ಸಾಹಿತ್ಯ ಮತ್ತು ಸಾಂಸ್ಕೃತಿಕ ಹಬ್ಬಗಳು ದುರ್ಗಾದೇವಿಯ ಆರಾಧನೆಯ ಭಾಗ

Picture of RB NEWS

RB NEWS

Bureau Report

*ವರದಿ: ರಾಯಿ‌ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ಸಾಹಿತ್ಯ ಮತ್ತು ಸಾಂಸ್ಕೃತಿಕ ಹಬ್ಬಗಳು ದುರ್ಗಾದೇವಿಯ ಹತ್ತಿರದಲ್ಲಿರುವ ಒಂದು ಅಂಶ. ಸುಮಾರು ಶೇ 69ರಷ್ಟು ಹೆಣ್ಣು ಮಕ್ಕಳು ನಮ್ಮಲ್ಲಿದ್ದಾರೆ ಹಾಗಾಗಿ ದುರ್ಗಾಪೂಜೆಯು ಅತ್ಯಂತ ಹತ್ತಿರವಾಗಬೇಕಾಗಿದೆ ಎಂದು ಮಂಗಳೂರು ವಿವಿಯ ಕುಲಪತಿ ಡಾ. ಪಿ.ಎಲ್. ಧರ್ಮ ಹೇಳಿದರು.

ಮೂಡುಬಿದಿರೆ ಸಮಾಜ ಮಂದಿರ ಸಭಾ (ರಿ.) ವತಿಯಿಂದ 5 ದಿನಗಳ ಕಾಲ ನಡೆಯುವ’ 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಹೆಣ್ಣಲ್ಲೂ ಪ್ರತಿಭಟನೆಯ ಸಂಗತಿ, ಸೂಚನೆಯನ್ನು ನವದುರ್ಗೆಯರು ತೋರಿಸಿಕೊಡಬೇಕು. ಹೆಣ್ಣು ಮಕ್ಕಳ ಮೇಲಿರುವ ಕ್ರೋಧ, ಅನಾಚಾರ ಇನ್ನೂ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅದನ್ನು ಮೀರಿ ನಡೆಯುವ ದುರ್ಗಾಪೂಜೆಗಳು ಹೆಚ್ಚಾಗಬೇಕು ಇದು ಕೇವಲ ಪೂಜೆಗೆ, ಪ್ರದರ್ಶನಕ್ಕೆ ಮೀಸಲಾಗಿರದೆ ಹೆಣ್ಣು ಮಕ್ಕಳ ರಕ್ಷಣೆಗಾಗಿ, ಅವರ ಹಕ್ಕುಗಳ ಸ್ಥಾಪನೆಗಾಗಿ, ಶಾಂತಿಯುತ ಬದುಕಿನ ಹಕ್ಕುಗಳ ಸ್ಥಾಪನೆಗಾಗಿ ಆಗಬೇಕೆಂಬುದೇ ಸಾಮಾನ್ಯನ ಆಶಯ ಎಂದರು.

ಎಂ.ಸಿ.ಎಸ್. ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ, ಸಹಕಾರಿ ಸಾಧಕ ಚಂದ್ರಶೇಖರ ಎಂ. ಅವರಿಗೆ “ಸಮಾಜ ಮಂದಿರ ಪುರಸ್ಕಾರ 2024” ಪ್ರದಾನ ಮಾಡಲಾಯಿತು.

ಸಮಾಜ ಮಂದಿರ ಸಭಾದ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಡಿ.ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿದ್ದರು.

ಸಮಾಜ ಮಂದಿರ ಸಭಾದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ಪದಕಕ್ಕೆ ಪಡೆದಿರುವ ಮೂಡುಬಿದಿರೆ ಪೊಲೀಸ್‌ ವೃತ್ತ ನಿರೀಕ್ಷಕ ಸಂದೇಶ್ ಅವರನ್ನು ಸಮಾಜ ಮಂದಿರದ ವತಿಯಿಂದ ಗೌರವಿಸಲಾಯಿತು.

ದಸರಾ ಉತ್ಸವದ ಸಂಚಾಲಕ ಪುಂಡಿಕಾಯಿ ಗಣಪಯ್ಯ ಸ್ವಾಗತಿಸಿ ಅಭಿನಂದನಾ ಭಾಷಣಗೈದರು. ಇನ್ನೋರ್ವ ಸಂಚಾರರಎಂ.ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ, ಜಯರಾಯ ಕಂಬ್ಬಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top