ಸೆಂಟ್ರಲ್ ಜೈಲಿನಲ್ಲಿ ಐಡೆಂಟಿಫಿಕೇಶನ್ ಪೆರೇಡ್’ ಭಾಗ-11
ಕಲ್ಲಡ್ಕ ಇಸ್ಮಾಯಿಲ್ ಹತ್ಯಾ ಪ್ರಕರಣದ ವಿಚಾರಣೆಯು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದಲ್ಲಿ ಮುಂದುವರಿಯುತ್ತಿದ್ದAತೆಯೇ ಕುತೂಹಲಕಾರಿ ವಿವರಗಳು ಬಹಿರಂಗವಾಗತೊಡಗಿದವು. ಸಿಓಡಿ ಪೊಲೀಸರು ಆರೋಪಿಗಳನ್ನು ಗುರುತಿಸಿ ಬಂಧಿಸಿದ ಬಳಿಕ ಹತ್ಯೆಗೆ ಸಂಬAಧಿಸಿದ ಸಾಕ್ಷö್ಯಗಳನ್ನು ಸಂಗ್ರಹಿಸಿದ್ದರು. ಇದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಸಾಕ್ಷಿಗಳ ಹೇಳಿಕೆ ಪ್ರಮುಖವಾಗಿತ್ತು. ಇಂತಹ ಸಾಕ್ಷಿಗಳ ಪೈಕಿ ಬೆಂಗಳೂರು ನಾರ್ತ್ ಎಕ್ಸಿಕ್ಯೂಟಿವ್ ಮೆಜಿಸ್ಟೆçÃಟ್ ವೆಂಕಟನಾರಪ್ಪ ಅವರು 28ನೇ ಸಾಕ್ಷಿಯಾಗಿದ್ದು, ಅವರು ತಮ್ಮ ಹೇಳಿಕೆಯಲ್ಲಿ ನನಗೆ ಸಿಓಡಿ ಪೊಲೀಸರಿಂದ ಈ ಕೇಸಿನ ಐದನೇ ಆರೋಪಿ ಭೋಜರಾಜ ಸೇಮಿತರು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಇರುವುದು ತಿಳಿಯಿತು. ಅವರ ಬಗ್ಗೆ ಒಂದನೇ ಸಾಕ್ಷಿ ನರಸಿಂಹ ಮಡಿವಾಳರು ಗುರುತು ಹಿಡಿದ ಸಂಬAಧ ಐಡೆಂಟಿಫಿಕೇಶನ್ ಪೆರೇಡ್’ ಮಾಡಬೇಕೆಂದು ಕೇಳಿದ ಪ್ರಕಾರ ನಾನು ತಾ. 29-3-77ರಂದು ಸೆಂಟ್ರಲ್ ಜೈಲಿಗೆ ಹೋಗಿ ಅಲ್ಲಿ ಐಡೆಂಟಿಫಿಕೇಶನ್ ಪೆರೇಡ್ ನಡೆಸಿದೆ. ಆಗ ಐದನೇ ಆರೋಪಿ ಭೋಜರಾಜ ಸೇಮಿತರನ್ನು ಇತರ 12 ಮಂದಿಗಳ ಮಧ್ಯೆ ನಿಲ್ಲಿಸಲಾಗಿತ್ತು. ಒಂದನೇ ಸಾಕ್ಷಿ ನರಸಿಂಹ ಮಡಿವಾಳರು ಅವರನ್ನು ಆ 13 ಜನರ ಮಧ್ಯೆ ಗುರುತಿಸಿದರು. ಆನಂತರ ಆ 13 ಮಂದಿಗೆ ಪೊಲೀಸ್ ಸಮವಸ್ತç ತೊಡಿಸಿ, ಅಷ್ಟು