ಸಾಲಿಗ್ರಾಮದಲ್ಲಿ ದಲಿತ ಹಕ್ಕುಗಳ ಸಮಿತಿಯಿಂದ ಜನಜಾಗೃತಿ ಸಮಾವೇಶ
ಸಾಲಿಗ್ರಾಮ: ಇಲ್ಲಿನ ಗಣೇಶ ಕೃಪಾ ಸಭಾಭವನದಲ್ಲಿ ದಲಿತ ಹಕ್ಕುಗಳ ಸಮಿತಿ (ಡಿ ಎಚ್ ಎಸ್)ಯ ಬಡಾಹೋಳಿ ಮತ್ತು ಗೆಂಡೆಕೆರೆ ಘಟಕಗಳ ಜಂಟಿ ಸಮಾವೇಶ ಎಪ್ರಿಲ್ 20ರಂದು ನಡೆಯಿತು.
ಡಿ ಎಚ್ ಎಸ್ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ತಾಲೂಕು ಸಹ ಸಂಚಾಲಕರಾದ ರಾಮ ಕಾರ್ಕಡ, ಸಿಐಟಿಯು ಹಿರಿಯ ಮುಖಂಡರಾದ ಬಾಲಕೃಷ್ಣ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಗೆಂಡೆಕೆರೆ ಘಟಕದ ಸಂಚಾಲಕಿ ಸುಧಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಡಾಹೋಳಿ ಘಟಕದ ಮುಖಂಡ ಕೆ. ಬಿ. ಅಣ್ಣಯ್ಯ ಉಪಸ್ಥಿತರಿದ್ದರು.
ದಲಿತ ಹಕ್ಕುಗಳ ಸಮಿತಿಯ ಧ್ಯೇಯೋದ್ಧೇಶಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ, ಇಂದಿನ ಸಾಮಾಜಿಕ ಸ್ಥಿತಿ ಗತಿ, ಸರಕಾರದ ಯೋಜನೆಗಳ ಜ್ಯಾರಿಯಲ್ಲಾಗುತ್ತಿರುವ ಲೋಪಗಳು, ನಿಧಿಗಳ ದುರ್ಬಳಕೆ, ದಲಿತ ದೌರ್ಜನ್ಯಗಳು ಇತ್ಯಾದಿಗಳ ಬಗ್ಗೆ ಸಭೆಯಲ್ಲಿ ಮಾತನಾಡಿದ ಪ್ರಮುಖರು ಮಾಹಿತಿ ನೀಡಿದರು.
ಸಮಾವೇಶದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ವಸತಿ ರಹಿತರ ಮನವಿಯನ್ನು ಮುಂದಿನ ವಾರ ನಿಯೋಗ ದಲ್ಲಿ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಇತ್ಯರ್ಥ ಮಾಡಲು ಒತ್ತಾಯಿಸಲು ಸಭೆ ನಿರ್ಧರಿಸಿತು.
ಸಭೆಯಲ್ಲಿ ಡಿ ಎಚ್ ಎಸ್ ಪ್ರಮುಖ ಕೆ. ಬಿ. ಅಣ್ಣಯ್ಯ, ಶಾರದಾ ಗುಂಡ್ಮಿ ಹಾಗೂ ರವೀಂದ್ರ ಬಡಾಹೋಳಿ ಉಪಸ್ಥಿತರಿದ್ದರು. ಶ್ರೀಮತಿ ಸಾಧು ಪಿ., ನಾಗರಾಜ ಗೆಂಡೆಕೆರೆ, ಐತ, ಪ್ರಕಾಶ ಉಪಸ್ಥಿತರಿದ್ದರು.





































