ಸಿದ್ಧರಾಮಯ್ಯ ರಾಜೀನಾಮೆ ಅಗತ್ಯವಿಲ್ಲ
ಮುಡಾ ಸೈಟ್ ಪ್ರಕರಣದಲ್ಲಿ ಕೋರ್ಟ್ ತೀರ್ಮಾನ ಏನೇ ಬಂದರೂ ಕೂಡಾ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತನ್ನ ಹುದ್ದೆಗೆ ರಾಜೀನಾಮೆ ಕೊಡುವ ಅಗತ್ಯವಿರುವುದಿಲ್ಲ.
ಜನತೆಯಿಂದ ಆರಿಸಿ ಬಂದಿರುವ ಜನಪ್ರತಿನಿಧಿಗಳು ರಾಜ್ಯದ ಎಲ್ಲ ಜನರ ಪರವಾಗಿ ಒಬ್ಬ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ.ಆ ಒಂದು ಪೂರ್ಣ ಬೆಂಬಲದ ಶಾಸಕ ಗುಂಪಿಗೆ ಸರಕಾರ ರಚಿಸಲು ರಾಜ್ಯಪಾಲರು ಅಂಗೀಕಾರ ಕೊಡುವುದಷ್ಟೇ ಅಲ್ಲದೆ ಪ್ರಮಾಣ ವಚನ ಬೋಧನೆಯನ್ನೂ ಮಾಡಿತ್ತಾರೆ.
ಪ್ರಜಾಪ್ರಭುತ್ವದ ಸಾರ್ವಭೌಮತೆಯನ್ನು ಕುಗ್ಗಿಸುವುದಕ್ಕೆ ನ್ಯಾಯಾಲಯಕ್ಕೆ ಅಧಿಕಾರವಿರುವುದಿಲ್ಲ. ಕಾಂಗ್ರೆಸ್ ಪಕ್ಷ ಶಾಸಕರೊಳಗೆ ಭಿನ್ನಮತ ಹುಟ್ಟಿಕೊಂಡು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡು ಇನ್ನೊಬ್ಬನಿಗೆ ಬೆಂಬಲ ಕೊಡುವಂತಹ ಗುಂಪುಗಾರಿಕೆಯೇನಾದರೂ ಹುಟ್ಚಿಕೊಂಡರಷ್ಟೆ ಅಲ್ಲಿಯ ಆಡಳಿತಾತ್ಮಕ ಬಿರುಕು ಮತ್ತು ಆಡಳಿತ ವೈಫಲ್ಯ,ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆ ಎನ್ನುವ ಬಲವಾದ ಕಾರಣವನ್ನು ರಾಷ್ಟ್ರಪತಿಯವರಿಗೆ ವರದಿ ಕೊಟ್ಟು ಸರಕಾರವನ್ನು ಅಮಾನತ್ತು ಮಾಡಬಹುದು.
ಕೇಂದ್ರ ಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಈ ಹಿಂದೆ ತಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹದಿನೇಳು ಶಾಸಕರನ್ನು ಮುಂಬೈಗೆ ಕಳುಹಿಸಿ ಸರಕಾರ ಬೀಳಿಸಿದ್ದರ ಹಿಂದೆ ಸಿದ್ಧರಾಮಯ್ಯನವರ ನೇರ ಕೈವಾಡ ಇತ್ತು ಎನ್ನುವ ಒಂದೇ ಒಂದು ನೋವು,ಸೇಡಿಗೋಸ್ಕರ ಈ ಎಲ್ಲ ಹೋರಾಟವನ್ನು ವಹಿಸಿಕೊಂಡಿದ್ದಾರೆ. ಆರು ತಿಂಗಳೊಳಗೆ ಸಿದ್ದರಾಮಯ್ಯರನ್ನು ಕೆಳಗಿರುವ ಹೊಣೆಗಾರಿಕೆ ತನ್ನದು ಎಂದು ಕೇಂದ್ರದ ಬಿಜೆಪಿ ವರಿಷ್ಟರಿಗೆ ಮಾತು ಕೊಟ್ಟದ್ದರಿಂದಲೇ ರಾಜ್ಯ ಬಿಜೆಪಿ ಕೂಡಾ ಸೇರಿಕೊಂಡಿರುವುದು.ಇದೀಗ ಬಿಜೆಪಿ ನಾಯಕರಿಗೆ ತಮ್ಮ ಕಾಲಿಗೆ ಬಿಸಿನೀರು ತಾವೇ ಬಿಟ್ಟುಕೊಂಡಂತಾಗಿದ್ದು ವಿಪರ್ಯಾಸ!
ಮುಂದಿನ ದಿನಗಳಲ್ಲಿ ಹೆಚ್. ಡಿ. ಕುಮಾರ ಸ್ವಾಮಿಗೇನಾದರೂ ಜೈಲಿಗೆ ಹೋಗುವ ಅವಕಾಶ ಒದಗಿದ್ದಲ್ಲಿ , ಹಾಲು ಕುಡಿಯುವವರ ಸಾಲಿನಲ್ಲಿ ಮೊದಲನೆಯವರು ಬಿಜೆಪಿ ಪದಾಧಿಕಾರಿಗಳೇ ಆಗುತ್ತಾರೆ ಅ ನಂತರ ಕಾಂಗ್ರೆಸ್ ಸರದಿ.
ಸಿದ್ದರಾಮಯ್ಯ ಅವರನ್ನು ಹುದ್ದೆ ತ್ಯಜಿಸುವುದಕ್ಕೆ ಎ ಐ ಸಿ ಸಿ ಕೇಳಿಕೊಂಡದ್ದೇ ಆದಲ್ಲಿ ಕಾಂಗ್ರೆಸ್ ಪಕ್ಷವು ಹಿಂದುಳಿದವರ,ದಲಿತರ ಬೆಂಬಲವನ್ನು ಕಳೆದುಕೊಳ್ಳುವುದಂತೂ ನಿಜ. ಹಾಗೇನಾದರೂ ಸ್ವತಃ ಸಿದ್ಧರಾಮಯ್ಯನವರೇ ಸ್ವಂತ ಇಚ್ಚೆಯಿಂದ ಹುದ್ದೆ ತ್ಯಜಿಸಿದರೂ ಅವರ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಆಗಿರುತ್ತಾರೆ.ಅದಾದಾಗ ಡಿ ಕೆ ಶಿ ಮತ್ತು ಜಾರಕಿಹೊಳಿವರು ಭಿನ್ನಮತಕ್ಕೆ ಇಳಿಯುತ್ತಾರೊ ಕಾದು ನೋಡಬೇಕು.
ಈ ಹಿಂದೆ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದ ರಾಜೀವ್ ಗಾಂಧಿಯವರ ಅವಿವೇಕದ ನಿರ್ಧಾರದಿಂದಾಗಿಯೇ ಲಿಂಗಾಯತ ಸಮುದಾಯವೇ ಕಾಂಗ್ರೆಸ್ ಪಕ್ಷದಿಂದ ದೂರವಾಗಿ ಇವತ್ತಿಗೂ ಕಾಂಗ್ರೆಸ್ ವಿರೋಧಿಯಾಗಿ ಉಳಿದಿರುವುದು ಕರ್ನಾಟಕದ ರಾಜಕೀಯ ಇತಿಹಾಸ.
-ವಿ. ಕೆ. ವಾಲ್ಪಾಡಿ






