ಮಾತ್ರವಲ್ಲದೆ ಆರೋಪಿ ಸೇಮಿತರಿಗೂ ಪೊಲೀಸ್ ಸಮವಸ್ತç ತೊಡಿಸಿ 13 ಮಂದಿಯನ್ನು ಪುನ: ಸಾಲಿನಲ್ಲಿ ನಿಲ್ಲಿಸಲಾಯಿತು. ಆಗಲೂ ನರಸಿಂಹ ಮಡಿವಾಳರು ಐದನೇ ಆರೋಪಿ ಭೋಜರಾಜ ಸೇಮಿತರ ಪರಿಚಯ ಹಿಡಿದರು’ ಎಂದು ಹೇಳಿದರು. ಪುರಂದರ ಭಟ್ಟರನ್ನು ಗುರುತಿಸಿದೆ 29ನೇ ಸಾಕ್ಷಿ ಬೆಂಗಳೂರಿನ ದೊರೈರಾಜ್ ಅವರು ಹೇಳಿಕೆ ನೀಡುತ್ತನಾನು ಐಎಎಫ್ ಲಾಂಡ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸಾಧಾರಣ 10 ವರ್ಷಗಳ ಹಿಂದೆ ಈ ಮೊಕದ್ದಮೆಯ ಎರಡನೇ ಆರೋಪಿ ಪುರಂದರ ಭಟ್ಟರು ಏರ್ ಫೋರ್ಸ್ನಲ್ಲಿದ್ದರು. ಅವರ ಬಟ್ಟೆಗಳನ್ನು ನಾನು ಮತ್ತು ನಾರಾಯಣ ಎಂಬವರು ದೋಬಿ ಮಡಿ ಮಾಡುತ್ತಿದ್ದೆವು’ ಎಂದು ಹೇಳಿ ಆ ಬಟ್ಟೆಗಳಿಗೆಲ್ಲ ಆಗ ಹಾಕುತ್ತಿದ್ದ ತಮ್ಮದೇ ಆದ ಮಾರ್ಕ್ನ ವಿಚಾರ ತಿಳಿಸಿದರು.
ಅದೇ ಪುರಂದರ ಭಟ್ಟರನ್ನು ಸಿಓಡಿ ಪೊಲೀಸರು ಮಾರ್ಚ್ ತಿಂಗಳಲ್ಲಿ ತಮ್ಮಲ್ಲಿಗೆ ಕರೆದುಕೊಂಡು ಬಂದರು. ಆಗ ಅವರನ್ನು ಹತ್ತು ವರ್ಷಗಳ ಹಿಂದೆ ಐಎಎಫ್ನಲ್ಲಿದ್ದವರೆಂದು ನಾನು ಗುರುತಿಸಿದೆ. ಆಮೇಲೆ ಮೇ ತಿಂಗಳಿನಲ್ಲಿ ಬೆಂಗಳೂರಲ್ಲಿ ಸದ್ರಿ ಪುರಂದರ ಭಟ್ಟರ ಬಟ್ಟೆಗಳನ್ನು ನೋಡಿ ಅವರಲ್ಲಿ ಮೇಲೆ ಹೇಳಿದ ದೋಬಿ ಮಾರ್ಕ್ ನಾವೇ ಮಾಡಿದುದಾಗಿತ್ತು.’ ಎಂದು ವಿವರಿಸಿದರು. ಇದೇ ರೀತಿ 30ನೇ ಸಾಕ್ಷಿ ನಾರಾಯಣ ಅವರೂ ಹೇಳಿಕೆ ನೀಡಿದರು. ದೋಬಿ ಮಾರ್ಕ್ಗಳು ಹೊಸದಾಗಿ ಕಾಣುತ್ತವೆ. ಅವುಗಳನ್ನು ಪೊಲೀಸರು ಮತ್ತೆ ಹಾಕಿಸಿದುದು’ ಎಂದು ಆರೋಪಿಗಳ ಪರ ವಕೀಲರು ಹೇಳಿದಾಗ ಅದನ್ನು ಸಾಕ್ಷಿಗಳಿಬ್ಬರೂ ನಿರಾಕರಿಸಿದರು.
