ಸಿಂಗಾರಿ ಬೀಡಿ ಮಾಲಿಕನ “ಮನೆ” ದರೋಡೆ ಪ್ರಕರಣ: ಮಾಸ್ಟರ್ ಮೈಂಡ್ ಎಎಸ್ಐ ಸಹಿತ ನಾಲ್ವರ ಬಂಧನ

Picture of RB NEWS

RB NEWS

Bureau Report

ವಿಟ್ಲ: ಬೋಳಂತೂರು ನಾರ್ಶ ಸುಲೈಮಾನ್ ಹಾಜಿ ಅವರ ಮನೆಗೆ ಇಡಿ ಅಧಿಕಾರಿಗಳಂತೆ ನಟಿಸಿ, ದಾಳಿ ನಡೆಸಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರುಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ತ್ರಿಶೂರು ಕೊಡಂಗಲ್ಲೂರು ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಶಹೀರ್ ಬಾಬು (49)ನನ್ನು ವಿಟ್ಲ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಇಕ್ಸಾಲ್ ಪರ್ಲಿಯ ಬಂಟ್ವಾಳ (38), ಸಿರಾಜುದ್ದೀನ್ ನಾರ್ಶ (37) ಮತ್ತು ಅಬ್ಬಾರ್ ಬಜಾಲ್ (28) ಅವರು ಬಂಧಿಸಲ್ಪಟ್ಟ ಇತರ ಮೂವರು ಆರೋಪಿತರು.

ಜನವರಿ 3 ರಂದು ಈ ಘಟನೆ ನಡೆದಿತ್ತು. ಇ.ಡಿ ಅಧಿಕಾರಿಗಳೆಂದು ನಂಬಿಸಿ ಸಿಂಗಾರಿ ಬೀಡಿ ಮಾಲಿಕರ ಮನೆಗೆ ನುಗ್ಗಿ ಹಣ ಲೂಟಿಗೈದ ಆರೋಪಿತರು ಪರಾರಿಯಾಗಿದ್ದರು.

ವಿಟ್ಲ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಕೇರಳದ ಕೊಟ್ಟಾಯಂನ ಅನಿಲ್ ಫೆರ್ನಾಂಡಿಸ್, ಸಚಿನ್‌ ಮತ್ತು ಶಬಿನ್ ಎಂಬವರನ್ನು ಈ ಹಿಂದೆಯೇ ಬಂಧಿಸಿದ್ದರು.

ಉದ್ಯಮಿ ಸುಲೈಮಾನ್ ಅವರು ಬಿ.ಸಿ ರೋಡಿನ ಸಮೀಪವಿರುವ ತನ್ನ ಜಾಗವನ್ನು ಕೋಟಿ ಕೋಟಿಗೆ ವಹಿವಾಟು ನಡೆಸಿ, ಆ ಹಣವನ್ನು ಮನೆಗೆ ತರದೆ ತನ್ನ ಆಪ್ತರೊಬ್ಬರಲ್ಲಿ ನೀಡಿದ್ದರು. ದರೋಡೆಯಾಗುವ ಕೆಲವು ಗಂಟೆ ಮುಂಚೆಯಷ್ಟೇ ಆ ಹಣ ಸುಲೈಮಾನ್ ಹಾಜಿಯವರ ಮನೆ ಸೇರಿತ್ತು.

ಶನಿವಾರದಂದು ಬೀಡಿ ಕಾರ್ಮಿಕರಿಗೆ ಬಟವಾಡೆ ನೀಡಲು ಇಟ್ಟಿದ್ದ ಕೋಟಿಗೂ ಅಧಿಕ ಮೊತ್ತ ಹಣವೂ ಇವರ ಬಳಿಯಿತ್ತು.

ಜಾರಿ ನಿರ್ದೇಶನಾಲಯ ಅಧಿಕಾರಿಯೆಂದು ಮನೆ ಪ್ರವೇಶಿಸಿ ಹಣ ಲೂಟಿದ ದರೋಡೆಕೋರರ ತಂಡ ಬೀಡಿ ಕಾರ್ಮಿಕರಿಗೆ ಬಟವಾಡೆ ಮಾಡುವ ಹಣ ಮಾತ್ರವಲ್ಲ, ಜಾಗ ಮಾರಾಟದ ಹಣ ಎಲ್ಲಿದೆ ಎಂದು ನೇರವಾಗಿ ಕೇಳಿದ್ದರು.

