ಸಾಹಿತ್ಯ ಸಂಘ ಉದ್ಘಾಟನೆ
ಕಾರ್ಕಳ: ತನ್ನ ಬದುಕನ್ನು ರೂಪಿಸಿದ್ದು ಹಾಗೂ ಸ್ಮರಣೀಯವಾಗಿಸಿದ್ದು ಭುವನೇಂದ್ರ ಕಾಲೇಜು. ತಾನು ಈ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಕಾರ್ಯದರ್ಶಿಯಾಗಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾ ವಿದ್ಯಾರ್ಥಿ ನಾಯಕರು ಅನುಸರಿಸಬೇಕಾದ ಜವಾಬ್ದಾರಿಯುತ ನಡವಳಿಕೆಗಳ ಬಗೆಗೆ ಮಾಹಿತಿ ನೀಡಿ ವಾತ್ಸಲ್ಯ, ಆದರ, ಕಾಳಜಿ ಮತ್ತು ಪರಹಿತ ಚಿಂತನೆಗಳೊAದಿಗೆ ಆದರ್ಶದ ಮಾದರಿ ಬಾಳ್ವೆಯೊಂದನ್ನು ಸಾಧಿಸಬೇಕೆಂದು ಎರ್ಮಾಳ್ ಮೋಹನ ಶೆಣೈ ಹೇಳಿದರು.
ಅವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಮಂಡಳಿಯ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಮಂಜುನಾಥ ಎ ಕೋಟ್ಯಾನ್ ಮಾತನಾಡಿ, ಕಾಲೇಜು ನಡೆದು ಬಂದ ದಾರಿಯ ವಿವಿಧ ಮಗ್ಗುಲುಗಳನ್ನು ಪರಿಚಯಿಸಿ, ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವಲ್ಲಿ ಕಳೆದ ಆರು ದಶಕಗಳಲ್ಲಿ ಭುವನೇಂದ್ರ ಕಾಲೇಜು ಶ್ರಮಿಸಿದೆ ಎಂದರು. ಶೈಕ್ಷಣಿಕ ವಲಯದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಮೇಶ್ ಎಸ್ ಸಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ದತ್ತಾತ್ರೇಯ ಮಾರ್ಪಳ್ಳಿ, ಸಹಕ್ಷೇಮಪಾಲನಾಧಿಕಾರಿ ಪ್ರೊ ನಂದಕಿಶೋರ್ ಉಪಸ್ಥಿತರಿದ್ದರು. ವಿಯೋಲ ಮತ್ತು ಹ್ಯಾನ್ಸನ್ ವಾಜ್ ಕಾರ್ಯಕ್ರಮ ನಿರೂಪಿಸಿದರು. ಅದಿತಿ ಕಾರಂತ್ ಸ್ವಾಗತಿಸಿ ಶ್ರದ್ಧಾ ವಂದಿಸಿದರು. ಭೂಮಿಕಾ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಪ್ರೊ. ನಂದಕಿಶೋರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.














