯ ನಿಸ್ವಾರ್ಥ ಮನದವನು
ಕುಟುಂಬಕ್ಕಾಗಿ ತನ್ನ ಜೀವವನ್ನೇ ಪಣಕ್ಕಿಡುವನು
ದೇಶದ ಖುಷಿಯಲ್ಲಿ ತನ್ನ ನೋವುಮರೆವನು
ಎಲ್ಲರೊಂದಿಗೆ ಪ್ರೀತಿ ಒಲುಮೆ ತೋರುವನು ||{೦೨}||
ಬಾಳಿಗೆ ವಾತ್ಸಲ್ಯಸುಧೆ ಹರಿಸುವನು ಸಿಪಾಯಿನಾಗಿ
ಸಂಕಷ್ಟದಿ ಕಾಪಾಡುವನು ಅನುದಿನ ಯೋಧನಾಗಿ
ಪ್ರೀತಿ,ಮಮತೆ,ಕರುಣೆ, ತೋರುವವನು ಆರಕ್ಷಕನಾಗಿ
ತನ್ನೆಲ್ಲಆಸೆ ಬಚ್ಚಿಡುವನು ತ್ಯಾಗದ ಹರಿಕಾರನಾಗಿ ||{೦೩}||
ಕಷ್ಟಗಳಿಗೆ ಎದೆಗೊಟ್ಟು ನಿಲ್ಲುವನು ನಗುತಲಿ
ಮಾನಸಿಕ ದ್ವಂದ್ವತೆಯಲ್ಲೂ ಆಲಿಸುವನು ಮೌನದಲಿ
ಮುಡಪಿಟ್ಟು ಗಡಿಕಾಯುವನು ತೈನಾತಿ ಕೈಂಕರ್ಯದಲಿ
ಕಾಣುವುದವನ ಬೆವರಿನಹನಿ ಗಡಿಭಾಗನಲಿ ||{೦೪}||
✍️ ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ
ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ
ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಪ್ರಶಸ್ತಿ ಪುರಸ್ಕೃತ, ಹುಲ್ಯಾಳ ಗ್ರಾಮ
ಜಮಖಂಡಿ
ಬಾಗಲಕೋಟೆ ೫೮೭೩೦೧





































