





ಸುಲಿಗೆಕೋರನ ಬಂಧನ
ಹಾಡುಹಗಲೇ ಮಂಗಳೂರು ನಾಗೂರಿಯಲ್ಲಿ ನಡೆದ ಘಟನೆ
ಮಂಗಳೂರು : ಮಂಗಳೂರು ನಗರದ ನಾಗುರಿ ಎಂಬಲ್ಲಿ ಡಿ.28ರ ಮಧ್ಯಾಹ್ನ ವೇಳೆಗೆ ಮೆಡಿಕಲ್ ಶಾಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗೆ ಚೂರಿಯನ್ನು ತೋರಿಸಿ, ಕೈಯಿಂದ ಹಲ್ಲೆ ಮಾಡಿ, ಶಾಪ್ ನ ಕ್ಯಾಶ್ ಡ್ರಾವರ್ ನಲ್ಲಿದ್ದ ರೂ. 19,300 ನಗದು ಹಣ ಸುಲಿಗೆ ಮಾಡಿಕೊಂಡು ಹೋಗಿದ್ದ ಆರೋಪಿಯೊಬ್ಬನನ್ನು
ಕಂಕನಾಡಿ ನಗರ ಠಾಣೆಯ ನಿರೀಕ್ಷಕ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ಪೊಲೀಸರ ತಂಡ ಬಂಧಿಸಿದ್ದಾರೆ.

ಮಂಗಳೂರು ನಗರದ ಬೊಂದೇಲ್ ಚರ್ಚ್ ಹಿಂದುಗಡೆಯ ಪಟ್ರಕೋಡಿ ಕಂಪೌಂಡಿನ ಸುನೀಲ್ (31) ಪ್ರಕರಣದಲ್ಲಿ ಬಂಧಿತ.
ಆರೋಪಿತನನ್ನು ಸುನೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮೆಡಿಕಲ್ ಶೋಪ್ ನಿಂದ ಸುಲಿಗೆಗೈದದ ಮೊತ್ತದಲ್ಲಿ ರೂ. 17,500 ನಗದು ಹಾಗೂ ಸುಲಿಗೆ ಮಾಡಲು ಬಳಸಿದ ಸ್ಕೂಟರ್ ಸೇರಿದಂತೆ ಇತರೆ ಸೊತ್ತುಗಳನ್ನು ಸೇರಿಸಿ ಒಟ್ಟು ರೂ. 1,20,000 ಬೆಲೆ ಬಾಳುವ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ರವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯಲ್ (ಕಾ&ಸು) ಮತ್ತು ರವಿ ಶಂಕರ್ ( ಅಪರಾಧ ಹಾಗೂ ಸಂಚಾರ) ಹಾಗೂ ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್ ರವರ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಠಾಣೆಯ ನಿರೀಕ್ಷಕರಾದ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ಪಿ.ಎಸ್.ಐ ವಿನಾಯಕ ಭಾವಿಕಟ್ಟಿ ಹಾಗೂ ಶಿವಕುಮಾರ್ ಮತ್ತು ಸಿಬ್ಬಂಧಿಗಳಾದ ಜಯಾನಂದ, ಸಂದೀಪ್, ರಾಜೇಸಾಬ್, ಗಂಗಾಧರ್, ರಾಘವೇಂದ್ರ, ಪ್ರದೀಪ್ ಮತ್ತು ದಕ್ಷಿಣ ಉಪ ವಿಭಾಗ ಕಚೇರಿಯ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.































