ಸುಂದರಾಂಗನಿವ ವೇಣೂರ ಗೊಮ್ಮಟ ದೇವ

Picture of RB NEWS

RB NEWS

Bureau Report

ಸುಂದರ ಸುಂದರ! ಸುಂದರನು ಇವನು!
ಚಂದ್ರನ ಕಾಂತಿಯ! ಮೊಗದವನು!! ಪಲ್ಲವಿ!!

ಸುಂದರಾಂಗನ! ನೋಡ ಬನ್ನಿರೋ!
ಗೊಮ್ಮಟ ದೇವನಿಗೆ! ಹಾಡಿ ಕುಣಿಯಿರೋ!! ಅನು ಪಲ್ಲವಿ!!

ಆಗಸದೆತ್ತರ! ನಿಂತ ಈ ಮಹನೀಯ!
ಜಾಗದ ಸುತ್ತಣ! ದೃಶ್ಯವು ರಮಣೀಯ!
ಬಂದು ನೋಡಿರೋ! ಕಲೆಯ ಸವಿಯಿರೋ!
ಸುಂದರ ಪುರುಷನ! ನೋಡಿ ನಲಿಯಿರೋ!! ೧!!

ಎಲ್ಲಾ ತ್ಯಜಿಸಿ ಬಂದ! ಜಟ್ಟಿ ಇವ ಮಹಾಮಲ್ಲ!
ಇಲ್ಲ ಎನಲಿಲ್ಲ! ಎಲ್ಲಾ ತ್ಯಜಿಸಿದನಲ್ಲ!
ತ್ಯಾಗ ಮಾಡಿದ! ಯೋಗಿಯು ಇವನಾದ!
ಭೋಗವ ತೊರೆದು! ದಿಗಂಬರ ಇವನಾದ!! ೨ !!

ರಂಗು ರಂಗಿನಾ! ಬಣ್ಣದ ನೀರಿನಾ!
ರಂಗಾದ ಅಭಿಷೇಕವ! ನೋಡ ಬನ್ನಿರೋ!
ಅರಸಿನ ಚಂದನ! ಶ್ರೀಗಂಧದ ಲೇಪನ!
ಅಷ್ಟಗಂಧ ಕಲ್ಕ! ಚೂರ್ಣಾದಿ ಮಜ್ಜನ!! ೩ !!

ಕಬ್ಬಿನ ಹಾಲಿನ! ಗೋವಿನ ಹಾಲಿನ!
ಕಲ್ಪವೃಕ್ಷ ಫಲದ! ಜಲಾಭಿಷೇಕ!
ಗೊಮ್ಮಟ ದೇವನ! ಸಂದೇಶವ ಅನುಸರಿಸಿರೋ!
ಹಿಂಸೆಯ ತ್ಯಜಿಸಿರೋ! ಅಹಿಂಸೆಯ ಮೆಚ್ಚಿರೋ!! ೪!!

ಭಕ್ತಿ ಪೂರ್ವಕ ರಚನೆ

ಕಾಂತಾವರ ಶಿವಾನಂದ ಶೆಣೈ ಕಾರ್ಕಳ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top