ಸಿದ್ಧಕಟ್ಟೆ ನೂಯಿ ಮನೆಯ ಭಾರತಿ ಗಡಿ ರಕ್ಷಣಾ ಪಡೆಗೆ ಆಯ್ಕೆ

Picture of RB NEWS

RB NEWS

Bureau Report

ಲೇಖನ : ರಾಯಿ ರಾಜಕುಮಾರ ಮೂಡುಬಿದಿರೆ

ಬಂಟ್ವಾಳ : ಸಿದ್ದಕಟ್ಟೆಯ ನೂಯಿ ಮನೆಯ ಭಾರತಿ ಶೆಟ್ಟಿ ಇವರು ಗಡಿರಕ್ಷಣಾ ಪಡೆಗೆ ಆಯ್ಕೆಯಾಗಿದ್ದಾರೆ.

ಖಾಸಗಿ ಬಸ್ಸು ಚಾಲಕ ಗಂಗಾಧರ ಶೆಟ್ಟಿ ಹಾಗೂ ಬೀಡಿ ಕಟ್ಟುವ ಕಾಯಕದ ಸರೋಜಾ ರವರ ನಲ್ಮೆಯ ಮಗಳು ಭಾರತಿ ಶೆಟ್ಟಿ ಅವರು ಎಲಿಯ ನಡುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದಿದ್ದರು. ಸಿದ್ದಕಟ್ಟೆಯ ಸರಕಾರಿ ಪ್ರೌಢಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪದವಿ ಕಾಲೇಜುಗಳಲ್ಲಿ ಬಿಕಾಂ ಶಿಕ್ಷಣ ಪೂರ್ಣಗೊಳಿಸಿದ್ದಾರೆ.

ಪ್ರಸ್ತುತ ಮುಂಬೈಯ ಭಾರತೀಯ ಸೇನೆಯಲ್ಲಿರುವ ಪೊಳಲಿ-ಬಿ ಸಿ ರೋಡ್ ನ ಸ್ಕಂದರಾಜ್ ಅವರ ಸತತ ಪ್ರೋತ್ಸಾಹ, ಬೆಂಬಲ, ಮಾರ್ಗದರ್ಶನದಿಂದ ಕೇಂದ್ರದ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅವರ ಗಡಿರಕ್ಷಣಾ ಪರೀಕ್ಷೆಯನ್ನು ಫೆಬ್ರವರಿ 2024ರಲ್ಲಿ ಪೂರೈಸಿದರು.

ಶಾರೀರಿಕ ದೇಹದಾಢ್ಯದ ಪರೀಕ್ಷೆಯನ್ನು ಸೆಪ್ಟೆಂಬರ್ 2024ರಲ್ಲಿ ಮೈಸೂರಿನಲ್ಲಿ ಪೂರ್ಣಗೊಳಿಸಿಕೊಂಡರು. ಈ ರೀತಿ ಎಲ್ಲ ರೀತಿಯ ಪರೀಕ್ಷೆಗಳನ್ನು ಪೂರೈಸಿಕೊಂಡು ಇದೀಗ ನವೆಂಬರ್ 14ರಂದು ಗಡಿರಕ್ಷಣಾಪಡೆಗೆ ಆಯ್ಕೆಗೊಂಡಿರುತ್ತಾರೆ.

2025 ರಲ್ಲಿ ತರಬೇತಿ ಪ್ರಾರಂಭಗೊಳ್ಳಲಿದ್ದು ಸ್ಥಳದ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ. ಎಲ್ಲ ರೀತಿಯ ಪರೀಕ್ಷೆಗಳಲ್ಲೂ ಯಶಸ್ವಿಯಾದ ಇವರು ಗಡಿರಕ್ಷಣಾ ಪಡೆಯ ತರಬೇತಿಯಲ್ಲಿಯೂ ಕೀರ್ತಿಯನ್ನು ಸಂಪಾದಿಸಲಿ ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿಸಲಿ ಎಂಬುವುದು ಅಶಯವಾಗಿದೆ.

ಭಾರತಿಯ ಅಣ್ಣ ಮನೀಶ್ ಅಟೋಮೊಬೈಲ್ ಡಿಪ್ಲೋಮಾ ಪೂರೈಸಿ, ಬೆಂಗಳೂರಿನಲ್ಲಿ ದುಡಿಯುತ್ತಿದ್ದಾರೆ. ಅಕ್ಕ ದೀಕ್ಷಿತಾ ಪದವಿ ಪೂರೈಸಿದ ತರುವಾಯ ಮದುವೆಯಾಗಿ ಗಂಡನ ಮನೆಯಲ್ಲಿ ನೆಲೆಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top