
ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದೇಗುಲವು ಸೋಣ ಸಂಕ್ರಮಣದ ಪ್ರಯುಕ್ತವಾಗಿ ಐದು ದಿನಗಳ ಕಾಲ
ತೆರೆದು ಕೊಂಡು ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಆಗಸ್ಟ್ 21ರಂದು ದೇಗುಲದ ಸ್ವರ್ಣ ಬಾಗಿಲು ಮುಚ್ಚಲಾಗಿ ಮುಂದಿನ ತಿಂಗಳ ಸಂಕ್ರಮಣ ನಿರ್ನಾಲ ಕಾಲಘಟ್ಟದಲ್ಲಿ ದಿವ್ಯ ಸನ್ನಿದ್ದಿ ತೆರೆಯಲಾಗುತ್ತದೆ.

ಸುರಿಯುತ್ತಿರುವ ಜಡಿ ಮಳೆ ಲೆಕ್ಕಿಸದೇ ಸನ್ನಿಧಾನದತ್ತ ಅಗಮಿಸುತ್ತಿರುವ ಅಯ್ಯಪ್ಪ ಮಾಲೆಧಾರಿಯರು
ಪ್ರತಿತಿಂಗಳ ಸಂಕ್ರಮಣ ಕಾಲಘಟ್ಟದ ಐದು ದಿನಗಳ ಶಬರಿಮಲೆಯ ದಿವ್ಯ ಬಾಗಿಲು ತೆರೆಯುತ್ತದೆ.
ಜಾತಿ-ಧರ್ಮ-ಭಾಷೆ ಇವೆಲ್ಲವನ್ನು ಮೀರಿ, ಅಸಂಖ್ಯಾತ ಭಕ್ತ ಸಮೂಹವು ಪಂಪ ನದಿಯಲ್ಲಿ ಮಿಂದು,ಸುರಿಯುತ್ತಿದ್ದ ಮಳೆಯಲ್ಲಿಯೇ ಮಾಲವ್ರತಾಧಾರಿಗಳು ಇರುಮುಡಿಯನ್ನು ತಲೆಮೇಲಿಟ್ಟು
ನೀಲಿಮಲೆ, ಅಪ್ಪಾಚಿಮೇಡು ಏರಿ ಶರಗುತ್ತಿ , ಶಬರಿಪೀಠ ಪವಿತ್ರ ಶಬರಿಮಲೆ ತಲುಪಿದರು.ಸ್ವಾಮಿಯೇ ಶರಣು ಅಯ್ಯಪ್ಪ ಅನ್ನುವ ಘೋಷಣೆಯೊಂದಿಗೆ ಅಯ್ಯಪ್ಪ ಸ್ವಾಮಿಯ ದಿವ್ಯ ಮೂರ್ತಿ ಕಂಡು ಪುನೀತರಾಗಿದ್ದಾರೆ.



