31ನೇ ಸಾಕ್ಷಿ ನಂಜಪ್ಪರವರು ತಮ್ಮ ಹೇಳಿಕೆಯಲ್ಲಿ ನಾನು ಐಎಎಫ್ನಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದೆ. ಈ ಮೊಕದ್ದಮೆಯ ಎರಡನೇ ಆರೋಪಿ ಪುರಂದರ ಭಟ್ಟರು 10 ವರ್ಷಗಳ ಹಿಂದೆ ಐಎಎಫ್ನಲ್ಲಿದ್ದರು. ನಾನು ಅವರ ಬೂಟ್ಸ್ ಮತ್ತು ಬೆಲ್ಟ್ ಗಳನ್ನು ಪಾಲಿಷ್ ಮಾಡಿ ಕೊಡುತ್ತಿದ್ದೆ. ಅದಕ್ಕೆ ಅವರು ತಿಂಗಳಿಗೆ ಮೂರು ರೂಪಾಯಿಗಳಂತೆ ಮಜೂರಿ ನನಗೆ ಕೊಡುತ್ತಿದ್ದರು’ ಎಂದು ಹೇಳಿದರು. ರೂಮ್ ಬಾಯ್ ಹೇಳಿಕೆ 32ನೇ ಸಾಕ್ಷಿ ಸದಾಶಿವ ಎಂಬವರು ನ್ಯಾಯಾಲಯದಲ್ಲಿ ತನ್ನ ಹೇಳಿಕೆ ನೀಡುತ್ತಾ ನಾನು ಬೆಂಗಳೂರಿನ ಗಣೇಶ ಲಾಡ್ಜ್ನಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ. 9-3-77ರಂದು ಈ ಮೊಕದ್ದಮೆಯ 3ನೇ ಆರೋಪಿ ಈಶ್ವರ ಭಟ್ಟರು ಮತ್ತು 5ನೇ ಆರೋಪಿ ಭೋಜರಾಜ ಸೇಮಿತರು ಗಣೇಶ ಲಾಡ್ಜ್ಗೆ ಬಂದು ರೂಮ್ ನಂಬ್ರ 114ನ್ನು ತೆಗೆದುಕೊಂಡರು. ನಾನು ಅವರಿಗೆ ಬೇಕಾದ ಟಿಫಿನ್ ಮೊದಲಾದವುಗಳನ್ನು ತಂದು ಕೊಡುತ್ತಿದ್ದೆ. ತಾ. 15-3-77ರಂದು ಮಧ್ಯಾಹ್ನ ಸುಮಾರು 2 ಗಂಟೆಯ ಸಮಯ ಪೊಲೀಸರು ಬಂದು ಅವರಿಬ್ಬರನ್ನೂ ಕರೆದುಕೊಂಡು ಹೋದರು. ಅಂದೇ ರಾತ್ರಿ 9 ಗಂಟೆೆಗೆ ಸಿಓಡಿ ಪೊಲೀಸರು ಬಂದು ನನ್ನ ಹೇಳಿಕೆ ಪಡೆದರು’ ಎಂದು ವಿವರಿಸಿದರು.
ಅಡ್ಡ ವಿಚಾರಣೆಯಲ್ಲಿ ಹೊಟೇಲಿಗೆ ಯರ್ಯಾರು ಯಾವ್ಯಾವ ಹೊತ್ತಿನಲ್ಲಿ ಬರುತ್ತಾರೆಂದು ನೆನಪಿಟ್ಟು ಹೇಳಲು ಸಾಧ್ಯವಿಲ್ಲವೆಂದಾಗ, ತಮ್ಮ ಹೋಟೇಲಿಂದ ಪೊಲೀಸರು ಬಂದು ಕರೆದುಕೊಂಡು ಹೋದುದು ಅದೇ ಪ್ರಥಮವೆಂದೂ ಸಾಕ್ಷಿ ಹೇಳಿದರು.
