ಸೇವೆ, ತೃಪ್ತಿ ಹಾಗೂ ಸ್ವ ಅಭಿವೃದ್ದಿಯೊಂದಿಗೆ ಮುನ್ನಡೆಯುತ್ತಿರುವ ಮೂಡುಬಿದಿರೆ ರೋಟರಿ ಬಳಗ

Picture of RB NEWS

RB NEWS

Bureau Report

ಅತಿಥಿಗಳಾಗಿ ಆಗಮಿಸಿದ್ದ ಗೋಪಿನಾಥ್ ಆರ್ ಹಾಗೂ ಮುನಿ ಗಿರೀಶ್ ಕೆ ಅವರು ಪ್ರಾತ್ಯಕ್ಷಿಕೆಯ ಮೂಲಕ ಸದಸ್ಯರನ್ನು ಹೆಚ್ಚಿಸುವ, ಸ್ನೇಹ, ಸೇವೆ ಇತ್ಯಾದಿಗಳನ್ನು ಬೆಳೆಸಿ, ನೋಟರಿಯನ್ನು ಬೆಳೆಸುವ ವಿಧಾನಗಳನ್ನು ತಿಳಿಸಿಕೊಟ್ಟರು.


ಮಹಿಳಾ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ, ಇರುವ ಹಿರಿಯ ಸದಸ್ಯರನ್ನು ಉಳಿಸಿಕೊಳ್ಳಲು ಮಾಡಬೇಕಾದ ಪ್ರಯತ್ನ ಹಾಗೂ ಹುಡುಕಬೇಕಾದ ಪರಿಹಾರಗಳ ಬಗ್ಗೆ ಸಭೆಯಲ್ಲಿ ಹಲವಾರು ಮಾಹಿತಿಗಳನ್ನು ನೀಡಿದರು. ಸಭೆಯನ್ನು ಉದ್ದೇಶಿಸಿ ರೋಟರಿ ಜಿಲ್ಲಾ ರಾಜ್ಯಪಾಲ ವಿಕ್ರಮದತ್ತ, ಪ್ರಸ್ತುತ ಮೈಸೂರಿನಲ್ಲಿರುವ ಇರ್ವತ್ತೂರು ರಾಘವೇಂದ್ರ, ಚೇರ್ಮನ್ ಮುಂದುವರಿಕಾ ವಿಭಾಗದ ಜಗದೀಶ್, ಜಿಲ್ಲಾ ಸೇರ್ಪಡೆ ವಿಭಾಗದ ಕಾರ್ಯದರ್ಶಿ ರಿತೇಶ್ ಬಾಳಿಗ, ವಿಸ್ತಾರ ಕಾರ್ಯಕ್ರಮ ಚೇರ್ಮನ್ ಡಾ. ಹರೀಶ್ ನಾಯಕ್, ಮೂಡುಬಿದಿರೆ ಲೋಟರಿ ಕ್ಲಬ್ ಅಧ್ಯಕ್ಷರ ಅಭಿಪ್ರಾಯ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಜಿಲ್ಲಾ ಸಲಹೆಗಾರರದ ಕೃಷ್ಣ ಶೆಟ್ಟಿ, ಸಮಾಲೋಚಕ ಡಾ. ದೇವದಾಸರ, ಕಲಿಕಾ ಸಂಪನ್ಮೂಲ ಕಾರ ರಘುನಾಥ್ ಭಟ್, ಕಾರ್ಯಕ್ರಮ ಸಂಯೋಜಕ ರವೀಂದ್ರ ಭಟ್, ರಾಮಕೃಷ್ಣ ಪಿಕೆ, ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ಸಲಹೆಗಾರ ಶೇಖರ್ ಶೆಟ್ಟಿ, ಕಾರ್ಯಕ್ರಮ ಕಾರ್ಯದರ್ಶಿ, ರಜನಿ ಭಟ್, ಸಹಾಯಕ ಗವರ್ನರ್ ಡಾ. ಮುರಳಿ ಕೃಷ್ಣ, ಮಹಿಳಾ ಅಭಿವೃದ್ಧಿ ವಿಭಾಗದ ಚೇರ್ಮನ್ ರಚನಾ ನಾಗೇಶ್, ಸಾಮಾಜಿಕ ಕಾಳಜಿ ವಿಭಾಗದ ಚೇರ್ಮನ್ ವೆಂಕಟೇಶ್, ಕಾರ್ಯದರ್ಶಿ ರತ್ನಾಕರ್ ಜೈನ್, ಕಾರ್ಯಕ್ರಮ ಕೋ ಚೇರ್ಮನ್ ಎಂ ಬಿ ಪ್ರಸಾದ್, ವಿಸ್ತಾರ ಕಾರ್ಯಕ್ರಮ ಕಾರ್ಯದರ್ಶಿ ಶ್ರೀಕಾಂತ್ ಕಾಮತ್ ಬಿ, ಡಾ. ಭರತೇಶ್ ಹಾಗೂ ಇತರರು ಹಾಜರಿದ್ದರು. ಸ್ವಾತಿ ಬೋರ್ಕರ್ ಪ್ರಾರ್ಥಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top