ಸೇವಾ ಭಾರತ್ ಮಿಯ್ಯಾರು ಘಟಕದ ಸಹಭಾಗಿತ್ವದಲ್ಲಿ ಅದೃಷ್ಟ ಚೀಟಿ

ಕಾರ್ಕಳ : ಬ್ರಹ್ಮಕಲಶೋತ್ಸವದ ಅಂಗವಾಗಿ ಸೇವಾ ಭಾರತ್ ಮಿಯ್ಯಾರು ಘಟಕದ ಸಹಭಾಗಿತ್ವದಲ್ಲಿ ಅದೃಷ್ಟ ಚೀಟಿಯ( Lucky Dip) ಪುಸ್ತಕವನ್ನು ಧ್ವಜಸ್ತಂಭ ಪ್ರತಿಷ್ಠೆಯ ಶುಭಗಳಿಗೆಯ ದಿನದಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಬಿ.ಗಣಪತಿ ಹೆಗ್ಡೆ ಬಿಡುಗಡೆಗೊಳಿಸಿದರು.
ಬಹುಮಾನ ಕೊಟ್ಟು ಉಳಿದಂತಹ ಮೊತ್ತವನ್ನು ಜೀರ್ಣೋದ್ದಾರದ ಕಾರ್ಯಕ್ಕಾಗಿ ಬಳಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.




