ಬೆಂಗಳೂರಿನ ಗಣೇಶ ಲಾಡ್ಜ್ನ ಮೆನೇಜರ್ ನಾಗಪ್ಪಯ್ಯ ಅವರು 33ನೇ ಸಾಕ್ಷಿ. ಅವರು ತಮ್ಮ ಹೇಳಿಕೆಯಲ್ಲಿ ನಾನು ಬೆಂಗಳೂರಿನ ಗಣೇಶ ಲಾಡ್ಜ್ನಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ. 9-3-77ರಂದು 3ನೇ ಆರೋಪಿ ಈಶ್ವರ ಭಟ್ಟರು ಮತ್ತು 5ನೇ ಆರೋಪಿ ಭೋಜರಾಜ ಸೇಮಿತರು ಸಂಜೆ ಸುಮಾರು 6 ಗಂಟೆಗೆ ನಮ್ಮ ಲಾಡ್ಜ್ಗೆ ಬಂದರು. ನಮ್ಮ ಲಾಡ್ಜ್ನಲ್ಲಿ ಇಟ್ಟಿರುವ ರಿಜಿಸ್ಟರ್ನಲ್ಲಿ ಅವರು ಬಂದ ತಾರೀಕು ಹಾಗೂ ಬಂದ ಹೊತ್ತನ್ನು ಬರೆದ ಮೇಲೆ 3ನೇ ಆರೋಪಿ ಈಶ್ವರ ಭಟ್ಟರು ಅವರ ಹೆಸರು, ವಿಳಾಸ ಬರೆದ ಮೇಲೆ ತನ್ನ ಸಹಿ ಹಾಕಿದರು. ಅನಂತರ ರೂಮ್ ನಂಬ್ರ 114ರಲ್ಲಿ 15ನೇ ತಾರೀಕಿನವರೆಗೆ ಇದ್ದರು. 15-3-77ರಂದು ಮಧ್ಯಾಹ್ನ 2 ಗಂಟೆಗೆ ಪೊಲಿಸರು ಬಂದು ಅವರನ್ನು ಕರೆದುಕೊಂಡು ಹೋದರು. ಅಂದೇ ರಾತ್ರಿ 9 ಗಂಟೆ ಸಮಯ ಪೊಲೀಸರು ಮರಳಿ ಬಂದು ನನ್ನ ಹೇಳಿಕೆ ಪಡೆದರು’ ಎಂದರು. ನಮ್ಮ ಲಾಡ್ಜ್ನಲ್ಲಿ ಇಟ್ಟುಕೊಂಡಿದ್ದ ಮೇಲೆ ಹೇಳಿದ ಈಶ್ವರ ಭಟ್ಟರ ಸಹಿ ಇರುವ ಪುಸ್ತಕವನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡರೆAದು ಹೇಳಿದ ಅವರುಅಷ್ಟು ಮಾತ್ರವಲ್ಲ, ಪೊಲೀಸರು ಕರೆದುಕೊಂಡು ಹೋಗುವಾಗ 3ನೇ ಆರೋಪಿ ಈಶ್ವರ ಭಟ್ಟರು ಬಾಡಿಗೆಯ ಬಗ್ಗೆ 52ರೂ. ನನ್ನಲ್ಲಿ ಕೊಟ್ಟರು. ಆ ರೂಮಿಗೆ ದಿನವೊಂದಕ್ಕೆ 12 ರೂ. ಬಾಡಿಗೆ. ಅವರು 52ರೂ. ಕೊಟ್ಟ ಕಾರಣ ಪ್ರಥಮ ದಿನಕ್ಕೆ 12 ರೂ. ಲೆಕ್ಕ ಮಾಡಿ ಉಳಿದ ದಿನಗಳಿಗೆ 8 ರೂ. ರೂಮ್ ಬಾಡಿಗೆ ಹಾಕಿ 52 ರೂ. ಲೆಕ್ಕ ತೋರಿಸಿದೆ’ ಎಂದರು.
