ಸಿ ಎ ಫೌಂಡೇಶನ್ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ 14 ವಿದ್ಯಾರ್ಥಿಗಳು ತೇರ್ಗಡೆ
RB NEWS
Bureau Report
ಸಿ ಎ ಫೌಂಡೇಶನ್ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ 14 ವಿದ್ಯಾರ್ಥಿಗಳು ತೇರ್ಗಡೆ
ಕಾರ್ಕಳ : ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿ ಎ ಫೌಂಡೇಶನ್ ಫಲಿತಾಂಶವು ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ವರುಣ್ ಸಿ ಕಚತ್ತಿ 306, ದರ್ಶನ್ ಎಂ ಯರಗಲ್ 298, ಅನಿರುದ್ಧ ಕೆ.ಕೆ.280, ಅಂಕಗಳನ್ನು ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಉಳಿದಂತೆ ವಿದ್ಯಾರ್ಥಿಗಳಾದ ಭುವನ್ ಆರ್ ಸಿದ್ದರಾಮ್ 267,ಆದ್ಯ ಎಸ್ ಪಡ್ರೆ 260, ಕೆ ಪಿ ಸಾಯಿ ಕೃಷ್ಣ249, ಅಕ್ಷರ ಎಸ್ ನಾಯಕ್248, ಪವನ್ ಕುಮಾರ್ ಎಲ್.ಎನ್.238, ಭುವನ್ ಎಸ್.227, ಚಿರಾಯು ಎಸ್. ಶೆಟ್ಟಿ 216, ಕಿಶನ್ ಎನ್ 213 ಪೂನಮ್ ಜಿ 209, ಪ್ರೇರಣ ಆರ್. ಹೆಗಡೆ 208, ಹಿತ ರವಿ ಶೆಟ್ಟಿ 206. ಅಂಕಗಳನ್ನು ಗಳಿಸುವುದರ ಮೂಲಕ ಅರ್ಹತೆಯನ್ನು ಗಳಿಸಿಕೊಂಡಿರುತ್ತಾರೆ.
ಪರೀಕ್ಷೆ ಬರೆದಿರುವ 26 ವಿದ್ಯಾರ್ಥಿಗಳಲ್ಲಿ 14ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಅರ್ಹತೆಯನ್ನು ಗಳಿಸಿರುತ್ತಾರೆ. ರಾಷ್ಟ್ರ ಮಟ್ಟದಲ್ಲಿ ಒಟ್ಟು ಫಲಿತಾಂಶದಲ್ಲಿ 14% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ಕ್ರಿಯೇಟಿವ್ ವಿದ್ಯಾ ಸಂಸ್ಥೆಯಲ್ಲಿ ಪರೀಕ್ಷೆ ತೆಗೆದುಕೊಂಡ ಒಟ್ಟು ವಿದ್ಯಾರ್ಥಿಗಳಲ್ಲಿ 53.84% ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ಗಮನಾರ್ಹವಾಗಿದೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು, ಪರೀಕ್ಷಾ ಸಂಯೋಜಕರಾದ ರಾಘವೇಂದ್ರ ಬಿ ರಾವ್ ರವರು ಅಭಿನಂದಿಸಿದ್ದಾರೆ.