ಸಿಪಿಐ(ಎಂ) ದ.ಕ. ಜಿಲ್ಲಾ ನೂತನ ಕಾರ್ಯದರ್ಶಿಯಾಗಿ ಮುನೀರ್ ಕಾಟಿಪಳ್ಳ ಆಯ್ಕೆ

Picture of RB NEWS

RB NEWS

Bureau Report

ಮಂಗಳೂರು : ಸಿಪಿಐ(ಎಂ) ದ.ಕ.ಜಿಲ್ಲಾ ನೂತನ ಕಾರ್ಯದರ್ಶಿಯಾಗಿ ಮುನೀರ್ ಕಾಟಿಪಳ್ಳ ಆಯ್ಕೆಯಾಗಿದ್ದಾರೆ.

ಮಂಗಳೂರುನಲ್ಲಿ ಇತ್ತೀಚೆಗೆ ಮೂರು ದಿನಗಳ ಕಾಲ ನಡೆದ ಸಿಪಿಐ(ಎಂ) 24ನೇ ದ.ಕ.ಜಿಲ್ಲಾ ಸಮ್ಮೇಳನದಲ್ಲಿ‌ಆಯ್ಕೆ ಪ್ರಕ್ರಿಯೆ‌ ನಡೆದಿದೆ. ಈ ಸಮ್ಮೇಳನವು ಮುಂಬರುವ ಮೂರು ವರ್ಷಗಳ ಕಾಲಾವಧಿಗೆ ನೂತನ ಜಿಲ್ಲಾ ಸಮಿತಿಯನ್ನು ಅಂತಿಮಗೊಳಿಸಲಾಗಿದೆ.

ಸಮ್ಮೇಳನದ ಮಾರ್ಗದರ್ಶಕರಾಗಿ ಸಿಪಿಐ(ಎಂ) ಪೋಲಿಟ್ ಬ್ಯೂರೋ ಸದಸ್ಯ ಎಂ.ಎ ಬೇಬಿ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಬಸವರಾಜ್,ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ.ಕೆ.ಪ್ರಕಾಶ್ ಭಾಗವಹಿಸಿದ್ದರು.

ನೂತನ ಜಿಲ್ಲಾ ಸಮಿತಿ ಸದಸ್ಯರಾಗಿ ಜಯಂತ ನಾಯ್ಕ್,ರಮಣಿ ಮೂಡಬಿದ್ರೆ, ಯೋಗೀಶ್ ಜಪ್ಪಿನಮೊಗರು, ಬಿ ಕೆ ಇಮ್ತಿಯಾಜ್,ಸಂತೋಷ್ ಬಜಾಲ್,ಮನೋಜ್ ವಾಮಂಜೂರು,ವಸಂತಿ ಕುಪ್ಪೆಪದವು,ರಫೀಕ್ ಹರೇಕಳ,ಪ್ರಮೀಳಾ ಶಕ್ತಿನಗರ,ರಾಧಾ ಮೂಡಬಿದ್ರೆ, ಈಶ್ವರೀ ಬೆಳ್ತಂಗಡಿಯವರನ್ನು ಆರಿಸಲಾಯಿತು.ನೂತನ ಜಿಲ್ಲಾ ಸಮಿತಿಗೆ ಶೇಖರ್ ಕುಂದರ್ ಕುತ್ತಾರ್ ರವರು ಖಾಯಂ ಆಹ್ವಾನಿತರಾಗಿ ಆಯ್ಕೆಗೊಂಡರೆ,ಜೆ ಬಾಲಕೃಷ್ಣ ಶೆಟ್ಟಿಯವರನ್ನು ವಿಶೇಷ ಆಹ್ವಾನಿತರನ್ನಾಗಿ ಆಯ್ಕೆಗೊಳಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top