ಅಡ್ಡ ವಿಚಾಣೆಯಲ್ಲಿ ಕೋರ್ಟಿನ ಮುಂದೆ ಹಾಜರು ಮಾಡಿದ ಪುಸ್ತಕದಲ್ಲಿ 3ನೇ ಆರೋಪಿ ಈಶ್ವರ ಭಟ್ಟರ ಸಹಿ ಮಾತ್ರ ಇರುವುದಲ್ಲದೆ ಇತರ ಯಾರ ಸಹಿಯೂ ಇಲ್ಲವೆಂದು ಸಾಕ್ಷಿ ಒಪ್ಪಿಕೊಂಡರು.
ಎಲ್ಲಾ ಲಾಡ್ಜಿಂಗ್ಗಳಲ್ಲಿ ಪ್ರಿಂಟಿAಗ್ ಪುಸ್ತಕ ಇಡುತ್ತಾರೆ. ಆದರೆ ನಮ್ಮ ಲಾಡ್ಜ್ನಲ್ಲಿ ಪ್ರಿಂಟಿAಗ್ ಪುಸ್ತಕ ಇದ್ದಿಲ್ಲವೆಂದೂ ಹೇಳಿದರು. ಈ ಪುಸ್ತಕದ ಕಡೆಯಲ್ಲಿರುವಎಂಟ್ರಿ’ ಗಳನ್ನೆಲ್ಲಾ ಪೊಲೀಸರು ಹೇಳಿ ಮಾಡಿದ್ದರೆಂದೂ, ಮೂರನೇ ಅರೋಪಿಯ ಸಹಿಯನ್ನು ಪೊಲೀಸ್ ಸ್ಟೇಶನ್ನಲ್ಲಿ ಪೊಲೀಸರು ಹೆದರಿಸಿ ತೆಗೆದುಕೊಂಡರೆAದೂ ಆರೋಪಿ ಪರ ವಕೀಲರು ಪ್ರಶ್ನಿಸಿದಾಗ ಸಾಕ್ಷಿ ಅದನ್ನು ನಿರಾಕರಿಸಿದರು.
ಪೊಲೀಸರು ಕರೆದರು.
ಬೆಂಗಳೂರಿನ ಸಿ.ಕೆ. ವಿಶ್ವನಾಥ ಅಯ್ಯರ್ ಅವರು 34ನೇ ಸಾಕ್ಷಿಯಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡುತ್ತಾ ನನಗೆ ಬೆಂಗಳೂರಿನ ಶೇಷಾದ್ರಿಪುರ ಪೊಲೀಸ್ ಸ್ಟೇಶನ್ನ ಹತ್ತಿರ ಒಂದು ಹೊಟೇಲಿದೆ. ತಾ. 15-3-77ರಂದು ಸಂಜೆ 6 ಗಂಟೆಯ ಸಮಯ ಪೊಲೀಸರೊಬ್ಬರು ಕರೆದ ಮೇರೆಗೆ ನಾನು ಪೊಲೀಸ್ ಸ್ಟೇಶನ್ಗೆ ಹೋದೆ. ಅಲ್ಲಿಗೆ ಹತ್ತಿರದ ಹಣ್ಣಿನ ವ್ಯಾಪಾರಿ ಮಹಮ್ಮದರೂ ಬಂದರು. ಪೊಲೀಸ್ ಸ್ಟೇಶನ್ನಲ್ಲಿ 3ನೇ ಆರೋಪಿ ಈಶ್ವರ ಭಟ್ಟರು, 5ನೇ ಆರೋಪಿ ಭೋಜರಾಜ ಸೇಮಿತರು, ಸಿಓಡಿ ಇನ್ಸ್ಪೆಕ್ಟರರು ಇದ್ದರು. ನಮ್ಮ ಮುಂದೆ 3ನೇ ಆರೋಪಿಯವರು ಒಂದು ಹೇಳಿಕೆ ಕೊಟ್ಟರು. ಅದರಲ್ಲಿ ಅವರು ಬಟ್ಟೆ ಹೊತ್ತಿಸಿದ ಸ್ಥಳವನ್ನು ತೋರಿಸಿವುದಾಗಿಯೂ, ನಂಬರ್ ಪ್ಲೇಟ್ ಬಿಸಾಡಿದ ಸ್ಥಳವನ್ನು ತೋರಿಸಿವುದಾಗಿಯೂ ಹೇಳಿಕೆ ಕೊಟ್ಟರು. ಆ ಹೇಳಿಕೆಯನ್ನು ಸಿಓಡಿ ಇನ್ಸ್ಪೆಕ್ಟರರು ಬರೆದ ಮೇಲೆ ನಾನು ಮತ್ತು ಮಹಮ್ಮದ್ ಸಹಿ ಹಾಕಿದೆವು’ ಎಂದು ಹೇಳಿದರು. ಅಷ್ಟು ಮಾತ್ರವಲ್ಲದೆ ಆ ಮೇಲೆ ಭೋಜರಾಜ ಸೇಮಿತರ ಹೇಳಿಕೆಯನ್ನು ಪಡೆಯಲಾಯಿತೆಂದೂ ಅವರು ತಿಳಿಸಿದರು. ಪೊಲೀಸರು ಹೇಳಿದ ಹಾಗೆ ಹೇಳಿಕೆ ಬರೆದದ್ದು’ ಎಂದು ಆರೋಪಿ ಪರ ವಕೀಲರು ಹೇಳಿದಾಗ ಸಾಕ್ಷಿ ಹೌದು’ ಎಂದರು. ಸುಟ್ಟ ಬಟ್ಟೆ ತುಂಡುಗಳು 35ನೇ ಸಾಕ್ಷಿ ಹಸನಬ್ಬ ಅವರು ತಮ್ಮ ಹೇಳಿಕೆಯಲ್ಲಿ ತಾ. 17-3-77ರಂದು ನಾನು ಕಾವಳಕಟ್ಟೆಯ ನನ್ನ ಮನೆಯಲ್ಲಿದ್ದಾಗ ಸಿಓಡಿ ಪೊಲೀಸರು ಒಂದು ಟೆಂಪೊ ವ್ಯಾನ್ನಲ್ಲಿ ಬಂದರು. ನನ್ನನ್ನು ಕರೆದರು. ಆಗ ಆ ವ್ಯಾನ್ನಲ್ಲಿ 3ನೇ ಆರೋಪಿ ಈಶ್ವರ ಭಟ್ಟರು, ಸಿಓಡಿ ಪೊಲೀಸರು ಮತ್ತಿತರ ಸಾಕ್ಷಿಗಳಿದ್ದರು. ತಮ್ಮ ಮನೆಗೆ ಹೋಗಲು ಈಶ್ವರ ಭಟ್ಟರು ಟೆಂಪೊ ಚಾಲಕರಿಗೆ ದಾರಿ ತೋರಿಸಿದರು. ಆ ಪ್ರಕಾರ ಬೆಳ್ತಂಗಡಿ ದಾರಿಯಲ್ಲಿ ಒಂದು ಮೈಲು ಹೋಗಿ ಅಲ್ಲಿ ವ್ಯಾನ್ ನಿಂತಿತು. ಅಲ್ಲಿಂದ ಈಶ್ವರ ಭಟ್ಟರು ಎಲ್ಲರನ್ನೂ ತಮ್ಮ ಮನೆಯ ಹಿಂದಿನ ಕಡೆಯಿಂದ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆಗೆ ಕರೆದುಕೊಂಡು ಹೋದರು. ಅಲ್ಲಿ ಒಂದು ಬೂದಿಯ ರಾಶಿ ಇತ್ತು. ಇದೇ ಬಟ್ಟೆ ಸುಟ್ಟ ಸ್ಥಳವೆಂದು