ಸುಂದರ ಕಾಷ್ಠ ಶಿಲ್ಪದ ಕೆತ್ತನೆಗಳಿಂದ ಭಕ್ತರ ಹೃನ್ಮನ ಸೂರೆಗೊಳ್ಳುತ್ತಿರುವ ಪುತ್ತೆ ಸೋಮನಾಥೇಶ್ವರನ ಸನ್ನಿಧಿ
- ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ಚೌಟರ ಅರಮನೆಯ ಮೂಲ ಸ್ಥಳ ಪುತ್ತಿಗೆ. ಇಲ್ಲಿನ ಅರಮನೆಗೆ ದೂರದ ಉಳ್ಳಾಲದಿಂದ ಶ್ರೀ ಸೋಮನಾಥೇಶ್ವರನ ಪ್ರಸಾದ ಬರುವಲ್ಲಿ ಅಗುತ್ತಿದ್ದ ವಿಳಂಬವನ್ನು ತಪ್ಪಿಸಲು ಪುತ್ತಿಗೆ ಅರಮನೆಯ ಅನತಿ ದೂರದಲ್ಲಿ ಪುಣ್ಯಕ್ಷೇತ್ರವೊಂದ ನಿರ್ಮಾಣಕ್ಕೆ ಚೌಟರು ಕನಸ್ಸು ಕಂಡಿದ್ದರು. ನಾಗು ನದಿಯ ದಡದ ಹುಲಿ, ದನ ಒಂದಾಗಿ ಒಂದೇ ಪಾತ್ರೆಯಲ್ಲಿ ಆಹಾರ ಸೇವಿಸುತ್ತಿದ್ದ ಪ್ರಶಸ್ತ ಸ್ಥಳವನ್ನು ಗುರುತಿಸಿ ದೇವಾಲಯವನ್ನು ನಿರ್ಮಿಸಲಾಗಿದೆ.





ಅಂತಹ ಪವಿತ್ರ ಪುಣ್ಯಕ್ಷೇತ್ರ ಪುತ್ತಿಗೆಯಲ್ಲಿ ದೇವಾಲಯದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು ನಿನ್ನೆ ರಾತ್ರಿಯಿಂದಲೇ ಪ್ರಾರಂಭವಾಗಿದೆ.
ಸಾವಿರಾರು ಕರಸೇವಕರ ಉತ್ಸಾಹ, ಬಂದ ಭಕ್ತಾದಿಗಳು ದೇವಾಲಯದ ಕಾಷ್ಠ ಶಿಲ್ಪವನ್ನು ನೋಡಿ ಊರಿಗೆ ಊರೇ ಮನ ಮನಸ್ಸು ತುಂಬಿಕೊಂಡು ಸಕಲ ಸಹಕಾರವನ್ನು ನೀಡುತ್ತಿರುವದನ್ನು ಬ್ರಹ್ಮಕಲಶೋತ್ಸವ ಸಮಿತಿ ಕೃತಜ್ಞತಾಪೂರ್ವಕ ಸ್ಮರಿಸಿಕೊಳ್ಳುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಚೌಟರ ಅರಮನೆಯ ಕುಲದೀಪ್ ಎಂ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪುತ್ತಿಗೆ ಗುತ್ತು ಕೊಲಕಾಡಿ ನೀಲೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.





