ಸುಲೈಮಾನ್ ಹಾಜಿ ಅವರ ಮನೆಗೆ ಈ ಹಿಂದೆಯೊಮ್ಮೆ incom Tex ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಅವತ್ತು ಅಧಿಕಾರಿಗಳು ಕೇಸ್ ಮಾಡದೆ ಸೆಟ್ಸ್ ಮೆಂಟ್ ನಡೆಸಿ ಅಲ್ಲಿಂದ ತೆರಳಿದ್ದರಂತೆ. ಆದರೆ ಇದೀಗ ದಾಳಿ ನಡೆಸಿದ ಅಧಿಕಾರಿಗಳು ಹಿಂದಿನ ಕೇಸ್ ಅನ್ನು ರೀ ಓಪನ್ ಮಾಡುತ್ತೇವೆ, ತಮ್ಮ ಮಗನ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಸಿದ ಕಾರಣ ಉದ್ಯಮಿ ಸೇಫಾಗಿ ಇಟ್ಟಿದ್ದ ಜಾಗ ಮಾರಾಟದ ಹಣವನ್ನು ತಂದು ತೋರಿಸಿದ್ದಾರಂತೆ. ನಕಲಿ ಅಧಿಕಾರಿಗಳು ಚಿನ್ನ, ಒಡವೆಗಳನ್ನು ಅಲ್ಲಿಯೇ ಬಿಟ್ಟು ತಮಗೆ ಬೇಕಾದಷ್ಟು ಹಣ ಸಿಕ್ಕಿದ ಕಾರಣ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ತನಿಖೆಯ ಜಾಡು ಹಿಡಿದು ಹೋದ ಪೊಲೀಸರು ಕೊಡುಂಗಲ್ಲೂರು ಎಎಸ್‌ಐ ಶಹೀರ್ ಬಾಬು ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಗಾರಿ ಬೀಡಿ ಮಾಲಿಕರ ದರೋಡೆ ಕೃತ್ಯದ ಮಾಸ್ಟರ್ ಮೈಂಡ್ ರಿಯಲ್ ಪೊಲೀಸ್‌ ಆಗಿದ್ದು, ಆರೋಪಿಗಳನ್ನು ಇ.ಡಿ ಅಧಿಕಾರಿಯಾಗಿ ನಟಿಸಲು ತರಬೇತಿ ಕೊಟ್ಟಿದ್ದೇ ಈತ. ದರೋಡೆಯ ನಂತರ ತನ್ನ ಪಾಲಿನ ಹಣವನ್ನು ತೆಗೆದುಕೊಂಡು ಹೋಗಿ ಕರ್ತವ್ಯಕ್ಕೆ ಹಾಜರಾಗಿದ್ದ. ಯಾರಿಗೂ ಅನುಮಾನ ಬಾರದಂತೆ ವರ್ತಿಸಿದ್ದ. ಆದರೆ ಕೊನೆಗೆ ಪೊಲೀಸಪ್ಪನನ್ನೇ ಪೊಲೀಸರು ಬಂಧಿಸಿದರು. ಇದರ ಜೊತೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಪರ್ಲಿಯಾ ಇಕ್ಸಾಲ್, ಸಿರಾಜುದ್ದೀನ್ ನಾರ್ಶ, ಅಳಪೆ ಅನ್ಸಾರ್ ನನ್ನು ಬಂಧಿಸಲಾಗಿದೆ. ನಾರ್ಶದ ಸಿರಾಜುದ್ದೀನ್ ಸಿಂಗಾರಿ ಬೀಡಿ ಮಾಲಿಕರೊಂದಿಗೆ ಅತ್ಯಂತ ಆತ್ಮೀಯ ಒಡನಾಟ ಹೊಂದಿದ್ದ. ಮನೆಯ ಲೋಕೇಶನ್, ಇಂಚಿಂಚೂ ಮಾಹಿತಿ ದರೋಡೆ ತಂಡಕ್ಕೆ ನೀಡಿದ್ದ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top