ಸೆ.8: ಮೂಡುಬಿದಿರೆಯಲ್ಲಿ ಪ್ರಿಯದರ್ಶಿನಿ ಸೊಸೈಟಿಯ ನೂತನ ಶಾಖೆ ಉದ್ಘಾಟನೆ

Picture of RB NEWS

RB NEWS

Bureau Report

ಹಳೆಯಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಪ್ರಿಯದರ್ಶಿನಿ ಸಹಕಾರ ಸಂಘ ನಿಯಮಿತ,ಹಳೆಯಂಗಡಿ ಅದರ ಮೂಡುಬಿದಿರೆ ಶಾಖಾ ಕಛೇರಿಯು ಜ್ಯೋತಿ ನಗರದಲ್ಲಿರುವ ಮೆಸ್ಕಾಂ ಕಛೇರಿಯ ಎದುರಗಡೆ ಮಹಾಲಸಾ ಕಟ್ಟಡದಲ್ಲಿ ದಿನಾಂಕ 08-09-2025 ರ ಸೋಮವಾರದಂದು ಉದ್ಘಾಟನೆಗೊಳ್ಳಲಿದೆ.

ಹಳೆಯಂಗಡಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು ಮೂಲ್ಕಿ ಮತ್ತು ಪಡುಬಿದಿರೆಯಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು ಇದೀಗ ಗ್ರಾಹಕರ ಸೇವೆಗಾಗಿ ಮೂಡುಬಿದಿರೆಯಲ್ಲಿ ನೂತನ ಶಾಖೆ ತೆರೆದುಕೊಳ್ಳಲಿದೆ. 2021 ರಲ್ಲಿ ಸ್ಥಾಪನೆಗೊಂಡ ಈ ಪ್ರಿಯದರ್ಶಿನಿ ಸಹಕಾರಿ ಸಂಘ(ನಿ)ದಲ್ಲಿ 17ಮಂದಿ ನಿರ್ದೇಶಕರುಗಳಿದ್ದಾರೆ.

ಅದೇ ರೀತಿಯಲ್ಲಿ 3843 ಮಂದಿ ಸದಸ್ಯರಿದ್ದಾರೆ. 2023-24/2024-25 ರ ಸಾಲಿನಲ್ಲಿ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ವಿಶಿಷ್ಟ ಸಾಧಕ ಪ್ರಶಸ್ತಿಯನ್ನೂ ಪಡೆದುಕೊಂಡಿರುತ್ತದೆ. ಹಳೆಯಂಗಡಿಯ ಹೆಚ್. ವಸಂತ ಬರ್ನಾರ್ಡ್ ಅವರು ಸಂಘದ ಅಧ್ಯಕ್ಷರಾಗಿರುತ್ತಾರೆ. ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಶಾಖಾ ಕಛೇರಿಯನ್ನು ಉದ್ಘಾಟಿಸಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top