‘ಸಿರಿ’ಯಿಂದ ಪ್ರೇರಿತ ಕರಾವಳಿ ಮಹಿಳೆಯರ ಆತ್ಮಶಕ್ತಿ– ಭುವನೇಶ್ವರಿ ಹೆಗಡೆ





ಮಂಗಳೂರು : ಕರಾವಳಿ ಪ್ರದೇಶದ ಮಹಿಳೆಯರ ಆತ್ಮಸ್ಥೈರ್ಯವನ್ನು ಸದಾ ಪ್ರೇರೇಪಿಸುವ ಶಕ್ತಿ, ಇಲ್ಲಿಯ ನಂಬಿಕೆಯ ದೈವ ವಾದ ‘ಸಿರಿ’ಯೇ ಆಗಿದ್ದಾಳೆ. ಸತ್ಯ ಧರ್ಮ ನ್ಯಾಯಗಳ ಪ್ರಖರ ಪ್ರತಿಪಾದಕಿಯಾಗಿ ಸ್ತ್ರೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ದೇವತೆ ಸಿರಿ ಎಂದು ಲೇಖಕಿ ಭುವನೇಶ್ವರಿ ಹೆಗಡೆ ಹೇಳಿದ್ದಾರೆ.
ಮಂಗಳೂರು ನಗರದ ನ್ಯಾಯಾಲಯದ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತಾಡುತ್ತಿದ್ದರು.
ಮಂಗಳೂರು ಬಾರ್ ಎಸೋಸಿಯೇಷನ್ ಹಾಗೂ ನ್ಯಾಯಾಲಯದ ಉದ್ಯೋಗಿಗಳ ಸಂಘಗಳು ಜಂಟಿಯಾಗಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯನ್ನು ದ.ಕ. ಜಿಲ್ಲಾ ಮತ್ತು ಸೆಷನ್ ಹೆಚ್ಚುವರಿ ನ್ಯಾಯಾಧೀಶೆ ಪ್ರೀತಿ. ಕೆ ಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಹೋರಾಟದ ಹಿನ್ನೆಲೆಯನ್ನು ವಿವರಿಸಿ ಅದಕ್ಕಾಗಿ ಹೋರಾಡಿದ ಮಹಿಳೆಯರನ್ನು ಸ್ಮರಿಸಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ,ದಕ್ಷಿಣ ಕನ್ನಡ ಸಾರಿಗೆ ವಿಭಾಗದ ಎ.ಸಿಪಿ. ನಜ್ಮಾ ಫಾರೂಕ್ ಅವರು ಇಂದಿನ ಸುಶಿಕ್ಷಿತ ಮಹಿಳೆಯರ ಎದುರು ಅನೇಕ ಸವಾಲುಗಳಿವೆ. ತಮ್ಮ ಆತ್ಮವಿಶ್ವಾಸದಿಂದ ಅವುಗಳನ್ನು ಎದುರಿಸುವ ಛಲ ಹೊಂದಬೇಕು ಎಂದರು.
ವಿವಿಧ ವಿಭಾಗಗಳ ಹಿರಿಯ ನ್ಯಾಯಾಧೀಶರುಗಳು, ಹಿರಿಕಿರಿಯ ವಕೀಲೆಯರು, ಸಿಬ್ಬಂದಿಗಳು ಹಾಜರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ವಹಿಸಿದ್ದರು.
ರಶ್ಮಿ ವಂದನಾರ್ಪಣೆ ಗೈದರು.
ವರದಿ: ಅನುಷ್ ಪಂಡಿತ್ ಮಂಗಳೂರು




































