ಸಾರ್ವಜನಿಕ ಸ್ಥಳದಲ್ಲಿ‌ ಹರಿಬಿಟ್ಟ ಸಮುಚ್ಚಯಗಳ ತ್ಯಾಜ್ಯ ನೀರು!

Picture of RB NEWS

RB NEWS

Bureau Report

ಮೂಡುಬಿದಿರೆ: ಪೊನ್ನೆಚ್ಚಾರಿ ಸೇತುವೆಗೆ ಹಾದು ಹೋಗುವ ಕಾಲುವೆಗೆ ಹತ್ತಿರ ಇರುವ ವಸತಿ ಸಮುಚ್ಚಯಗಳ ಕೊಳಚೆ ನೀರು ಸಾರ್ವಜನಿಕ ಸ್ಥಳದಲ್ಲಿ ಬಿಡುತ್ತಿರವ ಕುರಿತು ಅಕ್ಷೇಪ ವ್ಯಕ್ತಪಡಿಸಿ ಪರಿಸರದ ನಿವಾಸಿಗಳು ಕಳೆದ 2019 ರಿಂದ ಸ್ಥಳೀಯ ತಹಶೀಲ್ದಾರರು ಶಾಸಕರಿಗೆ, ಪುರಸಭೆ ಅಧಿಕಾರಿಗಳಿಗೆ ಹಾಗೂ ಆರೋಗ್ಯ ಇಲಾಖೆ ಗೆ ದೂರು ನೀಡಿದ್ದರೂ ಸಕರಾತ್ಮವಾಗಿ ಸ್ಪಂದಿಸಿದೇ ಹೋದುದರಿಂದ ಸಮಸ್ಸೆ ಮತ್ತಷ್ಟು ಬಿಗಡಾಯಿಸಿದೆ.

4 ಸಂಕೀರ್ಣ ಹೊಂದಿರುವ ವಿಶ್ವಾಸ್ ಪ್ಯಾರಡೈಸ್ ಹಾಗೂ ನಿಸರ್ಗ ಪ್ಯಾಲೇಸ್‌ ತ್ಯಾಜ್ಯ ನೀರು ಪಕ್ಕದ ಕಾಲುವೆಗೆ ಬಿಡಲಾಗುತ್ತಿದೆ. ಇದೇ ಕಾಲುವೆಗೆ ತಾಗಿಕೊಂಡು ಮೂಡುಬಿದಿರೆ ಪುರಸಭೆಯು 3 ಕೊಳವೆ ಬಾವಿಗಳನ್ನು ನಿರ್ಮಿಸಿದ್ದು, ಮೂಡಬಿದಿರೆ ಪೇಟೆ ಮಾಸ್ತಿಕಟ್ಟೆ ಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಪರಿಸರದ ಮನೆಗಳ ಬಾವಿ ನೀರು ಈ ಸಮಸ್ಸೆಯಿಂದ ಕಲುಷಿತಗೊಂಡಿರುವುದರಿಂದ ಕುಡಿಯಲು ಅಯೋಗ್ಯವೆನಿಸಿದೆ.

ತ್ಯಾಜ್ಯ ನೀರು ಕಾಲುವೆಯಲ್ಲಿ ಶೇಖರಣೆ ಗೊಂಡಿರುವುದರಿಂದ ಸೊಳ್ಳೆ ಕಾಟ ಹಾಗೂ ಸಾಂಕ್ರಾಮಿಕ ಕಾಯಿಲೆಯ ಭೀತಿಯಲ್ಲಿ ಪರಿಸರದ ಬದುಕು ಸಾಗಿಸುವಂತಹ ದುಸ್ಥಿತಿ ಎದುರಾಗಿದೆ.

ಮಾಹಿತಿಯ ಪ್ರಕಾರ ಪರಿಸರದ ನಾಗರಿಕರು ಮತ್ತೇ ಮೂಡಬಿದಿರೆ ಪುರಸಭೆ ಆಡಳಿಕಕ್ಕೆ ಮೊರೆಹೋಗಿ ಸಮಸ್ಸೆ ಇತ್ಯರ್ಥ ಪಡಿಸುವಂತೆ ಭಿನ್ನವಿಸಿದ್ದಾರೆ. ಅದರನ್ವಯ ಮೂಡಬಿದಿರೆ ಪುರಸಭೆಯ ಅರೋಗ್ಯ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೊರಟು ಹೋಗಿದ್ದಾರೆ.
ಸಮಸ್ಸೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಈ ಕುರಿತು ಮುಂದಿನ ಕ್ರಮ ಏನೆಂಬುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top