ಸೇವಾ ಕಾರ್ಯ ತತ್ಪರತೆ ಸಂದ ಪ್ರಶಸ್ತಿ -ಅಭಯ ಚಂದ್ರ ಜೈನ್
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ಮೂಡುಬಿದಿರೆಯ ಎಂ ಸಿ ಎಫ್ ಸೊಸೈಟಿಯ ಸಹಕಾರ ಸಪ್ತಾಹ -2024 ರಲ್ಲಿ ಸಮಗ್ರ ಸಾಧಕ ಪ್ರಶಸ್ತಿಯನ್ನು ಪ್ರದಾನಗೈದು, ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಮಾತನಾಡಿದರು.
ಆತ್ಮೀಯತೆಯಿಂದ ಉದ್ಯಮವನ್ನು ಕಟ್ಟಿ ಬೆಳೆಸಿ ಸೇವಾ ಕಾರ್ಯ ತತ್ಪರತೆ ಯಿಂದ ದುಡಿದ ಕಾರಣ ಇಂದು ನಿಶ್ಮಿತಾ, ಸುಗಮ ಟೂರಿಸ್ಟ್ ಗಳು ಸಾವಿರಾರು ಜನರಿಗೆ ಜೀವನವನ್ನು ನೀಡಿದೆ ಎಂದು ಸಂತಸ ಹಂಚಿಕೊಂಡರು.

ಸೊಸೈಟಿಯ ನಿರ್ದೇಶಕ ಜಯರಾಮ ಕೋಟ್ಯಾನ್ ಅಭಿನಂದನಾ ಭಾಷಣದಲ್ಲಿ ಹಿಂದೆ ಮೂಡುಬಿದಿರೆಯಲ್ಲಿ ಹತ್ತು ವರ್ಷಗಳಲ್ಲಿ 500ಕ್ಕೂ ಹೆಚ್ಚು ಜೋಡಿಗಳಿಗೆ ಸಾಮೂಹಿಕ ವಿವಾಹದಂತಹ ಹಲವಾರು ಸೌಲಭ್ಯವನ್ನು ನಾಗರಿಕರಿಗೆ ಒದಗಿಸಿ ಕೊಡಲಾಗಿತ್ತು . ಅದಕ್ಕೆ ಸಂಪೂರ್ಣ ಸಹಕಾರವನ್ನು ಕೊಟ್ಟವರು ನಾರಾಯಣ ಪಿ.ಎಂ ಅವರು ಎಂದು ಸ್ಮರಿಸಿಕೊಂಡರು.
ಶಾಲು, ಹಾರ, ಸ್ಮರಣಿಕೆ, ತಾಮ್ರ ಪತ್ರ, ಬೆಳ್ಳಿಯ ಫಲಕ, ಫಲ ತಾಂಬೂಲ ಗಳೊಂದಿಗೆ ಸೊಸೈಟಿಯ 4 ನೇ ಸಮಗ್ರ ಸಾಧಕ ಪ್ರಶಸ್ತಿಯ ಸನ್ಮಾನವನ್ನು ಸ್ವೀಕರಿಸಿ ನಾರಾಯಣ ಪಿಎಂ ರವರು ಮೂಡುಬಿದಿರೆಯ ಎಲ್ಲರ ಸಹಕಾರ, ಪ್ರೀತಿ, ಸ್ನೇಹದಿಂದಾಗಿ, ಅಮರನಾಥ ಶೆಟ್ಟಿ ಯುವರ ಪೂರ್ಣ ಬೆಂಬಲದಿಂದಾಗಿ ನನ್ನ ಉದ್ಯಮ ಅಭಿವೃದ್ಧಿಯಾಗಲು ಸಾಧ್ಯವಾಯಿತು. ಸೊಸೈಟಿಯು ಕೂಡ ಉತ್ತಮ ಕೆಲಸ ಮಾಡಿದ ಕಾರಣ ಸಹಕಾರಿ ಮಾಣಿಕ್ಯ ಪ್ರಶಸ್ತಿಯನ್ನು ಪಡೆಯುತ್ತಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಳೆ ಕೊಯ್ಲು ಬಗ್ಗೆ ಉಮೇಶ್ ಶೇಟ್, ಕೃಷಿ ಕಾರ್ಯಕ್ಕೆ ದೇವಣ್ಣ ನಾಯ್ಕ್, ಎಂ ಕೆ ಚಿನ್ನಯ್ಯ, ಮಡಿನಾಕ್ಷಿ ವಸಂತ್, ಕಲ್ಪವೃಕ್ಷ ಆರೋಗ್ಯ ಕಾರ್ಡ್ ಸುನಿಲ್ ಕುಮಾರ್, ಮೇಲ್ವಿನ್ ಡಿ ಕ್ಕುನ್ನ, ಪುಂಡಲೀಕ ಪೈ ಹಾಗೂ ಇತರೆರಿಗೆ ವಿವಿಧ ಯೋಜನೆಗಳ ಸಂಬಂಧ ಚೆಕ್ ವಿತರಿಸಲಾಯಿತು. ಶಿಕ್ಷಣ ನಿಧಿಗೆ ಲಾಭದ ಎರಡು ಶೇಕಡವನ್ನು ಕೇಂದ್ರ ಸಹಕಾರಿ ಬ್ಯಾಂಕಿಗೆ ನೀಡಲಾಯಿತು.
ಗುರು ನಾರಾಯಣ ಸ್ವಾಮಿ ಸೇವಾ ಸಂಘ, ದೇವಾಡಿಗರ ಸುಧಾರಕ ಸಂಘ, ಗಾಣಿಗರ ಸಭಾಭವನ, ವಿಶ್ವಕರ್ಮ ಸಭಾಭವನ, ಪತ್ರಕರ್ತರ ಭವನ, ಶಿವರಾಮ ಕೊರಂಟೈನ್ ಪ್ರತಿಷ್ಠಾನ, ಸ್ಪೂರ್ತಿ ವಿಕಲಚೇತನ ಸಂಸ್ಥೆ ಇತ್ಯಾದಿಗಳಿಗೆ ಆರ್ಥಿಕ ನೆರವಿನ ಹಣಕಾಸನ್ನು ಒದಗಿಸಲಾಯಿತು.
ಸೊಸೈಟಿಯ ಅಧ್ಯಕ್ಷ ಸಹಕಾರ ರತ್ನ ಎಂ ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ, ಉದ್ಯಮಿ ಕೆ ಶ್ರೀಪತಿ ಭಟ್, ದ ಕ ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಕ್ಷ ಕೃಷ್ಣ ಬಳಗ ಮೂಡುಬಿದರೆ ಇವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ ಸ್ವಾಗತಿಸಿದರು. ಚೇತನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.































