
ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ, ಕಂಪನಿಗೆ ಮುತ್ತಿಗೆ
ಕಾರ್ಕಳ : ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಹಾಗೂ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ (ಸಿಐಟಿಯು) ನೇತೃತ್ವದಲ್ಲಿ ನ.23ರಂದು ಕಾರ್ಕಳದ P.K.T.P.(ಟೆಲಿಫೋನ್) ಕಂಪೆನಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬೀಡಿ ಎಲೆ ಹಾಳಾಗಿದ್ದು ಸರಿಪಡಿಸಲು ಹಲವು ಬಾರಿ ಎಚ್ಚರಿಕೆಯನ್ನು ನೀಡಲಾಗಿದ್ದರೂ ಅದನ್ನು ಗಣನೆಗೆ ತೆಗೆದಯದೇ ಹೋದುದರಿಂದ ಸಿಐಟಿಯು ಸಂಘಟನೆಯ ನೇತೃತ್ಬದಲ್ಲಿ ಪ್ರತಿಭಟನೆ ನಡೆಸಿ ಕಂಪನಿಗೆ ಮುತ್ತಿಗೆ ಹಾಕಲಾಯಿತು.
ಕಂಪನಿಯ ಮ್ಯಾನೇಜರ್ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಹಳೇ ಎಲೆ ಖಾಲಿಮಾಡಲಾಗಿದೆ. ಹೊಸ ಬೀಡಿ ಎಲೆ ತರಿಸಲಾಗಿದೆ. ಎರಡು ದಿನಗಳಲ್ಲಿ ಕಾರ್ಮಿಕರಿಗೆ ವಿರತರಿಸಲಾಗುವುದು ಎಂದು ಹೇಳಿದರು.
ಸಂಘದ ಮುಖಂಡರು ಹಾಗೂ ಕಾರ್ಮಿಕರು ಎಲೆ ಸಂಸ್ಕರಿಸುವ ( ಗೊಡೌನ್) ಸ್ಥಳಕ್ಕೆ ಹೋಗಿ ಪರಿಶಿಲಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.



ಪ್ರತಿಭಟನೆಯನ್ನು ಉದ್ದೇಶಿಸಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್, ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷ ರಾದ ಬಲ್ಕೀಸ್,ಕಾರ್ಯದರ್ಶಿ ಉಮೇಶ್ ಕುಂದರ್ ಮಾತನಾಡಿದರು.
ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಮುಖಂಡರಾದ ನಳಿನಿ.ಎಸ್,ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸುನೀತ ಶೆಟ್ಟಿ, ಕೋಶಾಧಿಕಾರಿ ಸುಮತಿ ಮುಖಂಡರಾದ ಜಯಂತಿ, ಅನಿತ,ಶಕುಂತಲಾ,ಮಾಲತಿ, ಉಪಸ್ಥಿತರಿದ್ದರು. ಸಿಐಟಿಯು ಕಾರ್ಕಳ ತಾಲೂಕು ಮುಖಂಡರಾದ ನಾಗೇಶ್ ಉಪಸ್ಥಿತರಿದ್ದರು.




































