ಸೇವೆ ನೀಡಿ ಯಶಸ್ವಿನ ಸಾಧನೆ ಪಡೆಯುದೇ ಗ್ರಾಮಾಭಿವೃದ್ದಿ ಯೋಜನೆಯ ಪ್ರಕ್ರಿಯೆ

Picture of RB NEWS

RB NEWS

Bureau Report

ವರದಿ : ಚಿನ್ನಾ ಕಲ್ಲಡ್ಕ

ವಿಟ್ಲ : ಸೇವೆಯನ್ನು ನೀಡಿ ಯಶಸ್ವಿನ ಸಾಧನೆ ಯನ್ನು ಪಡೆಯುವುದೇ ಗ್ರಾಮಾಭಿವೃದ್ದಿ ಯೋಜನೆಯ ಪ್ರಕ್ರಿಯೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕ ದುಗ್ಗೇ ಗೌಡ ಹೇಳಿದರು.

ಅವರು ಆದಿತ್ಯವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ವಿಟ್ಲ ಇದರ ಆಶ್ರಯದಲ್ಲಿ ಭಾರತ್ ಅಡಿಟೋರಿಯಂ ಚಂದಳಿಕೆ ವಿಟ್ಲ ಇಲ್ಲಿ ನಡೆದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಗ್ರಾಮಭಿವೃದ್ಧಿ ಯೋಜನೆಯಿಂದ ಸಮುದಾಯ ಹಾಗೂ ಸಂಘ ದ ಸದಸ್ಯರಿಗೆ ಆಗಿರುವ ಪ್ರಯೋಜನಗಳು,

ಎಸ್ ಬಿ ಐ ಬ್ಯಾಂಕ್ ಮಲ್ಲಿಕಟ್ಟೆ ಯ ಪ್ರಧಾನ ವ್ಯವಸ್ಥಾಪಕಿ ಭವಾನಿ, ಸ್ವ ಸಹಾಯ ಸಂಘಗಳು ಬ್ಯಾಂಕಿಗೆ ನೀಡಬೇಕಾದ ದಾಖಲಾತಿಗಳು ಹಾಗೂ ಬ್ಯಾಂಕ್ ಪ್ರತಿನಿಧಿ ಯಾಗಿ ಎಸ್ ಕೆ ಡಿ ಆರ್ ಡಿ ಪಿ ನಿರ್ವಹಿಸುತ್ತಿರುವ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ದಶ ಅಂಶ ಗಳು ಹಾಗೂ ಯೋಜನೆಯ ಸ್ವ -ಸಹಾಯ ಸಂಘಗಳ ವ್ಯವಸ್ಥೆ ಕುರಿತು,ಯೋಜನಾಧಿಕಾರಿ ರಮೇಶ್ ಯೋಜನೆ ಯ ವಿವಿಧ ಕಾರ್ಯಕ್ರಮಗಳು ಹಾಗೂ ತಾಲೂಕಿನಲ್ಲಿ ಕೈಗೊಳ್ಳಲಾದ ಸಾಧನೆ ಮಾಹಿತಿ ನೀಡಿದರು .

ಈ ಸಂಧರ್ಭ ದಲ್ಲಿ ಯೋಜನೆಯ ಕಾರ್ಯ ಚಟುವಟಿಕೆಗಳ ನ್ನು ವಿವರಿಸುವ ಕಿರುಚಿತ್ರ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಸ್ ಬಿ ಐ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ವರದಾ,ಎಮ್ ಐ ಎಸ್ ಯೋಜನಾಧಿಕಾರಿ ಶಕುಂತಲಾ, ಬಿ ಸಿ ಯೋಜನಾಧಿಕಾರಿ ಸುಪ್ರೀತ್ ಜೈನ್, ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ವಲಯ ಅಧ್ಯಕ್ಷರುಗಳಾದ ರಾಜೇಂದ್ರ, ಗಣೇಶ್ ಮೈರುಗ, ರೋಬರ್ಟ್ ಪೆರ್ನಾಂಡಿಸ್ , ತುಳಸಿ, ಪ್ರಮೀಳಾ, ದಿನೇಶ್ ಶೆಟ್ಟಿ, ಸುಧಾಕರ ಸಫಲ್ಯ, ವಲಯ ಮೇಲ್ವಿಚಾರಕರುಗಳಾದ ಜಗದೀಶ್, ಸುಗುಣ ಶೆಟ್ಟಿ, ಸರಿತಾ, ಸವಿತಾ, ಮಾಲತಿ, ಆಶಾ ಪಾರ್ವತಿ, ನಾಗೇಶ್, ಶಾರದಾ, ಯೋಜನೆಯ ತಾಲೂಕು ಕೃಷಿ ಅಧಿಕಾರಿ ಚಿದಾನಂದ, ಲೆಕ್ಕ ಪರಿಶೋದಕಿ ಕವಿತಾ ವಸಂತ, ಎಲ್ಲಾ ಒಕ್ಕೂಟಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಒಕ್ಕೂಟ ಗಳ ಸೇವಾ ಪ್ರತಿನಿದಿಗಳು ಉಪಸ್ಥಿತರಿದ್ದರು.

ಅಳಿಕೆ ವಲಯ ಮೇಲ್ವಿಚಾರಕಿ ಮಾಲತಿ ಪ್ರಾರ್ಥಿಸಿ, ತಾಲೂಕು ಯೋಜನಾಧಿಕಾರಿ ರಮೇಶ್ ಸ್ವಾಗತಿಸಿ, ವಿಟ್ಲ ವಲಯ ಮೇಲ್ವಿಚಾರಕಿ ಸರಿತಾ ವಂದಿಸಿ, ಕೇಪು ವಲಯ ಮೇಲ್ವಿಚಾರಕ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top