ಸಿದ್ಧಕಟ್ಟೆ, ಎಡಪದವಿನಲ್ಲಿ ರೋಟೋ ಕನೆಕ್ಟ್
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ರೋಟರಿ ಸಂಸ್ಥೆಯು ರೋಟೋ ಕನೆಕ್ಟ್ ಎಂಬ ವಿಶಿಷ್ಟ ಜನೋಪಯೋಗಿ ಅರಿವು ಮೂಡಿಸುವ ಕಾರ್ಯಗಳು ಸಿದ್ದಕಟ್ಟೆ ಹಾಗೂ ಎಡಪದವಿನಲ್ಲಿ ಆಯೋಜಿಸಿತು.

ಸಂಪನ್ಮೂಲ ವ್ಯಕ್ತಿಗಳಾಗಿ ರೋ. ಡಾ. ಪ್ರಸನ್ನ ಕಾಕುಂಜೆ ಇವರು ಜೀವನ ಶೈಲಿ ಬದಲಾವಣೆ ಹಾಗೂ ಆಹಾರ ಪದ್ಧತಿ ಎಂಬ ವಿಷಯದ ಬಗ್ಗೆ ಅರಿವು ಮೂಡಿಸಿದರು .
ಸೈಬರ್ ಫಾರೆನ್ಸಿಕ್ ತಜ್ಞರಾದ ಶಶಿಧರ ಪಟ್ಗಾರ್ ರವರು ಸೈಬರ್ ಕ್ರೈಂ. ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದರು.
ಗುರುಪ್ರಸಾದ್ ಕೆ ಎಸ್ ರವರು ಪೋಸ್ಟಲ್ ಸೇವೆಗಳಲ್ಲಿ ಜನಸಾಮಾನ್ಯರಿಗೆ ಸಿಗುವ ಲಾಭಗಳ ಬಗ್ಗೆ ವಿವರಿಸಿದರು .
ಎರಡೂ ಕಾರ್ಯಕ್ರಮದಲ್ಲಿ ಅಧಿಕ ಜನರು ಆಗಮಿಸಿದ್ದರು. ಕಾರ್ಯಕ್ರಮವನ್ನು ರೋಟರಿ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ರೋ. ಎ.ಕೆ ರಾವ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ರೋಟರಿ ಸಂಸ್ಥೆಗಳ ಧ್ಯೇಯೋದ್ದೇಶವನ್ನು ತಿಳಿಸಿದರು.
ಶಾಲಾ ಸಂಚಾಲಕ ರೋ.ಪ್ರವೀಣ್ ಚಂದ್ರ ಜೈನ್ , ರೋ ಡಾ ಸುದೀಪ್ , ರೋ ಸೂರಜ್ ಬನ್ನಡ್ಕ ,
ಮುಖ್ಯೋಪಾಧ್ಯಾಯಿನಿ ತಿಲಕ್ ಅನಂತವೀರ ಜೈನ್ , ಆಡಳಿತಾಧಿಕಾರಿ ಪ್ರಫುಲ್ ಡಿಸೋಜಾ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಹಾಜರಿದ್ದು , ಶ್ರೀಮತಿ ಮಾಲತಿ ಹಾಗೂ ಶ್ರೀಮತಿ ಜಯಂತಿ ರವರು ಕಾರ್ಯಕ್ರಮ ನಿರೂಪಿಸಿದರು

































