ಸುರತ್ಕಲ್ ಇಡ್ಯಾದ ಭರತ್ ಶೆಟ್ಟಿ ಮೇಲೆ ಗೂಂಡಾ ಕಾಯ್ದೆ
ಮಂಗಳೂರು: ನಿರಂತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಕದಡಲು ಕಾರಣನಾಗಿರುವ ಸುರತ್ಕಲ್‌ನ ಇಡ್ಯಾ ಗ್ರಾಮದ ಆಶ್ರಯ ಕಾಲನಿ ನಿವಾಸಿ ಭರತ್ ಶೆಟ್ಟಿ (27) ಎಂಬಾತನ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಿ ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ ಕಳ್ಳಭಟ್ಟಿ ವ್ಯಾಪಾರಿಗಳ ಮಾದಕವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ ಕೊಳಚೆ ಪ್ರದೇಶಗಳನ್ನು ಕಬಳಿಸುವವವರ ವೀಡಿಯೋ ಅಥವಾ ಆಡಿಯೋ ಪೈರೇಟ್ಸ್ ಚಟುವಟಿಕೆಗಳ ತಡೆ ಅಧಿನಿಯಮ 1985 (ಗೂಂಡಾ ಕಾಯ್ದೆ)ಯನ್ನು ಈತನ ಮೇಲೆ ಜ.31ರಂದು ಹಾಕಲಾಗಿದೆ.
ಮಂಗಳೂರು ನಗರ ಪೊಲೀಸ್ ಮತ್ತು ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಈತನ ವಿರುದ್ದ 13 ಗಂಭೀರ ಕ್ರಮಿನಲ್ ಪ್ರಕರಣಗಳಿವೆ. ಕೊಲೆ, ನಾಲ್ಕು ಕೊಲೆಯತ್ನ ಪ್ರಕರಣ, ದರೋಡೆ, ಹಲ್ಲೆ, ಮಹಿಳೆಯರ ಮೇಲೆ ಹಲ್ಲೆ ಮೊದಲಾದವುಗಳು ಇದರಲ್ಲಿ ಸೇರಿವೆ. ನಿರಂತರ ಕಾನೂನು ಕ್ರಮಗಳ ನಡುವೆಯೂ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದ.
ಆದ್ದರಿಂದ ಸಾಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವುದರನ್ನು ತಡೆಯುವ ನಿಟ್ಟಿನಲ್ಲಿ ಆತನ ವಿರುದ್ಧ ಗೂಂಡಾ ಕಾಯ್ದೆಯಡಿ ಮುನ್ನೆಚ್ಚರಿಕಾ ಬಂಧನದ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.





