ಈಶ್ವರ ಭಟ್ಟರು ತೋರಿಸಿದರು. ಆಮೇಲೆ ಈಶ್ವರ ಭಟ್ಟರೇ ಬೂದಿಯನ್ನು ಕೆದಕಿದಾಗ ಅದರಲ್ಲಿ ಅರ್ಧ ಹೊತ್ತಿದ್ದ ಶರ್ಟ್ ಕಾಲರ್ ಕಾಣ ಸಿಕ್ಕಿತು. ಪೊಲೀಸರು ಅದನ್ನು ಹೆಕ್ಕಿ ಪರಿಶೀಲಿಸಿದಾಗ ಅದರಲ್ಲಿ ಕೆಎಂ ಎಂಬ ದೋಬಿ ಮಾರ್ಕ್ ಇತ್ತು. ಅದು ಸಿಕ್ಕಿ ಸ್ಥಳದಲ್ಲೇ ಅರ್ಧ ಹೊತ್ತಿದ್ದ ಒಂದು ಗೀಟು ಗೀಟಿನ ಬಟ್ಟೆ ಚೂರು ಮತ್ತು ಅರ್ಧ ಹೊತ್ತಿದ್ದ ಬನಿಯನ್ ತುಂಡು ಕೂಡಾ ಸಿಕ್ಕಿತು. ಇವುಗಳನ್ನೆಲ್ಲಾ ಪೊಲೀಸರು ಮಹಜರು ಮೂಲಕ ಸ್ವಾಧೀನಪಡಿಸಿದರು’ ಎಂದು ವಿವರಿಸಿದರು.
ಅಲ್ಲಿಂದ ಈಶ್ವರ ಭಟ್ಟರು ನಮ್ಮೆಲ್ಲರನ್ನು ಮನೆಯ ಮುಂಭಾಗದ ಕೆರೆಯ ಬಳಿ ಕರೆದುಕೊಂಡು ಹೋದರೆಂದು ಹೇಳಿದ ಹಸನಬ್ಬ ಅವರು ಆ ಕೆರೆಗೆ ನಂಬರ್ ಪ್ಲೇಟ್ ಸುಟ್ಟು ಹಾಕಿರುವುದಾಗಿ ತಿಳಿಸಿದರು. ಆ ಕೆರೆಗೆ ವಿದ್ಯುತ್ ಪಂಪ್ ಸೆಟ್ ಜೋಡಿಸಿತ್ತು. ಅದರ ಸಹಾಯದಿಂದ ಕೆರೆಯ ನೀರನ್ನು ತೆಗೆದರೂ ಎಲ್ಲಾ ನೀರನ್ನು ಖಾಲಿ ಮಾಡಲು ಸಾಧ್ಯವಾಗಲಿಲ್ಲ. ಅದರ ಪೈಪ್ ಎಲ್ಲಾ ನೀರನ್ನು ಖಾಲಿ ಮಾಡುವಷ್ಟು ಉದ್ದವಿರದ್ದರಿಂದ ಅಲ್ಲಿ ಸಿಓಡಿ ಪೊಲೀಸರು ಕಾವಲು ನಿಂತರು. ಮಾರನೇಯ ದಿನ ಧರ್ಣಪ್ಪ ಪೂಜಾರಿಯವರ ಕಿರ್ಲೋಸ್ಕರ್ ಡೀಸೆಲ್ ಇಂಜಿನ್ ತೆಗೆದುಕೊಂಡು ಹೋಗಿ ಕೆರೆಯಲ್ಲಿದ್ದ ನೀರನ್ನು ಖಾಲಿ ಮಾಡಲಾಯಿತು. ಕೆರೆಗೆ ಎಲ್ಲರೂ ಇಳಿದು ನೋಡಿದಾಗ 3ನೇ ಆರೋಪಿ ಈಶ್ವರ ಭಟ್ಟರು ಕೆರೆಯಲ್ಲಿ ಇಂತಹ ದಿಕ್ಕಿಗೇ ನಂಬರ್ ಪ್ಲೇಟ್ ಹಾಕಿದ್ದುದಾಗಿ ತಿಳಿಸಿದ ಮೇರೆಗೆ ಆ ಸ್ಥಳದಲ್ಲಿ ಹುಡುಕಿದಾಗ ಎರಡು ನಂಬರ್ ಪ್ಲೇಟ್ಗಳು ಸಿಕಿದವು. ಆ ನಂಬರ್ ಪ್ಲೇಟ್ಗಳನ್ನು ಪೊಲೀಸರು ಸ್ವಾಧೀನಪಡಿಸಿದರು’ ಎಂದು ಹೇಳಿದರು. ಅಡ್ಡ ವಿಚಾರಣೆಯ ವೇಳೆ ಹಸನಬ್ಬ ಅವರು ತುಂಬಾ ವರ್ಷಗಳ ಹಿಂದೆ ಬಂಟ್ವಾಳ ಕೋರ್ಟಿನಲ್ಲಿ ತನ್ನ ಮೇಲೆ ದೊಂಬಿ ಕೇಸೊಂದು ಇತ್ತೆಂದೂ, ಮತ್ತೆ ತನ್ನ ಮೇಲೆ ಯಾವುದೇ ಕಳವಿನ ಕೇಸು ಆಗಿಲ್ಲವೆಂದೂ, ಬಂಟ್ವಾಳ ಠಾಣೆಯಲ್ಲಿ ತನ್ನ ಹೆಸರನ್ನುಕೇಡಿ’ ಎಂದು ದಾಖಲು ಮಾಡಲಾಗಿದೆಯೆಂಬುದು ಸುಳ್ಳೆಂದು ತಿಳಿಸಿದರು.
ಕೆ.ಎಂ. ದೋಬಿ ಮಾರ್ಕ್
36ನೇ ಸಾಕ್ಷಿ ಅರುಣ ಕುಮಾರ್ ಅವರು ತಮ್ಮ ಹೇಳಿಕೆಯಲ್ಲಿ `ನಾನು ಕಲ್ಲಡ್ಕದಲ್ಲಿಯೇ ವಾಸಿಸುತ್ತಿದ್ದು, ನನಗೆ ಮೃತ ಇಸ್ಮಾಯಿಲ್ ರವರ ಮನೆ ಗೊತ್ತಿದೆ. ತಾ. 23-3-77ರಂದು ನನ್ನನ್ನು ಪೊಲೀಸರು ಮೃತ ಇಸ್ಮಾಯಿಲ್ ಅವರÉ ಮನೆಗೆ ಬರ ಹೇಳಿದರು. ನಾನು ಮತ್ತು ಕೆ.ಐ. ಇಸ್ಮಾಯಿಲ್ ಎಂಬವರು ಮೃತ ಇಸ್ಮಾಯಿಲ್ ಅವರ ಮನೆಗೆ ಹೋದೆವು. ಆಗ ಅಲ್ಲಿ ಸಿಓಡಿ ಪೊಲೀಸರು ಇದ್ದರು. ಮೃತ ಇಸ್ಮಾಯಿಲ್ ಅವರ ಹೆಂಡತಿಯು ಮೃತರು ಉಪಯೋಗಿಸುತ್ತಿದ್ದ ಹಳೆಯದಾದ ಒಂದು ಜತೆ ಕೊಲ್ಲಾಪುರದ ಚಪ್ಪಲಿಗಳನ್ನು, ಮೃತರು ಹಿಂದೆ ಧರಿಸಿಕೊಳ್ಳುತ್ತಿದ್ದ ಹಳೆಯ ಶರ್ಟೊಂದನ್ನೂ ಹಾಜರುಪಡಿಸಿದರು. ಆ ಶರ್ಟಿನಲ್ಲಿ ಕೆ.ಎಂ. ಎಂಬ ದೋಬಿ ಮಾರ್ಕ್ ಇತ್ತು’ ಎಂದು ಹೇಳಿದರು.
ಮುಂದುವರಿಯುವುದು….






































